ಬೆಂಗಳೂರು: ಸಂಪುಟ ವಿಸ್ತರಣೆ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಹೆಜ್ಜೆ ಹೆಜ್ಜೆಗೂ ಹೈಕಮಾಂಡ್ ರೋಚಕ ಟ್ವಿಸ್ಟ್ ನೀಡುತ್ತಿದೆ. ನಾಳೆಯ ಸಿಎಂ ಕಾರ್ಯಕ್ರಮ ಪಟ್ಟಿ ಖಾಲಿ ಖಾಲಿ ಇದೆ.
ಕಾಂಗ್ರೆಸ್ ಹೈಕಮಾಂಡ್ ನಡೆಗೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಸುಸ್ತಾಗಿದ್ದಾರೆ. ನಾಳೆ ಇಡೀ ದಿನ ಕಾರ್ಯಕ್ರಮ ಪಟ್ಟಿಯಲ್ಲಿ ಏನೂ ಕಾರ್ಯಕ್ರಮಗಳೇ ಇಲ್ಲ. ಕಾಯ್ದಿರಿಸಲಾಗಿದೆ ಎಂದಷ್ಟೇ ಸಿಎಂ ಅಧಿಕೃತ ಕಾರ್ಯಕ್ರಮ ಪಟ್ಟಿ ಸಿದ್ಧವಾಗಿದೆ. ಸೋಮವಾರ ಬೆಳಗ್ಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಪಟ್ಟಿ ಬಂದರಷ್ಟೇ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.
ನಾಳೆ ಸಂಜೆ 4 ಗಂಟೆಗೆ ಪ್ರಮಾಣ ವಚನಕ್ಕೆ ಸಿದ್ಧತೆ ಮಾಡುವಂತೆ ಮೂರನೇ ಸಲ ಸಿಎಂ ಸೂಚಿಸಿದ್ದರು. ಯಾವುದೇ ಕ್ಲಾರಿಟಿ ಇಲ್ಲದ ಕಾರಣದಿಂದಾಗಿ ಸಿಎಂ ಅಧಿಕೃತ ಕಾರ್ಯಕ್ರಮಗಳ ಪಟ್ಟಿಯಲ್ಲೂ ನಾಳಿನ ಪ್ರಮಾಣ ವಚನ ಕಾರ್ಯಕ್ರಮದ ಉಲ್ಲೇಖ ಇಲ್ಲ.
ಡಿಸಿಎಂ ಅಧಿಕೃತ ಕಾರ್ಯಕ್ರಮಗಳ ಪಟ್ಟಿಯಲ್ಲೂ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಉಲ್ಲೇಖ ಇಲ್ಲ. ಇಡೀ ದಿನ ಕಾಯ್ದಿರಿಸಲಾಗಿದೆ ಎಂದಷ್ಟೇ ಉಲ್ಲೇಖ ಮಾಡಲಾಗಿದೆ.
