ವಿಜಯನಗರ: ಮುಂಗಾರು ಮಳೆ (Monsoon Rain) ಕೈಕೊಟ್ಟ ಪರಿಣಾಮ ವಿಜಯನಗರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಉದ್ಯೋಗದ ಅಭಾವ ಎದುರಾಗಿದ್ದು, ಜನರು ಗುಳೆ (ವಲಸೆ – Migration) ಹೋಗಲು ಆರಂಭಿಸಿದ್ದಾರೆ.
ಅಗತ್ಯ ಗೃಹೋಪಯೋಗಿ ಸಾಮಗ್ರಿಗಳನ್ನು ತುಂಬಿಕೊಂಡು ಹಲವು ಕುಟುಂಬಗಳು ಕೆಲಸ ಅರಸಿ ಹೊರಟಿವೆ. ಪ್ರತಿ ವರ್ಷವೂ ತಾಲೂಕಿನ ವಿವಿಧ ಗ್ರಾಮಗಳು ಹಾಗೂ ತಾಂಡಾಗಳಿಂದ ಜನರು ಗುಳೆ ಹೋಗುವುದು ಸಾಮಾನ್ಯವಾಗಿದ್ದರೂ, ಈ ಬಾರಿ ಮಳೆ ಕೊರತೆಯಿಂದ ನಿಗದಿತ ಸಮಯಕ್ಕಿಂತ ಮುಂಚೆಯೇ ಜನರ ವಲಸೆ ಆರಂಭವಾಗಿದೆ. ಇದನ್ನೂ ಓದಿ: ಹಾಸನ ಜಿಲ್ಲೆಯ ವಿವಿಧೆ ಭಾರೀ ಗಾಳಿ ಸಹಿತ ಮಳೆ – ಮನೆ ಮೇಲೆ ಬಿದ್ದ ಬೃಹತ್ ಗಾತ್ರದ ಮರ

ಒಂದೆಡೆ ಮಳೆ ಕೊರತೆಯಾಗುದೆ, ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಸ್ಥಳೀಯವಾಗಿ ಕೂಲಿ ಕೆಲಸವೂ ದೊರೆಯುತ್ತಿಲ್ಲ. ಮತ್ತೊಂದೆಡೆ ಉದ್ಯೋಗ ಖಾತ್ರಿ ಕೆಲಸವೂ ಸಮರ್ಪಕವಾಗಿ ಜಾರಿಯಾಗದ ಕಾರಣ ನಿತ್ಯವೂ ಹತ್ತಾರು ಲಾರಿಗಳಲ್ಲಿ ಹಲವು ಕುಟುಂಬಗಳು ಗುಳೆ ಹೊರಡುತ್ತಿವೆ. ಹೀಗಾಗಿ ಜನರು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ, ಕಿಕ್ಕೇರಿ, ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಭಾಗಗಳಿಗೆ ಕಬ್ಬು ಕಟಾವು ಸೇರಿದಂತೆ ಕೃಷಿ ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದಾರೆ.
ಶಾಲೆಗೆ ಹೋಗುವ ಮಕ್ಕಳು, ವೃದ್ಧರನ್ನಷ್ಟೇ ಊರುಗಳಲ್ಲಿ ಬಿಟ್ಟು, ಉಳಿದವರು ಉದ್ಯೋಗ ಅರಸಿ, ಮಂಡ್ಯ, ಮೈಸೂರು, ಬೆಂಗಳೂರು ಹಾಗೂ ಮಹಾರಾಷ್ಟ್ರದ ಕಡೆಗೆ ಉದ್ಯೋಗ ಅರಸಿ ಹೊರಟಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳೋಕೆ ಜನ ಗುಳೆ ಹೊರಡೋದು ಅನಿವಾರ್ಯವಾಗಿದ್ದು, ಊರಿಗೆ ಊರೇ ಬಿಕೋ ಎನ್ನುತ್ತಿದೆ. ಇದನ್ನೂ ಓದಿ: ಮುಂಬೈನಲ್ಲಿ ಮಹಾ ಮಳೆಗೆ ಕುಸಿದ 4 ಅಂತಸ್ತಿನ ಕಟ್ಟಡ – 6 ಮಂದಿ ದುರ್ಮರಣ
ಪ್ರತಿ ವರ್ಷವೂ ನಮ್ಮ ತಾಂಡಾದ ಜನರು ಗುಳೆ ಹೋಗುತ್ತಾರೆ. ಆದರೆ ಈ ಬಾರಿ ಮಳೆ ಅಭಾವದಿಂದ ಇಲ್ಲಿಯೇ ಕೆಲಸವಿಲ್ಲ. ಹೀಗಾಗಿ ಜನರು ಮುಂಚಿತವಾಗಿಯೇ ವಲಸೆ ಹೋಗುತ್ತಿದ್ದಾರೆ. ಮುಂದಿನ ಒಂದು ವಾರದಲ್ಲಿ ಹೆಚ್ಚಿನ ಕುಟುಂಬಗಳು ಗುಳೆ ಹೋಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ಸಂತ್ರಸ್ತ ಕುಟುಂಬಸ್ಥರೊಬ್ಬರು.
