ಬಿಗ್‌ಬಾಸ್ (Bigg Boss) ಗೆದ್ದು ಐದು ತಿಂಗಳ ನಂತರ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ ಗಿಲ್ಲಿ ನಟ (Gilli Nata). ಈ ಚಿತ್ರಕ್ಕೆ ಚಂದ್ರ ಮೋಹನ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಮೂರ್ನಾಲ್ಕು ಚಿತ್ರಗಳನ್ನು ಚಂದ್ರ ಮೋಹನ್ ನಿರ್ದೇಶನ ಮಾಡಿದ್ದರೂ, ಗಿಲ್ಲಿ ಕಾರಣದಿಂದಾಗಿ ಅವರು ಕುತೂಹಲದ ಕೇಂದ್ರ ಬಿಂದುವಾಗಿದ್ದಾರೆ.
ಗಿಲ್ಲಿ ನಟನ ಚಿತ್ರಕ್ಕೆ ಪ್ರತಿಷ್ಠಿತ ಕೆವಿಎನ್ ಸಂಸ್ಥೆ (KVN Studios) ಸಾಥ್ ಕೊಟ್ಟಿರುವುದರಿಂದ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲವಿದೆ. ಹಾಗಾಗಿ ಚಂದ್ರ ಮೋಹನ್ ಯಾರು ಅಂತ ಅನೇಕರು ಹುಡುಕಾಟ ಮಾಡುತ್ತಿದ್ದಾರೆ. ಈ ನಡುವೆ ಅಚ್ಚರಿಯ ಸಂಗತಿಯೊಂದು ಬಯಲಿಗೆ ಬಂದಿದೆ. ಗಿಲ್ಲಿ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ರಾಕಿಂಗ್ ಸ್ಟಾರ್ ಅತ್ಯಾಪ್ತರಾಗಿದ್ದಾರೆ. ಯಶ್ ಅವರ ಕಷ್ಟದ ದಿನಗಳಲ್ಲಿ ಚಂದ್ರ ಮೋಹನ್ ಜೊತೆಯಾಗಿದ್ದರು.ಇದನ್ನೂ ಓದಿ: ನಿರ್ಮಾಪಕನ ಜೊತೆ ನಟಿ ಶರ್ಮಿಳಾ ಮಾಂಡ್ರೆ ಮದುವೆ ಫಿಕ್ಸ್
ಅದು ಬೆಂಗಳೂರಿಗೆ ಯಶ್ ಬಂದ ದಿನಗಳು. ಕೈಲಿ ಕೆಲಸವೂ ಇಲ್ಲ, ಇರೋಕೆ ಜಾಗವೂ ಇಲ್ಲ. ಸಂಬಂಧಿಕರು ಕೂಡ ಯಶ್ ಅವರನ್ನು ಹತ್ತಿರಕ್ಕೆ ಬಿಟ್ಟಿಕೊಳ್ಳಲಿಲ್ಲ. ಕೇರಾಫ್ ಫುಟ್ಪಾತ್ ಆದ ದಿನದಲ್ಲಿ ಯಶ್ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದವರು ಇದೇ ಚಂದ್ರ ಮೋಹನ್. ಈ ಇಬ್ಬರೂ ಸ್ಟಾಪ್ ಅನ್ನುವ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು. ದಿಢೀರ್ ಅಂತ ಆ ಚಿತ್ರವೇ ಸ್ಟಾಪ್ ಆಗಿತ್ತು.
ಅಂತ ಚಂದ್ರಮೋಹನ್ ಬ್ರಹ್ಮಚಾರಿ ಸೇರಿದಂತೆ ನಾಲ್ಕು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಗಿಲ್ಲಿ ನಟ ಹೀರೋ ಆಗಿ ನಟಿಸುತ್ತಿರುವ ಚೊಚ್ಚಲು ಸಿನಿಮಾಗೆ ಡೈರೆಕ್ಷನ್ ಮಾಡುತ್ತಿದ್ದಾರೆ. ಹಾಗಾಗಿ ಚಂದ್ರ ಮೋಹನ್ ಬಗ್ಗೆ ತಿಳಿದುಕೊಳ್ಳೋಕೆ ಅನೇಕರು ಉತ್ಸುಕರಾಗಿದ್ದಾರೆ.ಇದನ್ನೂ ಓದಿ: ಸುಳ್ಳು ಸುದ್ದಿ ಹರಡಿದವರ ವಿರುದ್ಧ ದೂರು ದಾಖಲಿಸಿದ ನಟ ದೊಡ್ಡಣ್ಣ
