ಬೆಂಗಳೂರು: ಪಬ್ಲಿಕ್ ಟಿವಿಯ ಮೆಗಾ ಪಬ್ಲಿಕ್ ಸರ್ವೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದು ಹರಿದಾಡುತ್ತಿದೆ.
ಮೇ 2ರ ಬುಧವಾರ ಪಬ್ಲಿಕ್ ಟಿವಿ ಕರ್ನಾಟಕ ಚುನಾವಣೆ ಸೆಮಿಫೈನಲ್ ಸಮೀಕ್ಷೆಯನ್ನು ಪ್ರಸಾರ ಮಾಡಿತ್ತು. ಆದರೆ ಈ ಸಮೀಕ್ಷೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ 72-77, ಕಾಂಗ್ರೆಸ್ 75-80, ಜೆಡಿಎಸ್ +ಬಿಎಸ್‍ಪಿ 62-67, ಇತರೇ 3-5 ಸ್ಥಾನ ಗೆದ್ದಿರುವಂತೆ ತೋರಿಸುವ ಸಮೀಕ್ಷಾ ವರದಿಯ ಫೋಟೋವನ್ನು ಜೆಡಿಎಸ್ ಯುವಬ್ರಿಗೇಡ್ ಹೆಸರಿನ ಟ್ವಿಟ್ಟರ್ ಖಾತೆ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಹರಿಯಬಿಟ್ಟಿದ್ದಾರೆ.
Advertisement
ಪಬ್ಲಿಕ್ ಟಿವಿ ಲೆಟರ್ ಹೆಡ್ ನೊಂದಿಗೆ ಈ ಮಾಹಿತಿ ಇರುವ ಕಾರಣ ಈ ಸಮೀಕ್ಷೆಯನ್ನು ನೀವು ಮಾಡಿರುವುದೇ ಎಂಬ ಪ್ರಶ್ನೆ ಶುರುವಾಗಿತ್ತು. ಈ ಫೋಟೋದಲ್ಲಿರುವ ಅಂಕಿ ಸಂಖ್ಯೆಗೂ ಪಬ್ಲಿಕ್ ಟಿವಿಯ ಸಮೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ ಪಬ್ಲಿಕ್ ಟಿವಿಯ ನಕಲಿ ಲೆಟರ್ ಹೆಡ್ ಸೃಷ್ಟಿಸಿ ಈ ಕೃತ್ಯವೆಸಗಲಾಗಿದೆ.
Advertisement
ಈ ಚಿತ್ರದಲ್ಲಿರುವುದು ಪಬ್ಲಿಕ್ ಟಿವಿ ಸಮೀಕ್ಷೆಯಲ್ಲಿ ಪ್ರಕಟವಾದ ಸಮೀಕ್ಷೆಯ ಸಂಖ್ಯೆಗಳಲ್ಲ. ಇದೊಂದು ನಕಲಿ ಸರ್ವೆಯಾಗಿದೆ. ಪಬ್ಲಿಕ್ ಟಿವಿಯ ಹೆಸರು ದುರ್ಬಳಕೆ ಮಾಡಿದ ಹಿನ್ನೆಲೆಯಲ್ಲಿ ಈ ಸಂಬಂಧ ದೂರು ದಾಖಲಿಸಲು ಪಬ್ಲಿಕ್ ಟಿವಿಯ ಆಡಳಿತ ವರ್ಗ ನಿರ್ಧರಿಸಿದೆ.
Advertisement
ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಪ್ರಾಂತ್ಯವಾರು ಸಮೀಕ್ಷೆಯ ಸುದ್ದಿ ಓದಲು ಕ್ಲಿಕ್ ಮಾಡಿ: ಪಬ್ಲಿಕ್ ಟಿವಿ ಸಮೀಕ್ಷೆ- ಸೆಮಿ ಫೈನಲ್
Advertisement