ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ (B.K. Hariprasad) ಹಾಗೂ ಗೃಹಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಮಾತನಾಡುವುದನ್ನು ನೋಡಿದ್ರೇ ಹಿರಣ್ಯಕಶ್ಯಪುವಿಗಾದ ಶಿಕ್ಷೆ ಅವರಿಗೆ ಆಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (K.S. Eshwarappa) ಎಚ್ಚರಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನಮಗೆ ಆರ್‌ಎಸ್‌ಎಸ್ (RSS) ಎಂದು ಹೇಳಿಕೊಳ್ಳಲು ಭಯವಿಲ್ಲ. ನೋಂದಣಿ ಮಾಡಿಸುವುದು ಬಿಡುವುದು ಸಂಸ್ಥೆಯ ಇಷ್ಟ. ಗೃಹಮಂತ್ರಿಗಳು, ನಾನು ಪ್ರಶ್ನೆ ಕೇಳುತ್ತಿದ್ದೇನೆ. ಮೋಹನ್ ಭಾಗವತ್ ಉತ್ತರಿಸಲಿ ಎನ್ನುತ್ತಿದ್ದಾರೆ. ಅಂಬೇಡ್ಕರ್ ಸಂವಿಧಾನದ ಅರಿವಿಲ್ಲದ ಗೃಹಮಂತ್ರಿಯನ್ನು ನಾವು ಪಡೆದಿದ್ದೇವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್‌ನವ್ರು ಪುಕ್ಕಲರು, ಅವರಿಗೆ ಧೈರ್ಯ ಇಲ್ಲ: ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
ಪತ್ರಿಕೆ, ಟಿವಿ ಪ್ರಚಾರಕ್ಕೆ ಪಕ್ಷದ ವರಿಷ್ಠರನ್ನು ಮೆಚ್ಚಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನದ ಬಗ್ಗೆ ಹಿರಿಯ ವಕೀಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಾರೆ. ರೌಡಿಗಳು ಈ ರೀತಿ ಮಾತನಾಡಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿ.ಕೆ.ಹರಿಪ್ರಸಾದ್ ಸಹ ದಾರಿ ತಪ್ಪುತ್ತಿದ್ದಾರೆ. ಹಿಂದೂ ರಾಷ್ಟ್ರವಾಗಲು ಬಿಡಲ್ಲ ಎಂದು ಭಾಷಣದಲ್ಲಿ ಹೇಳಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸೋಲಿಗೆ ಇದೇ ಕಾರಣ. ಮುಂಬರುವ ಚುನಾವಣೆಯಲ್ಲೂ ಇದೇ ಮಾತನಾಡಿದರೆ ನಿಮ್ಮ ಪಕ್ಷ ಸೋಲುತ್ತದೆ. ಆರ್‌ಎಸ್‌ಎಸ್‌ಗೆ ಬೈದು ಪ್ರಿಯಾಂಕ್ ಖರ್ಗೆ, ಯತೀಂದ್ರ ಮಂತ್ರಿಗಳಾದರು ಎಂದು ಲೇವಡಿ ಮಾಡಿದ್ದಾರೆ.
ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ನಗರ ನಕ್ಸಲ್‌ರಂತೆ ಮಾತನಾಡುತ್ತಿದ್ದಾರೆ. ಇವರು ಮಾತನಾಡುವುದನ್ನು ನೋಡಿದ್ರೇ ಹಿರಣ್ಯಕಶಿಪುವಿಗೆ ಆದ ಶಿಕ್ಷೆ ಅವರಿಗೆ ಆಗುತ್ತದೆ. ರಾಜ್ಯದಲ್ಲಿ ಕೊಲೆ, ಸುಲಿಗೆ, ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಇದನ್ನು ನಿರ್ಮೂಲನೆ ಮಾಡುವ ಬದಲು ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ, ಯತೀಂದ್ರ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಧರ್ಮಸಿಂಗ್ ಮಗನನ್ನು ಯಾಕೇ ಮಂತ್ರಿ ಮಾಡಲಿಲ್ಲ? ಆಎಸ್‌ಎಸ್‌ಗೆ ಬಗ್ಗೆ ಮಾತನಾಡದೇ ಇರುವುದಕ್ಕಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ದುರಾಡಳಿತದಿಂದ ಬೆಂಗಳೂರು ಜನರು ನಲುಗಿ ಹೋಗಿದ್ದಾರೆ: ಹೆಚ್‌ಡಿಕೆ ಕಿಡಿ
