ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿದ್ದಾರೆ. ಹಿರಿಯರು ಹೇಗೋ ಮನೆಯಲ್ಲಿ ಟೈಂ ಪಾಸ್ ಮಾಡುತ್ತಾರೆ. ಆದರೆ ಈಗ ಮಕ್ಕಳು ಕೂಡ ಮನೆಯಲ್ಲಿರುವುದರಿಂದ ಸಂಜೆ ಏನಾದ್ರೂ ಸ್ನಾಕ್ಸ್ ಬೇಕೇ ಬೇಕು ಎಂದು ಕೇಳುತ್ತಾರೆ. ಆದ್ದರಿಂದ ನಿಮಗಾಗಿ ಖಾರ ಕಡ್ಲೆಬೀಜ ಮಾಡುವ ವಿಧಾನ ಇಲ್ಲಿದೆ…
ಬೇಕಾಗುವ ಸಾಮಗ್ರಿಗಳು
1. ಕಡ್ಲೆಬೀಜ – 1/4 ಕೆಜಿ
2. ಕಡಲೆಹಿಟ್ಟು – 100 ಗ್ರಾಂ
3. ಖಾರದ ಪುಡಿ – ರುಚಿಗೆ ತಕ್ಕಷ್ಟು
4. ಉಪ್ಪು – ರುಚಿಗೆ ತಕ್ಕಷ್ಟು
5. ಅರಿಶಿನ ಪುಡಿ – ಚಿಟಿಕೆ
6. ಎಣ್ಣೆ – ಕರಿಯಲು
Advertisement
Advertisement
ಮಾಡುವ ವಿಧಾನ
* ಒಂದು ಮಿಕ್ಸಿಂಗ್ ಬೌಲ್‍ಗೆ ಕಡಲೆಹಿಟ್ಟು, ಖಾರದ ಪುಡಿ, ಉಪ್ಪು, ಅರಿಶಿಣ, ನೀರು ಸೇರಿಸಿ ಬೋಂಡ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳಿ.
* ಈಗ ಕಡ್ಲೆಬೀಜವನ್ನು ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಮಿಶ್ರಣ ಚೆನ್ನಾಗಿ ಮಿಕ್ಸ್ ಆಗಲು 15-20 ನಿಮಿಷಗಳ ಕಾಲ ನೆನೆಯಲು ಬಿಡಿ.
* ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ
* ಎಣ್ಣೆ ಕಾದ ಮೇಲೆ ಮಿಶ್ರಣದಲ್ಲಿದ್ದ ಕಡ್ಲೆಬೀಜವನ್ನು ಕೈಯಲ್ಲಿ ಎತ್ತಿಕೊಂಡು ಬಿಡಿಬಿಡಿಯಾಗಿ ಪಕೋಡ ಮಾಡುವ ರೀತಿ ಬಿಡಿ.
* ಚೆನ್ನಾಗಿ ಕಡ್ಲೆಬೀಜ ಫ್ರೈ ಮಾಡಿದರೆ ಖಾರ ಕಡ್ಲೆಬೀಜ ಸವಿಯಲು ಸಿದ್ಧ.