-ಖಾತೆ ಹಂಚಿಕೆ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ
ಬೆಂಗಳೂರು: ರಾಜಕೀಯಕ್ಕಾಗಿ ಬಿಡದಿ (Bidadi) ಪಾದಯಾತ್ರೆ ಮಾಡ್ತಿದ್ದಾರೆ ಅಂತ ಜೆಡಿಎಸ್ ಪಾದಯಾತ್ರೆಗೆ ಸಚಿವ ಮಧು ಬಂಗಾರಪ್ಪ (Madhu Bangarappa) ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಮಾಡೋ ಹಕ್ಕಿದೆ ಹೀಗಾಗಿ ಬಿಡದಿ ಪಾದಯಾತ್ರೆ ಮಾಡ್ತಿದ್ದಾರೆ. ಸಿಎಂ ಕೂಡ ತೊಂದರೆ ಕೊಡಲ್ಲ, ಒತ್ತಾಯ ಪೂರ್ವಕವಾಗಿ ಭೂಮಿ ಪಡೆಯಲ್ಲ ಅಂದಿದ್ದಾರೆ. ಜೆಡಿಎಸ್-ಬಿಜೆಪಿ ಅವರು ರಾಜಕೀಯಕ್ಕೆ ಮಾಡ್ತಿದ್ದಾರೆ ಅನ್ನಿಸುತ್ತೆ. ಬೇರೆ ವಿಷಯ ಇದೆ ಚರ್ಚೆ ಮಾಡಲಿ. ಯಡಿಯೂರಪ್ಪ ಹಿಂದೆ ಇದ್ದಾಗ ಲಾಠಿಚಾರ್ಜ್ ಮಾಡಿಸಿದ್ರು. ಪಾದಯಾತ್ರೆ ಮಾಡಲಿ ಬೇಡ ಅನ್ನಲ್ಲ. ಆದ್ರೆ ಸಿಎಂ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಿದ್ರು ರಾಜಕೀಯಕ್ಕೆ ಪಾದಯಾತ್ರೆ ಮಾಡೋದು ಸರಿಯಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಂಚಿಯಲ್ಲಿ ಉಗ್ರ ರೂಪ ಪಡೆದ JPSC-JSSC ಪ್ರತಿಭಟನೆ – ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್
ಖಾತೆ ಹಂಚಿಕೆ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ:
ಖಾತೆ ಹಂಚಿಕೆ ವಿಚಾರದಲ್ಲಿ ಇನ್ನು ಸೂಚನೆ ಏನು ಬಂದಿಲ್ಲ. ಈಗಾಗಲೇ ಕೈ ತುಂಬಾ ಕೆಲಸ ಕೊಟ್ಟಿದ್ದಾರೆ. ಬರ, ಅತಿವೃಷ್ಠಿ ಪರಿಶೀಲನೆ ಕೊಟ್ಟಿದ್ದಾರೆ. ನಾನು ಮೂರು ದಿನ ಹೋಗಿ ಬಂದೆ. ಡಿಸಿ, ಎಲ್ಲಾ ಡಿಪಾರ್ಟ್ಮೆಂಟ್ ರೀವ್ಯೂ ಮಾಡ್ದೆ. ಮೂರು ಡೆತ್ ಕೂಡ ಆಗಿತ್ತು. ಅಲ್ಲಿಗೆ ಹೋಗಿ ಪರಿಶೀಲಿಸಿ ಬಂದೆ. 13 ಜನರಿಗೆ ಖಾತೆ ಕೊಟ್ಟಿದ್ದಾರೆ. ಉಳಿದವರಿಗೆ ಖಾತೆ ಕೊಡಬೇಕು. ನಿನ್ನೆ ಸಿಎಂ ಕೂಡ ನಾನೇ ಎಲ್ಲವನ್ನ ಹೇಳ್ತೇನೆ ಅಂದ್ರು. ಸಿಎಂ ಅವರು ವರಿಷ್ಠರನ್ನ ಭೇಟಿ ಮಾಡಿ ಖಾತೆ ಹಂಚಿಕೆ ಮಾಡ್ತಾರೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಎಷ್ಟೋ ದಿನ ವಿಸ್ತರಣೆಯನ್ನೇ ಮಾಡಿರಲಿಲ್ಲ. ನಾವೆಲ್ಲರೂ ಮಂತ್ರಿಗಳಾಗಿದ್ದೇವೆ. 13 ರಿಂದ ಸೆಷನ್ ಇದೆ. ಸಿಎಂ ದೆಹಲಿಯಿಂದ ಹೊರಟಿದ್ದಾರೆ. ಇವತ್ತು ಸಂಜೆಯೊಳಗೆ ಆಗಬಹುದು. ಸಿಎಂ ಖರ್ಗೆ, ಸುರ್ಜೇವಾಲಾ, ವೇಣುಗೋಪಾಲ್ ಜೊತೆ ಮಾತನಾಡಿದ್ದಾರೆ. ಹೊಸಬರಿಗೆ ಏನೂ ತೊಂದರೆ ಆಗಲ್ಲ. ಶಾಸಕರಾಗಿ ಎಲ್ಲಾ ಅವರಿಗೆ ಗೊತ್ತಿರುತ್ತೆ. ಸದನದಲ್ಲಿ ಎಲ್ಲರೂ ಉತ್ತರ ಕೊಡ್ತಾರೆ ಎಂದು ತಿಳಿಸಿದ್ದಾರೆ.
ಖಾತೆ ರಹಿತ ಸಚಿವರೆಂಬ ವಿಜಯೇಂದ್ರ ಹೇಳಿಕೆಗೆ ನಮಗೆ ಮಂತ್ರಿಯನ್ನಾದ್ರೂ ಮಾಡಿದ್ದಾರೆ. ಅವರಪ್ಪ ಇದ್ದಾಗ ಮಂತ್ರಿಮಂಡಲ ಮಾಡಿರಲಿಲ್ಲ. ಈಗಾಗಲೇ 13 ಜನ ಸಚಿವರಿಗೆ ಖಾತೆ ಇದೆ. ಅವರು ಎಲ್ಲರೂ ಆನ್ಸರ್ ಮಾಡ್ತಾರೆ. ವಿಪಕ್ಷದವರು ಏನು ಕೇಳ್ತಾರೆ ಅದಕ್ಕೆ ಉತ್ತರ ಕೊಡ್ತೇವೆ ಎಂದಿದ್ದಾರೆ.ಇದನ್ನೂ ಓದಿ: JPSC ಪರೀಕ್ಷೆ ಅಕ್ರಮ | ಸಿಬಿಐ ತನಿಖೆಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಯತ್ನ- ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಜಲಫಿರಂಗಿ ಬಳಕೆ

