ದುಬೈ: ಟಿ20 ವಿಶ್ವಕಪ್ ಆರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳೆಲ್ಲರೂ ಭಾರತ ಹಾಗೂ ಪಾಕಿಸ್ತಾನ ಕಾದಾಟಕ್ಕಾಗಿ ಕಾಯುತ್ತಿದ್ದಾರೆ. ಇದೇ 24ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರು ಬದರಾಗಲಿದೆ. ಈ ಮೊದಲು 2007ರ ಟಿ20 ವಿಶ್ವಕಪ್‍ನಲ್ಲಿ ಭಾರತ ತಂಡ ಬಾಲ್‍ಔಟ್ ಮೂಲಕ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು. ಈ ಪಂದ್ಯದ ಹಿನ್ನೋಟ ಮತ್ತೊಮ್ಮೆ ತಿರುವಿ ನೋಡೋಣ.
Advertisement
2007ರ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎದುರಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 141 ರನ್ ಮಾಡಿತು. 142 ರನ್‍ಗಳ ಟಾರ್ಗೆಟ್‍ನೊಂದಿಗೆ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಕೂಡ ನಿಗದಿತ ಓವರ್ ಅಂತ್ಯಕ್ಕೆ 141 ರನ್ ಮಾಡಿ ಪಂದ್ಯ ಟೈ ಆಯಿತು. ಈ ಸಂದರ್ಭ ಟಿ20 ವಿಶ್ವಕಪ್‍ನಲ್ಲಿ ಬಾಲ್ ಔಟ್ ನಿಯಮವಿತ್ತು. ಯಾರು ಹೆಚ್ಚು ಬಾಲ್‍ಔಟ್ ಮಾಡುತ್ತಾರೆ ಆ ತಂಡ ವಿಜಯಿ ಎಂದು ನಿರ್ಧರಿಸಲಾಗಿತ್ತು. ಇದನ್ನೂ ಓದಿ: ಟಿ20 ವಿಶ್ವಕಪ್ – ಕರ್ಟಿಸ್ ಕ್ಯಾಂಫರ್ ಹ್ಯಾಟ್ರಿಕ್ ವಿಕೆಟ್ ಸಾಧನೆ
Advertisement
Advertisement
2007ರ ಹೊತ್ತಲ್ಲಿ ಭಾರತದ ಯುವ ನಾಯಕ ಮಹೇಂದ್ರ ಸಿಂಗ್ ಯುಗ ಆರಂಭದ ದಿನಗಳದು. ಧೋನಿ ಆ ವಿಶ್ವಕಪ್‍ನಿಂದಲೇ ತನ್ನ ವಿಭಿನ್ನ ನಿರ್ಧರಕ್ಕೆ ಸಾಕ್ಷಿಯಾಗಿದ್ದರು. ಬಾಲ್‍ಔಟ್ ಗಾಗಿ ಭಾರತ ತಂಡದಿಂದ 5 ಜನ ಆಟಗಾರರು ಮತ್ತು ಪಾಕಿಸ್ತಾನ ತಂಡದಿಂದ 5 ಜನ ಆಟಗಾರರು ನಿಗದಿಯಾಗಿತ್ತು. ಭಾರತ ಪರ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ರಾಬಿನ್ ಉತ್ತಪ್ಪ, ಶ್ರೀಶಾಂತ್ ಮತ್ತು ಇರ್ಫಾನ್ ಪಠಾಣ್ ಅವರ ಹೆಸರನ್ನು ಧೋನಿ ಆಯ್ಕೆ ಮಾಡಿದ್ದರು. ಪಾಕಿಸ್ತಾನ ಪರ ಯಾಸಿರ್ ಅರಾಫತ್, ಉಮರ್ ಗುಲ್, ಸುಹೈಲ್ ತನ್‍ವೀರ್, ಆಸಿಫ್ ಮತ್ತು ಶಾಹೀದ್ ಅಫ್ರಿದಿ ಇದ್ದರು. ಇದನ್ನೂ ಓದಿ: ಟೀಂ ಇಂಡಿಯಾಗೆ ಕ್ಲಾಸ್ ಆರಂಭಿಸಿದ ಧೋನಿ – ವಿಶ್ವಕಪ್‍ಗಾಗಿ ಭರ್ಜರಿ ತಯಾರಿ
Advertisement
ಬಾಲ್‍ಔಟ್ ಆರಂಭವಾಯಿತು. ಭಾರತದ ಪರ ಮೊದಲು ಬಾಲ್ ಮಾಡಿದ ಸೆಹ್ವಾಗ್ ವಿಕೆಟ್‍ಗೆ ಬಾಲ್ ಮಾಡಿದರು. ನಂತರ ಪಾಕಿಸ್ತಾನ ಪರ ಬಾಲ್ ಎಸೆಯಲು ಬಂದ ಅರಾಫತ್ ವಿಕೆಟ್‍ಗೆ ಎಸೆಯಲು ವಿಫಲರಾದರು. ಆಗ ಭಾರತ 1-0 ಮುನ್ನಡೆ ಪಡೆಯಿತು. ನಂತರ ಹರ್ಭಜನ್ ಬಾಲ್‍ಔಟ್‍ಗೆ ಬಂದು ವಿಕೆಟ್ ಕಿತ್ತು ಮಿಂಚಿದರು. ಆ ಬಳಿಕ ಪಾಕ್ ಪರ ಬೌಲಿಂಗ್ ಮಾಡಿದ ಉಮರ್ ಗುಲ್ ಕೂಡ ವಿಕೆಟ್‍ಗೆ ಎಸೆಯಲು ವಿಫಲರಾದರು. ಇದರೊಂದಿಗೆ ಭಾರತ ತಂಡ 2-0 ಮುನ್ನಡೆ ಪಡೆದುಕೊಂಡಿತು. ನಂತರ ಮೂರನೇಯವರಾಗಿ ಭಾರತದ ಪರ ಉತ್ತಪ್ಪ ಬೌಲಿಂಗ್ ಮಾಡಿ ವಿಕೆಟ್ ಚದುರಿಸಿದರು. ಪಾಕ್ ಪರ ಮೂರನೇ ಅವರಾಗಿ ಬಾಲ್ ಎಸೆದ ಅಫ್ರಿದಿ ಕೂಡ ಯಶಸ್ಸು ಕಾಣದೆ ಭಾರತ 3-0 ಬಾಲ್‍ಔಟ್ ಮೂಲಕ ಗೆದ್ದು ಬೀಗಿತ್ತು. ಈ ಪಂದ್ಯ ಕ್ರಿಕೆಟ್ ಪ್ರಿಯರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ.