ಹೈದರಬಾದ್: ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗದೇ ಇದ್ದಿದ್ದಕ್ಕೆ ಹುಡುಗನೊಬ್ಬನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಹೈದರಾಬಾದ್‍ನ ಓಲ್ಡ್ ಸಿಟಿಯ ಚಾರ್ಮಹಲ್ ಪ್ರದೇಶದಲ್ಲಿ ನಡೆದಿದೆ.
ಹುಸೇನಿ ಆಲಂ ನಿವಾಸಿಯಾದ 17 ವರ್ಷದ ಹುಡುಗ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವಾನಾಗಿದ್ದು, ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಚಾರ್ಮಿನಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾದ್ ಕೆಫೆ ಹುಸೇನಿ ಆಲಂನಿಂದ ಬೋನಾಲು ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಏಕಾಏಕಿ ದುಷ್ಕರ್ಮಿಗಳ ಗುಂಪೊಂದು ಹುಡುಗನನ್ನು ತಡೆದು ಹಣೆಗೆ ತಿಲಕವಿಟ್ಟು ಜೈ ಶ್ರೀರಾಮ್ ಎಂದು ಕೂಗುವಂತೆ ಒತ್ತಾಯಿಸಿದ್ದಾರೆ. ಆಗ ಘೋಷಣೆ ಕೂಗಲು ಹುಡುಗ ನಿರಾಕರಿಸಿದ್ದರಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಹುಡುಗ ಆರೋಪಿಸಿದ್ದಾನೆ. ಇದನ್ನೂ ಓದಿ: ಹೈಕಮಾಂಡ್ ಅಂಗಳಕ್ಕೆ ಬಿಎಸ್‌ವೈ ನಿರ್ಧಾರ
Advertisement
Advertisement
ಈ ಬಗ್ಗೆ ಬಾಲಕ ಚಾರ್ಮಿನಾರ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಲ್ಲಿಯೂ ಪ್ರಮುಖ ಆರೋಪಿಯನ್ನು ರೂಪೇಶ್ ಶರ್ಮಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಇಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡ ಮಂಕಿಪಾಕ್ಸ್ – ಈವರೆಗೆ 2,500ಕ್ಕೂ ಹೆಚ್ಚು ಕೇಸ್ ದಾಖಲು