– ಮೂವರು ಪೊಲೀಸರ ವಶಕ್ಕೆ
ಶಿವಮೊಗ್ಗ: ಬುರ್ಖಾ ಧರಿಸಿ ಮಹಿಳೆಯೊಬ್ಬಳ ಹತ್ಯೆಗೆ ಸಂಚು ರೂಪಿಸಿಕೊಂಡು ಬಂದಿದ್ದ ಮೂವರು ಯುವಕರನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗ (Shivamogga) ನಗರದ ಕೆ ಆರ್ ಪುರಂ ರಸ್ತೆಯಲ್ಲಿ ನಡೆದಿದೆ.
ಬೊಮ್ಮನಕಟ್ಟೆಯ ದರ್ಶನ್ (18), ಮಹೇಶ್ (20) ಮತ್ತು ಅಸ್ಲಾಂ (25) ಸಿಕ್ಕಿಬಿದ್ದ ಆರೋಪಿಗಳು. ರೌಡಿಶೀಟರ್ ಸಾತು ಪತ್ನಿ ತಬಸುಮ್ ಬಾನು ಕೊಲೆಗೆ ಆರೋಪಿಗಳು ಬಂದಿದ್ದರು. ತಬಸುಮ್ ಬಾನು ಮನೆಗೆ ನುಗ್ಗಿ, ಕೊಲೆಗೆ ಯತ್ನಿಸಿದ್ದರು. ಆಗ ಮಹಿಳೆ ಕೂಗಿದ್ದರಿಂದ ಪರಾರಿಯಾಗಲು ದುಷ್ಕರ್ಮಿಗಳು ಯತ್ನಿಸಿದ್ದರು. ಈ ವೇಳೆ ಸಾರ್ವಜನಿಕರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ತಾಯಿಗೆ ಮಗಳ ಅಶ್ಲೀಲ ಫೋಟೋ ಕಳಿಸಿ ಬ್ಲ್ಯಾಕ್‌ಮೇಲ್ – ಆರೋಪಿ ಅರೆಸ್ಟ್
ಶಿವಮೊಗ್ಗದ ಸೆಂಟ್ರಲ್ ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ರೌಡಿಶೀಟರ್ ಸಾತು ಪ್ರಕರಣದ ಸೂತ್ರಧಾರನಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಜೈಲಿನಲ್ಲಿರುವ ತನ್ನನ್ನು ನೋಡಲು ಪತ್ನಿ ಬರುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದ ವ್ಯಕ್ತಿ, ಜೈಲಿನಿಂದಲೇ ಪತ್ನಿ ಕೊಲೆಗೆ ಸುಪಾರಿ ಕೊಟ್ಟು ಮಹಿಳೆಯ ಹತ್ಯೆ ಮಾಡುವಂತೆ ಕಳಿಸಿದ್ದ ಎಂಬುದು ಗೊತ್ತಾಗಿದೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಸಾಲದ ಹಣ ವಾಪಸ್ ಕೊಡುವುದಾಗಿ ಕರೆಸಿಕೊಂಡು ವೃದ್ಧೆಯ ಕೊಲೆ
