– ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಎಂದ ಜಾರ್ಜ್
– ಶಕ್ತಿ ಯೋಜನೆಗೂ ಕಾರ್ಡ್ ಕೊಡುವ ಬಗ್ಗೆ ಚಿಂತನೆ
ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಆಯ್ತು, ಈಗ ಗೃಹಜ್ಯೋತಿ ಯೋಜನೆ (Gruha Jyothi Scheme) ಪರಿಷ್ಕರಣೆ ಫಿಕ್ಸ್ ಎನ್ನಲಾಗುತ್ತಿದೆ. ಗೃಹಜ್ಯೋತಿ ಪರಿಷ್ಕರಣೆ ಅಂತಿಮ ಹಂತಕ್ಕೆ ಬಂದು ತಲುಪಿದೆ. ಸರ್ಕಾರಿ ಉದ್ಯೋಗಿಗಳು, ಐಟಿ ಪಾವತಿದಾರರಿಗೆ, ಎಪಿಎಲ್ ಕಾರ್ಡ್ದಾರರಿಗೆ ಗೃಹಜ್ಯೋತಿ ಸೌಲಭ್ಯ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಸರ್ಕಾರ ನಿರ್ಧಾರ ಪ್ರಕಟಿಸಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ (KJ George) ಹೇಳಿದ್ದಾರೆ.
ಸದ್ಯ ನಾವೀಗ ಪರಿಷ್ಕರಣೆ ಮಾಡುತ್ತಿಲ್ಲ, ಮಾಹಿತಿ ತೆಗೆದುಕೊಳ್ಳುತ್ತಿದ್ದೇವೆ. ಇನ್ನೊಂದು ತಿಂಗಳ ಒಳಗೆ ಮಾಹಿತಿ ಸಂಗ್ರಹ ಮುಗಿಯಲಿದೆ. ಸರ್ಕಾರಿ ಉದ್ಯೋಗಿಗಳಿಗೂ, ಐಟಿ ಪಾವತಿದಾರರಿಗೂ ಗೃಹಜ್ಯೋತಿ ಸೌಲಭ್ಯ ಕೊಡಲಾಗುತ್ತಿದೆ. ಮಾಹಿತಿ ಸಂಗ್ರಹದ ಬಳಿಕ ಸೌಲಭ್ಯ ಕಟ್ ಮಾಡುವ ನಿರ್ಧಾರ ಸರ್ಕಾರ ಮಾಡಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನಾನು ಏಟು ತಿಂದ ಹುಲಿ, ರಾಜ್ಯ ಮೆಚ್ಚುವಂತಹ ಕೆಲಸ ಮಾಡ್ತೀನಿ: ನಾಗೇಂದ್ರ
ಇನ್ನು ಗ್ಯಾರಂಟಿ ಸೋರಿಕೆ ತಡೆಗಟ್ಟಲು ಶಕ್ತಿಯೋಜನೆಗೂ (Shakti Scheme) ಕಾರ್ಡ್ ಕೊಡುತ್ತೇವೆ. ಅರ್ಹರು ಯೋಜನೆ ಪಡೆಯಲಿ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಇದನ್ನೂ ಓದಿ: ಆ.14ರಂದು ಸ್ಪೀಕರ್, ಸಭಾಪತಿ ಸ್ಥಾನಗಳಿಗೆ ಚುನಾವಣೆ

