CricketLatestLeading NewsMain PostSports

ನಾಳೆಯಿಂದ ಭಾರತ – ಇಂಗ್ಲೆಂಡ್ ಹೈವೋಲ್ಟೇಜ್ ಟೆಸ್ಟ್ ಕ್ರಿಕೆಟ್: ಬುಮ್ರಾಗೆ ನಾಯಕನ ಪಟ್ಟ

Advertisements

ಲಂಡನ್: ಬಹುನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಜುಲೈ 1ರಿಂದ ಆರಂಭವಾಗಲಿದೆ.

15 ವರ್ಷಗಳ ಬಳಿಕ ಇಂಗ್ಲೆಂಡ್ ತವರಿನಲ್ಲೇ ಟೆಸ್ಟ್ ಸರಣಿ ಗೆಲ್ಲುವ ಕಾತರದಲ್ಲಿ ಟೀಂ ಇಂಡಿಯಾ ಸಜ್ಜಾಗಿದೆ. ಹೈವೋಲ್ವೇಜ್ ಪಂದ್ಯಕ್ಕೆ ಈಗಾಗಲೇ ದೀರ್ಘ ಅಭ್ಯಾಸದಲ್ಲಿ ನಿರತರಾಗಿರುವ ಭಾರತೀಯ ಆಟಗಾರರು ಇಂಗ್ಲೆಂಡ್ ತವರಲ್ಲೇ ಬಗ್ಗುಬಡಿದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.

ಇಂಗ್ಲೆಂಡ್‌ನಲ್ಲಿ 1971ರಲ್ಲಿ ಮೊದಲ ಬಾರಿ ಟೆಸ್ಟ್ ಸರಣಿ ಗೆದ್ದಿದ್ದ ಭಾರತಕ್ಕೆ 2ನೇ ಟೆಸ್ಟ್ ಸರಣಿ ಜಯ ಒಲಿದಿದ್ದು 1986ರಲ್ಲಿ. ಬಳಿಕ 2007ರಲ್ಲಿ ಪಟೌಡಿ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ನಲ್ಲಿ ಕೊನೆ ಬಾರಿ ಭಾರತ ಸರಣಿ ಗೆದ್ದಿತ್ತು. 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಗೆದ್ದಿದ್ದ ಟೀಂ ಇಂಡಿಯಾ, ಬಳಿಕ 3 ಬಾರಿ (2011, 2014 ಹಾಗೂ 2018) ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಆಡಿದ್ದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ರ್‍ಯಾಂಕಿಂಗ್‌ನಲ್ಲಿ ಕೊಹ್ಲಿಯ ಅಪರೂಪದ ವಿಶ್ವ ದಾಖಲೆ ಮುರಿದ ಬಾಬರ್ ಅಜಮ್

ಆ ಬಳಿಕ ಕಳೆದ ವರ್ಷ ಆಗಸ್ಟ್ನಲ್ಲಿ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ 5 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಂಡಿತ್ತು. ಸರಣಿಯಲ್ಲಿ ನಡೆದಿದ್ದ 4 ಪಂದ್ಯಗಳಲ್ಲಿ ಪ್ರವಾಸಿ ಭಾರತ 2-1 ರಿಂದ ಮುಂದಿದ್ದರೂ ಕೊನೆ ಟೆಸ್ಟ್ ಪಂದ್ಯ ನಡೆಯದಿದ್ದರಿಂದ ಸರಣಿ ಭಾರತಕ್ಕೆ ಒಲಿಯುವುದು ಕೈತಪ್ಪಿತು. ಇದೀಗ ಮತ್ತೆ ಮರು ನಿಗದಿಯಾಗಿರುವ ಟೆಸ್ಟ್ ಸರಣಿ ಜುಲೈ 1ರಿಂದ ಆರಂಭವಾಗಲಿದೆ.

ಬುಮ್ರಾಗೆ ನಾಯಕನ ಪಟ್ಟ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದು, ಯುವ ವೇಗಿ ಜಸ್ಪ್ರಿತ್‌ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ.

35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬೌಲರ್ ಒಬ್ಬರು ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಲಾದ 5ನೇ ಟೆಸ್ಟ್‌ನಲ್ಲಿ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸಲು ಬುಮ್ರಾ ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಚೊಚ್ಚಲ ಶತಕದೊಂದಿಗೆ ಮಿಂಚಿದ ದೀಪಕ್‌ ಹೂಡಾ – ಐರ್ಲೆಂಡ್‌ ವಿರುದ್ಧ ಭಾರತಕ್ಕೆ 4 ರನ್‌ಗಳ ರೋಚಕ‌ ಜಯ

1987ರಲ್ಲಿ ಕಪಿಲ್ ದೇವ್ ಅವರು ಟೀಂ ಇಂಡಿಯಾವನ್ನು ಕೊನೆಯ ಬಾರಿಗೆ ಮುನ್ನಡೆಸಿದ್ದ ಬೌಲರ್ ಆಗಿದ್ದರು. ಜುಲೈ 1ರಿಂದ ಪ್ರಾರಂಭವಾಗುವ ಈ ಟೆಸ್ಟ್ ಪಂದ್ಯದಿಂದ ರೋಹಿತ್ ಹೊರಗುಳಿದಿದ್ದಾರೆ. ಕಾರಣ ಅವರ RTPCR ಪರೀಕ್ಷೆಯು ಮತ್ತೊಮ್ಮೆ ಪಾಸಿಟಿವ್ ಬಂದಿದ್ದು, ಅವರನ್ನು ಐಸೋಲೇಟ್ ಮಾಡಲಾಗಿದೆ. ಕೆ.ಎಲ್‌.ರಾಹುಲ್ ಅನುಪಸ್ಥಿತಿಯಲ್ಲಿ ಉಪನಾಯಕರಲ್ಲಿ ಒಬ್ಬರಾಗಿರುವ ಜಸ್ಪ್ರಿತ್‌ ಬುಮ್ರಾ ತಮ್ಮ ನಾಯಕತ್ವದಲ್ಲಿ ಮುನ್ನಡೆಸಲಿದ್ದಾರೆ.

Live Tv

Leave a Reply

Your email address will not be published.

Back to top button