ಕೋಲಾರ: ಸಾಲ (Loan) ಕೊಟ್ಟಿದ್ದ ಹಣ ಹಿಂತಿರುಗಿಸುವುದಾಗಿ ಕರೆದು ವೃದ್ಧೆಯನ್ನು (Old Woman) ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ (Srinivaspura) ತಾಲೂಕಿನ ಲಕ್ಷ್ಮೀಪುರ ಬಳಿ 25 ದಿನಗಳ ಹಿಂದೆ ಕೊಲೆ ಮಾಡಿರುವ ಆರೋಪಿಗಳು ಅರಣ್ಯ ಪ್ರದೇಶದಲ್ಲಿ ವೃದ್ಧೆಯ ಮೃತದೇಹ ಬಿಸಾಡಿ ಸಿಕ್ಕಿಬಿದ್ದಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ರೆಡ್ಡಮ್ಮ (70) ಕೊಲೆಯಾದ ವೃದ್ಧೆ. ಸಾಲದ ಹಣ ನೀಡುವುದಾಗಿ ಕರೆಸಿಕೊಂಡು ಕೊಲೆ ಮಾಡಿರುವ ಲಕ್ಷ್ಮೀಪುರದ ತಿಮ್ಮರಾಜು ಹಾಗು ಮುನಿರಾಜು ಪೊಲೀಸರ ಅಥಿತಿಯಾಗಿದ್ದಾರೆ. ಇದನ್ನೂ ಓದಿ: ಜೂನ್ ತಿಂಗಳಲ್ಲಿ ಸಾಲು ಸಾಲು ಖಗೋಳ ವಿಸ್ಮಯ: ಆಗಸದಲ್ಲಿ ಮೂಡಲಿದೆ ಕೌತುಕ!
ಮೇ 17ರಂದು ನಾಪತ್ತೆಯಾಗಿದ್ದ ರೆಡ್ಡಮ್ಮರನ್ನು ಕೊಲೆ ಮಾಡಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಸಂಬಂಧಿಕರು ಸಹ ನಾಪತ್ತೆ ದೂರು ನೀಡಿದ್ದರು. ಜೂನ್ 1ರಂದು ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಮೃತ ರೆಡ್ಡಮ್ಮ ಮಗನಿಗೆ ಸಾಲ ಕೊಟ್ಟಿದ್ದ ಆರೋಪಿಗಳಾದ ಮುನಿರಾಜು ಹಾಗೂ ತಿಮ್ಮರಾಜು ಮೇಲೆ ಅನುಮಾನವಿದ್ದು, ವಿಚಾರಣೆ ನಡೆಸಿದ ವೇಳೆ ಕೊಲೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಂಚಾರ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ಶವ ಬಿಸಾಡಿರುವ ಕುರಿತು ಬಾಯಿಬಿಟ್ಟಿದ್ದಾರೆ. ಸದ್ಯ ರಾಯಲಪಾಡು ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಇದನ್ನೂ ಓದಿ: ತಾಯಿಗೆ ಮಗಳ ಅಶ್ಲೀಲ ಫೋಟೋ ಕಳಿಸಿ ಬ್ಲ್ಯಾಕ್‌ಮೇಲ್ – ಆರೋಪಿ ಅರೆಸ್ಟ್
