ರಾಮನಗರ: ಹಿಂದೂಗಳನ್ನು ನಾಶ ಮಾಡುವ ಪ್ರಯತ್ನ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದು ಆರ್‌ಎಸ್ಎಸ್ (RSS) ಮುಖಂಡ ಕಲ್ಲಡ್ಕ ಪ್ರಭಾಕರ್ (Kalladka Prabhakar Bhat) ಕಳವಳ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ (Mangaluru) ನಡೆದ ಕುಕ್ಕರ್ ಬ್ಲ್ಯಾಸ್ಟ್ (Cooker Blast) ವಿಚಾರ ಕುರಿತು ಮಾತನಾಡಿದ ಅವರು, ಇಂತಹ ಕೃತ್ಯಗಳನ್ನ ತಡೆಯದಿದ್ದರೆ ಸಮಾಜದಲ್ಲಿ ಬದುಕು ಕಷ್ಟವಾಗಲಿದೆ. ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರಾಗಿದ್ದಾರೆ. ಅಬ್ದುಲ್ ಕಲಾಂ ನಂತವರನ್ನು ಇವರು ಆದರ್ಶವಾಗಿಟ್ಟುಕೊಂಡಿಲ್ಲ. ಸಮಾಜದಲ್ಲಿ ಒಳ್ಳೆಯ ಮುಸ್ಲಿಂಮರು ಸಹ ಇದ್ದಾರೆ. ಇಂತಹ ಕೃತ್ಯಗಳ ಬಗ್ಗೆ ಅವರು ಜಾಗೃತಿ ಮೂಡಿಸಬೇಕು. ಆಗ ದೇಶ, ಈ ಸಮಾಜ ಉಳಿಯುತ್ತದೆ ಎಂದರು. ಇದನ್ನೂ ಓದಿ: ಕುಕ್ಕರ್ ಬಾಂಬರ್ ಶಾರೀಕ್ ಗುಣಮುಖನಾಗಲು 25 ದಿನ ಬೇಕು
Advertisement
Advertisement
ಹಿಂದೂ ಸಮಾಜ ಕೂಡಾ ಎಚ್ಚರಿಕೆಯಿಂದ ಇರಬೇಕು. ಪೊಲೀಸ್ ಇಲಾಖೆ ಇಂತಹ ಪ್ರಕರಣಗಳ ಗಂಭೀರತೆ ಅರಿತು ಕೆಲಸ ಮಾಡಬೇಕು. ಇದಕ್ಕಾಗಿಯೇ ಒಂದು ಸೆಕ್ಷನ್ ಕೆಲಸ ಮಾಡಬೇಕು. ದೇಶಾದ್ಯಂತ ಇಂತಹ ಹಲವು ಭಯೋತ್ಪಾದಕ ಜಾಲಗಳಿವೆ. ಪ್ರವೀಣ್ ನೆಟ್ಟಾರು, ಹರ್ಷ ಸೇರಿ ಹಲವರ ಸರಣಿ ಹತ್ಯೆಯಾಗಿದೆ. ಹಾಗಾಗಿ ಮಂಗಳೂರಿನಲ್ಲಿ ಎನ್ಐಎ ಕಚೇರಿ ತೆರೆಯಬೇಕಿದೆ. ಇನ್ನು ಮುಂದೆ ಇಂತಹ ಘಟನೆಗಳಿಗೆ ಕುಮ್ಮಕ್ಕು ನೀಡುವ ಎಸ್‌ಡಿಪಿಐ ಸಂಘಟನೆ ಬ್ಯಾನ್ ಮಾಡುವ ಕುರಿತು ರಾಜಕೀಯ ಪಕ್ಷಗಳು ತೀರ್ಮಾನ ಮಾಡಬೇಕು. ರಾಜಕೀಯ ಕಾರಣದಿಂದ ಇಂತಹ ಸಂಘಟನೆಗೆ ಪ್ರೋತ್ಸಾಹ ನೀಡೋದು ತಪ್ಪು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್ – ತಮಿಳುನಾಡು, ಕೇರಳದಲ್ಲೂ ತನಿಖೆ ಚುರುಕು : ಪ್ರವೀಣ್ ಸೂದ್