ಕೊಪ್ಪಳ: ನಾನು ಏಟು ತಿಂದ ಹುಲಿ, ರಾಜ್ಯ ಮೆಚ್ಚುವಂತಹ ಕೆಲಸ ಮಾಡುತ್ತೇನೆ ನೋಡುತ್ತಿರಿ ಎಂದು ಸಚಿವ ಬಿ.ನಾಗೇಂದ್ರ (B Nagendra) ಬಿಜೆಪಿಗೆ (BJP) ತಿರುಗೇಟು ನೀಡಿದ್ದಾರೆ.
ನಾಗೇಂದ್ರ ರಾಜೀನಾಮೆ ನೀಡದಿದ್ದರೆ ಸದನ (Session) ನಡೆಯಲು ಬಿಡುವುದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದುಳಿದವರು ಹಾಗೂ ದಲಿತರು ರಾಜಕೀಯವಾಗಿ ಬೆಳೆಯುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ತುಳಿಯುವ ಉದ್ದೇಶದಿಂದಲೇ ತಮ್ಮ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ. ದಲಿತರು, ಹಿಂದುಳಿದವರು ಬೆಳೆಯಬಾರದು ಎಂಬ ಮನಸ್ಥಿತಿಯಿಂದ ಬಿಜೆಪಿ ನಾಯಕರು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ದಿಟ್ಟ ಉತ್ತರ ನೀಡಲು ನಾವು ಸದನದಲ್ಲಿ ಸಿದ್ಧರಿದ್ದೇವೆ ಎಂದರು. ಇದನ್ನೂ ಓದಿ: ಆ.14ರಂದು ಸ್ಪೀಕರ್, ಸಭಾಪತಿ ಸ್ಥಾನಗಳಿಗೆ ಚುನಾವಣೆ
ಮುಖ್ಯಮಂತ್ರಿ ಈಗಾಗಲೇ ಈ ವಿಚಾರಕ್ಕೆ ಉತ್ತರ ನೀಡಿದ್ದಾರೆ. ವಿರೋಧ ಪಕ್ಷದವರು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಲಿ ಅದಕ್ಕೆ ನಾವು ಹಾಗೂ ಸಚಿವ ಸಂಪುಟದ ಎಲ್ಲರೂ ಸೂಕ್ತ ಉತ್ತರ ನೀಡುತ್ತೇವೆ. ಇನ್ನೂ ವಾಲ್ಮೀಕಿ ನಿಗಮದ ಹಣದ ಅಕ್ರಮ ಪ್ರಕರಣದ ಕುರಿತು ಮಾತನಾಡಿದ ಸಚಿವರು, ಹಗರಣದಲ್ಲಿ ಹೋಗಿರುವ ಹಣವನ್ನು ವಾಪಸ್ ತರಿಸುವ ಪ್ರಯತ್ನ ನಡೆಯುತ್ತಿದೆ. ಹಣ ಯಾವ ರೀತಿ ಪೋಲಾಗಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ತಾವು ನಿರಪರಾಧಿಯಾಗಿ ಹೊರಬರುವ ವಿಶ್ವಾಸವಿದೆ ಎಂದು ಹೇಳಿದರು. ಇದನ್ನೂ ಓದಿ: ‘ವಂದೇ ಮಾತರಂ’ಗೆ ಅಪಮಾನ ಮಾಡಿದ್ರೆ ಶಿಕ್ಷೆ ವಿಧಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ
ನಾನು ಪ್ರಕರಣದಲ್ಲಿ ಆರೋಪಿ, ಅಪರಾಧಿ ಅಲ್ಲ. ತಪ್ಪಿತಸ್ಥನಲ್ಲ. ನ್ಯಾಯಾಲಯದಿಂದ ಮುಕ್ತವಾಗಿ ಹೊರಬರುತ್ತೇನೆ ಎಂಬ ನಂಬಿಕೆ ಇದೆ. ರಾಜ್ಯದಿಂದ ಹೊರಗೆ ತೆರಳಿದ ಸಂದರ್ಭದಲ್ಲೆಲ್ಲ ನಿಯಮಾನುಸಾರ ಅನುಮತಿ ಪಡೆದೇ ಹೋಗಿದ್ದೇನೆ. ಯಾವುದೇ ನಿಯಮ ಉಲ್ಲಂಘಿಸಿಲ್ಲ. ಈ ಪ್ರಕರಣದಲ್ಲಿ ನ್ಯಾಯಾಲಯವೂ ತಡೆಯಾಜ್ಞೆ ನೀಡಿದೆ. ಬಿಜೆಪಿ ನಾಯಕರಿಗೆ ಈ ವಿಚಾರ ತಿಳಿದಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಮಹಿಳೆ ಅನುಮಾನಾಸ್ಪದ ಸಾವು – ಗಂಡನ ಮನೆಯ ಮುಂದೆ ಶವವಿಟ್ಟು ಪ್ರತಿಭಟನೆ

