ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಆಯೋಜಿಸಿರುವ ಬೃಹತ್ ಶೈಕ್ಷಣಿಕ ಹಾಗೂ ಉದ್ಯೋಗ ಮೇಳ ವಿದ್ಯಾಮಂದಿರಕ್ಕೆ (Vidhyamandira) ಇಂದು ಕೊನೆಯ ದಿನವಾಗಿದ್ದು, ತಮ್ಮ ಭವಿಷ್ಯದ ಕೋರ್ಸ್ ಹಾಗೂ ಉದ್ಯೋಗದ ಕನಸು ಹೊತ್ತು ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ.
ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ AD6 ಅಡ್ವರ್ಟೈಸಿಂಗ್ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ ಈ ಎಕ್ಸ್‌ಪೋಗೆ ಆರಂಭದ ದಿನದಿಂದಲೇ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಬೃಹತ್ ಮೇಳದಲ್ಲಿ ದೇಶದ ಪ್ರಮುಖ 40ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮತ್ತು 20ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಮೇಳದ ಮೊದಲ ದಿನವೇ ‘ಅಕನಾಲೇಜರ್ ಫಸ್ಟ್’ ಮತ್ತು ‘ಅನಮೇಟಾ ಐಓಟಿ’ ಕಂಪನಿಗಳು ಐವರು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗಾವಕಾಶ ಕಲ್ಪಿಸಿವೆ.
ಪದವಿ ನಂತರ ಮುಂದೇನು? ಯಾವ ಕೋರ್ಸ್ ಆಯ್ಕೆ ಮಾಡಬೇಕು? ವಿದೇಶಿ ಶಿಕ್ಷಣ ಹಾಗೂ ವಿದ್ಯಾರ್ಥಿವೇತನ (Scholarship) ಪಡೆಯುವುದು ಹೇಗೆ? ಎಂಬ ವಿದ್ಯಾರ್ಥಿಗಳ ಗೊಂದಲಗಳಿಗೆ ತಜ್ಞರು ನೇರವಾಗಿ ಸ್ಪಂದಿಸುತ್ತಿದ್ದಾರೆ.
ಮೇಳಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಲಕ್ಕಿ ಡಿಪ್ ಆಯೋಜಿಸಲಾಗಿದ್ದು, ಮೊದಲ ದಿನ ಕೆಲವರು ಲ್ಯಾಪ್‌ಟಾಪ್ ಹಾಗೂ ಬೈಸಿಕಲ್‌ಗಳನ್ನು ಗೆದ್ದುಕೊಂಡಿದ್ದಾರೆ.
ಪದವಿ ಮುಗಿಸಿ ಮುಂದಿನ ಹಂತದ ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸ್‌ಗಳು ಹಾಗೂ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ. ಉಚಿತ ಪ್ರವೇಶವಿರುವ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಪ್ಲಾಟಿನಂ ಪ್ರಾಯೋಜಕರು
ರಾಮಯ್ಯ ಯೂನಿವರ್ಸಿಟಿ, ಸಪ್ತಗಿರಿ ಎನ್‌ಪಿಎಸ್ ಯೂನಿವರ್ಸಿಟಿ, ಪ್ರೆಸಿಡೆನ್ಸಿ ಯೂನಿವರ್ಸಿಟಿ, ಕೇಂಬ್ರಿಡ್ಜ್ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ
ಗೋಲ್ಡ್ ಪ್ರಾಯೋಜಕರು
ಇಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ , ಸಿಎಂಆರ್ ಯೂನಿವರ್ಸಿಟಿ, ಬಿಜೆಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಚಾಣಕ್ಯ ಯೂನಿವರ್ಸಿಟಿ, ಪಾರುಲ್ ಯೂನಿವರ್ಸಿಟಿ
ಸಿಲ್ವರ್ ಪ್ರಾಯೋಜಕರು
ಎಎಂಸಿ ಇನ್‌ಸ್ಟಿಟ್ಯೂಷನ್ಸ್, ಇಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್, ಸಿಟಿ ಇನ್‌ಸ್ಟಿಟ್ಯೂಷನ್ಸ್, ಪಿಇಎಸ್ ಯೂನಿವರ್ಸಿಟಿ, ಅಮಿಟಿ ಯೂನಿವರ್ಸಿಟಿ, ಎಐಎಂಎಸ್ ಇನ್‌ಸ್ಟಿಟೂಷನ್ಸ್, ದಿ ಆಕ್ಸ್‌ಫರ್ಡ್ ಇನ್‌ಸ್ಟಿಟೂಷನ್ಸ್, ಡಾನ್ ಬಾಸ್ಕೋ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್, ರಾಜರಾಜೇಶ್ವರಿ ಕಾಲೇಜ್ ಆಫ್ ಎಂಜಿನಿಯರಿಂಗ್, ಆಚಾರ್ಯ ಬೆಂಗಳೂರು ಬಿ-ಸ್ಕೂಲ್, ಡಾ. ಎಸಿಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಸಿಇಎ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್
ಸ್ಪೆಷಲ್ ಪೆವಿಲಿಯನ್
ರಾಮಯ್ಯ ಇನ್‌ಸ್ಟಿಟೂಟ್ ಆಫ್ ಮ್ಯಾನೆಜ್ಮೆಂಟ್
ಗಿಫ್ಟ್ ಸ್ಪಾನರ್ಸ್
ಸಪ್ತಗಿರಿ ಎನ್‌ಪಿಎಸ್ ಯೂನಿವರ್ಸಿಟಿ
ಕ್ರಿಯೆಟಿವ್ ಸ್ಟಾಲ್
ಆರ್‌ಆರ್ ಇನ್‌ಸ್ಟಿಟೂಷನ್ಸ್
ಬೆವರೆಜ್ ಪಾರ್ಟ್‌ನರ್
ಬಾಯರ್ಸ್ ಕಾಫೀ



