ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷದ ಶಾಸಕರೂ ಪರ್ಸೆಂಟೇಜ್‌ಗೆ ಇಳಿದಿದ್ದಾರೆ. ಅವರಿಗೆ ಪರ್ಸೆಂಟೇಜ್ ಕೊಡದೇ ಇದ್ದರೆ ಗುದ್ದಲಿ ಪೂಜೆನೂ ಮಾಡೋದಿಲ್ಲ ಎಂದು ಗುತ್ತಿಗೆದಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಣ್ಣ ಶೇಗಜಿ ದೂರಿದ್ದಾರೆ.
ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಬಿಜೆಪಿ ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಕಳಂಕ ತರುತ್ತಿದ್ದಾರೆ. ರಾಜ್ಯದಲ್ಲಿ 22 ಸಾವಿರ ಕೋಟಿ ರೂ. ಗುತ್ತಿಗೆದಾರರ ಬಿಲ್ ಬಾಕಿಯಿತ್ತು. ಬಜೆಟ್ ಅನುದಾನದಲ್ಲಿ 6 ಸಾವಿರ ಕೋಟಿ ರೂ. ಮಾತ್ರ ನೀಡಿದ್ದಾರೆ. ಇನ್ನೂ 18 ಸಾವಿರ ಕೋಟಿ ರೂ. ಬಿಲ್ ಬಾಕಿಯಿದೆ. ಆದರೂ ಟೆಂಡರ್ ಕರೆಯುತ್ತಲೇ ಇರುವುದೇಕೆ? ಮೊದಲು ಅನುದಾನ ಕೊಡಲಿ ಎಂದು ನಾವು ಎಷ್ಟೇ ಮನವಿ ಮಾಡಿದರೂ ಮುಖ್ಯಮಂತ್ರಿಗಳೂ ಮಾನ್ಯತೆ ಕೊಡುತ್ತಿಲ್ಲ. ಆದ್ದರಿಂದ ಗುತ್ತಿಗೆದಾರರು ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷಕ್ಕೆ ಮುಜುಗರ ತರಿಸಲ್ಲ, ರಾಜೀನಾಮೆ ಕೊಡ್ತೀನಿ: ಈಶ್ವರಪ್ಪ
Advertisement
Advertisement
ಯಾವುದೇ ಗುತ್ತಿಗೆ ಪಡೆದರೂ ಶಾಸಕರಿಗೆ 10 ಪರ್ಸೆಂಟ್ ಕಮಿಷನ್ ಕೊಡಬೇಕಾಗಿದೆ. ಮುಖ್ಯ ಎಂಜಿನಿಯರ್, ಶಾಸಕರು, ಸಚಿವರು, ಕಡತಕ್ಕೆ ಅನುಮೋದನೆ ಕೊಡಿಸುವ ಅಧಿಕಾರಿಗಳು ಹೀಗೆ ಎಲ್ಲ ಹಂತದ ಅಧಿಕಾರಿಗಳವರೆಗೆ 30 ರಿಂದ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗಿದೆ. ಡಾಂಬರು, ಸೀಮೆಂಟ್ ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿರುವಾಗ ಕಮಿಷನ್ ಕೊಟ್ಟು ಗುಣಮಟ್ಟದ ಕಾಮಗಾರಿ ಮಾಡುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮುಖಾಮುಖಿ ಭೇಟಿಯಾದ ನಂತರವಷ್ಟೇ ಈಶ್ವರಪ್ಪ ರಾಜೀನಾಮೆ ನಿರ್ಧಾರ: ಬೊಮ್ಮಾಯಿ
Advertisement
Advertisement
ಖಜಾನೆ ಕಳ್ಳರನ್ನು ಹಿಡಿದ್ದೇವೆ: ಕಲ್ಯಾಣ ಕರ್ನಾಟಕದ ಶೇ.80ರಷ್ಟು ಶಾಸಕರು 10 ಪರ್ಸೆಂಟ್ ಕಮಿಷನ್ ಇಲ್ಲದೆ, ಗುದ್ದಲಿ ಪೂಜೆನೂ ಮಾಡಲ್ಲ. ಹೀಗಾಗಿ ಅನೇಕ ಕಾಮಗಾರಿಗಳು ಸುಮಾರು 8 ತಿಂಗಳಿನಿಂದ ಬಾಕಿ ಉಳಿದಿವೆ. ಇವರೊಂದಿಗೆ ಕರ್ನಾಟಕದ ಖಜಾನೆ ನುಂಗುವ ಕಳ್ಳ ಅಧಿಕಾರಿಗಳನ್ನು ನಾವು ಹಿಡಿದಿದ್ದೇವೆ. ಹಿಡಿದುಕೊಟ್ಟರೂ ಮುಖ್ಯಮಂತ್ರಿಗಳು ಏಕೆ ಶಿಕ್ಷೆ ವೀಧಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪನನ್ನು ಸಮರ್ಥಿಸಿಕೊಂಡ ಸಿ.ಟಿ ರವಿ, ಗೋಪಾಲಯ್ಯ
ಗೆಟೌಟ್ ಎನ್ನುತ್ತಿದ್ದ ಈಶ್ವರಪ್ಪ: ನಮ್ಮದು ಯಾವಾಗಲೂ ಬಿಲ್ ಬಂದಿಲ್ಲ ಎನ್ನುವುದೊಂದೇ ಬೇಡಿಕೆ. ಈಶ್ವರಪ್ಪ ಅವರ ಬಳಿ ಬಿಲ್ ಕೊಡಿಸುವಂತೆ ಮನವಿ ಮಾಡಲು ಹೊರಟರೆ ಮರ್ಯಾದೆನೇ ಕೊಡ್ತಿರಲಿಲ್ಲ. ಗೆಟೌಟ್ ಎಂದು ಗದರುತ್ತಿದ್ದರು. ಬಿಲ್‌ಗಾಗಿ ಅಲೆದು ನಾವೂ ಸುಸ್ತಾಗುತ್ತಿದ್ದೆವು ಎಂದು ಹೇಳಿಕೊಂಡ ಅವರು, ಸಂತೋಷ್ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.