ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಪಾದಚಾರಿ ಸ್ನೇಹಿ ನಗರ ನಿರ್ಮಾಣ ಹಾಗೂ ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆ ( Bengaluru North Municipal Corporation) ವ್ಯಾಪ್ತಿಯಲ್ಲಿ ಫುಟ್ ಪಾತ್ (Footpath) ಅತಿಕ್ರಮಣ ತೆರವು ಕಾರ್ಯಾಚರಣೆ ಇಂದು (ಜು.2) ನಡೆದಿದೆ.
9 ಜೆಸಿಬಿ, 28 ಟ್ರಾಕ್ಟರ್, 1 ಟಿಪ್ಪರ್, 1 ಇತರೆ ಯಂತ್ರ, 108 ಕಾರ್ಮಿಕರನ್ನು ಬಳಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ. 25 ಅಂಗಡಿಗಳು, 124 ತಳ್ಳುವ ಗಾಡಿಗಳು, 59 ಶೀಟ್/ ಮೇಲ್ಛಾವಣಿ, 23 ಮೆಟ್ಟಿಲು/ ರ‍್ಯಾಂಪ್‌ಗಳು, 130 ಅನಧಿಕೃತ ಜಾಹೀರಾತು ನಾಮಫಲಕಗಳು, 4 ತಾತ್ಕಾಲಿಕ ಶೆಡ್‌ಗಳು, ತ್ಯಾಜ್ಯ ಮತ್ತು ಇತರೆ 18 ಟನ್ ತೆರವು ಕಾರ್ಯಾಚರಣೆ ಮಾಡಲಾಗಿದೆ.

ವಲಯ 1 – ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ
ಬ್ಯಾಟರಾಯನಪುರ ವಿಭಾಗದ ವತಿಯಿಂದ ಸಹಕಾರನಗರ ಮುಖ್ಯರಸ್ತೆ (ಎನ್.ಹೆಚ್.-7 ರಿಂದ ಕೊಡಿಗೇಹಳ್ಳಿ ಮುಖ್ಯರಸ್ತೆಯವರೆಗೆ), ಕೆಂಪಾಪುರ ಮುಖ್ಯರಸ್ತೆ ಹಾಗೂ ಥಣಿಸಂದ್ರ ವೃತ್ತದಿಂದ ಮಾನ್ಯತಾ ರೆಸಿಡೆನ್ಸಿ ಬ್ಯಾಕ್ ಗೇಟ್‌ವರೆಗೆ ಒಟ್ಟು 6.05 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮುಕ್ತಗೊಳಿಸಲು ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ 9 ಅಂಗಡಿಗಳು, 54 ತಳ್ಳುವ ಗಾಡಿಗಳು, 16 ಶೀಟ್‌ಗಳು/ಮೇಲ್ಚಾವಣಿ/ಕೆನೋಪಿಗಳು, 6 ಮೆಟ್ಟಿಲುಗಳು/ ರ‍್ಯಾಂಪ್‌ಗಳು ಹಾಗೂ 23 ಜಾಹೀರಾತು/ನಾಮಫಲಕಗಳನ್ನು ತೆರವುಗೊಳಿಸಲಾಯಿತು. ಈ ಕಾರ್ಯಾಚರಣೆಗಾಗಿ 3 ಜೆಸಿಬಿಗಳು, 5 ಟ್ರಾಕ್ಟರ್‌ಗಳು ಹಾಗೂ 24 ಕಾರ್ಮಿಕರನ್ನು ನಿಯೋಜಿಸಲಾಗಿತ್ತು.
🚶 BENGALURU’S FOOTPATHS ARE GETTING THEIR SPACE BACK
From July 1–10, the Greater Bengaluru Authority (GBA) is running a ‘Safe Footpath Campaign’ across 1,000 km of road network — clearing encroachments from footpaths in all five city corporations.
📊 WHY THIS MATTERS
30% of… pic.twitter.com/MJUQW8oZtz
— Krishna Byre Gowda (@krishnabgowda) July 2, 2026
ವಿದ್ಯಾರಣ್ಯಪುರ ವಿಧಾನಸಭಾ ಕ್ಷೇತ್ರ
ವಿದ್ಯಾರಣ್ಯಪುರ ವಿಭಾಗದ ವತಿಯಿಂದ ಇಲ್ಲಿನ ಮುಖ್ಯ ರಸ್ತೆ (ಬಿ.ಇ.ಎಲ್ ಲೇಔಟ್ 1ನೇ ಹಂತದಿಂದ ಹೆಚ್.ಎಂ.ಟಿ ಲೇಔಟ್ 6ನೇ ಹಂತದವರೆಗೆ) ಹಾಗೂ ಬಿ.ಇ.ಎಲ್ 1ನೇ ಹಂತದಿಂದ ನರಸೀಪುರ ಬಸ್ ನಿಲ್ದಾಣದವರೆಗೆ ಒಟ್ಟು 1.60 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮುಕ್ತಗೊಳಿಸಲು ಕಾರ್ಯಾಚರಣೆ ನಡೆಸಲಾಯಿತು.
ಈ ವೇಳೆ 3 ಅಂಗಡಿಗಳು, 8 ತಳ್ಳುವ ಗಾಡಿಗಳು, 11 ಶೀಟ್‌ಗಳು/ಕೆನೋಪಿಗಳು, 1 ಮೆಟ್ಟಿಲು/ರ‍್ಯಾಂಪ್ ಹಾಗೂ 55 ಜಾಹೀರಾತು/ನಾಮಫಲಕಗಳನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆಗಾಗಿ 2 ಜೆಸಿಬಿಗಳು, 4 ಟ್ರಾಕ್ಟರ್‌ಗಳು ಹಾಗೂ 16 ಕಾರ್ಮಿಕರನ್ನು ನಿಯೋಜಿಸಲಾಗಿತ್ತು.
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ
ಪುಲಿಕೇಶಿನಗರ ವಿಭಾಗದ ವತಿಯಿಂದ ದಿನ್ನೂರು ಮುಖ್ಯರಸ್ತೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಿಂದ ಪಿ.ಎನ್.ಟಿ. ಗೇಟ್‌ವರೆಗೆ ಸುಮಾರು 0.45 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮುಕ್ತಗೊಳಿಸಲು ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ 4 ಅಂಗಡಿಗಳು, 5 ತಳ್ಳುವ ಗಾಡಿಗಳು, 3 ಶೀಟ್‌ಗಳು/ಕೆನೋಪಿಗಳು, 2 ಮೆಟ್ಟಿಲುಗಳು/ರ್ಯಾಂಪ್‌ಗಳು, 3 ತಾತ್ಕಾಲಿಕ/ಶಾಶ್ವತ ಶೆಡ್‌ಗಳು ಹಾಗೂ 2 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆಗಾಗಿ 1 ಜೆಸಿಬಿ, 3 ಟ್ರಾಕ್ಟರ್‌ಗಳು ಹಾಗೂ 12 ಕಾರ್ಮಿಕರನ್ನು ನಿಯೋಜಿಸಲಾಗಿತ್ತು.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸರ್ವಜ್ಞನಗರ ವಿಭಾಗದ ವತಿಯಿಂದ ಹೆಚ್.ಬಿ.ಆರ್. ಲೇಔಟ್‌ನ ಗಣೇಶ ದೇವಸ್ಥಾನದ 5ನೇ ಮುಖ್ಯರಸ್ತೆಯಿಂದ 5ನೇ ಅಡ್ಡರಸ್ತೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಮೀಪದ ಫಾರೆಸ್ಟ್ ರಸ್ತೆಯವರೆಗೆ ಸುಮಾರು 1.20 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮುಕ್ತಗೊಳಿಸಲು ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ 3 ಅಂಗಡಿಗಳು, 22 ತಳ್ಳುವ ಗಾಡಿಗಳು, 6 ಶೀಟ್‌ಗಳು/ಕೆನೋಪಿಗಳು, 4 ಮೆಟ್ಟಿಲುಗಳು/ರ್ಯಾಂಪ್‌ಗಳು, 18 ಜಾಹೀರಾತು/ನಾಮಫಲಕಗಳು ಹಾಗೂ 8 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆಗಾಗಿ 1 ಜೆಸಿಬಿ, 8 ಟ್ರಾಕ್ಟರ್‌ಗಳು, 1 ಟಿಪ್ಪರ್ ಹಾಗೂ 28 ಕಾರ್ಮಿಕರನ್ನು ನಿಯೋಜಿಸಲಾಗಿತ್ತು.

ವಲಯ 2 – ಯಲಹಂಕ ವಿಧಾನಸಭಾ ಕ್ಷೇತ್ರ
ಯಲಹಂಕ ವಿಭಾಗದ ವತಿಯಿಂದ ಸಂದೀಪ್ ಉನ್ನೀಕೃಷ್ಣನ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಯಿತು.
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಹೆಬ್ಬಾಳ ವಿಭಾಗದ ವತಿಯಿಂದ ಜೆ.ಸಿ.ನಗರ 5ನೇ ಮುಖ್ಯರಸ್ತೆಯಲ್ಲಿ ಸುಮಾರು 0.90 ಕಿ.ಮೀ. ಉದ್ದದ ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮುಕ್ತಗೊಳಿಸಲು ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ 4 ಅಂಗಡಿಗಳು, 29 ತಳ್ಳುವ ಗಾಡಿಗಳು, 11 ಶೀಟ್ಸ್/ಕೆನೋಪಿಗಳು, 4 ಮೆಟ್ಟಿಲುಗಳು/ರ್ಯಾಂಪ್‌ಗಳು, 4 ಜಾಹೀರಾತು/ನಾಮಫಲಕಗಳು ಹಾಗೂ 2 ಟನ್ ಕಟ್ಟಡ ತ್ಯಾಜ್ಯ/ಮಣ್ಣು/ದೂಳನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆಗಾಗಿ 1 ಜೆಸಿಬಿ, 5 ಟ್ರಾಕ್ಟರ್‌ಗಳು, 1 ಇತರೆ ಯಂತ್ರ ಹಾಗೂ 16 ಕಾರ್ಮಿಕರನ್ನು ನಿಯೋಜಿಸಲಾಗಿತ್ತು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರ
ದಾಸರಹಳ್ಳಿ ವಿಭಾಗದ ವತಿಯಿಂದ ಹೆಸರಘಟ್ಟ ಮುಖ್ಯರಸ್ತೆಯ ಸಪ್ತಗಿರಿ ಜಂಕ್ಷನ್‌ನಿಂದ 8ನೇ ಮೈಲಿವರೆಗೆ ಸುಮಾರು 2.50 ಕಿ.ಮೀ. ಉದ್ದದ ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮುಕ್ತಗೊಳಿಸಲು ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ 2 ಅಂಗಡಿಗಳು, 6 ತಳ್ಳುವ ಗಾಡಿಗಳು, 12 ಶೀಟ್ಸ್/ಕೆನೋಪಿಗಳು, 6 ಮೆಟ್ಟಿಲುಗಳು/ರ್ಯಾಂಪ್‌ಗಳು, 30 ಜಾಹೀರಾತು/ನಾಮಫಲಕಗಳು, 1 ತಾತ್ಕಾಲಿಕ/ಶಾಶ್ವತ ಶೆಡ್ ಹಾಗೂ 6 ಟನ್ ಕಟ್ಟಡ ತ್ಯಾಜ್ಯ/ಮಣ್ಣು/ದೂಳನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆಗಾಗಿ 1 ಜೆಸಿಬಿ, 3 ಟ್ರಾಕ್ಟರ್‌ಗಳು ಹಾಗೂ 12 ಕಾರ್ಮಿಕರನ್ನು ನಿಯೋಜಿಸಲಾಗಿತ್ತು.
ಒಟ್ಟಾರೆ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 12.70 ಕಿ.ಮೀ. ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮುಕ್ತಗೊಳಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಒಟ್ಟು 25 ಅಂಗಡಿಗಳು/ಪೆಟ್ಟಿ ಅಂಗಡಿಗಳು, 124 ತಳ್ಳುವ ಗಾಡಿಗಳು, 59 ಶೀಟ್ಸ್/ಮೇಲ್ಚಾವಣಿ/ಕೆನೋಪಿಗಳು, 23 ಮೆಟ್ಟಿಲುಗಳು/ರ್ಯಾಂಪ್‌ಗಳು, 130 ಜಾಹೀರಾತು/ನಾಮಫಲಕಗಳು, 4 ತಾತ್ಕಾಲಿಕ/ಶಾಶ್ವತ ಶೆಡ್‌ಗಳು ಹಾಗೂ 18 ಟನ್ ಕಟ್ಟಡ ತ್ಯಾಜ್ಯ, ಮಣ್ಣು ಮತ್ತು ದೂಳನ್ನು ತೆರವುಗೊಳಿಸಲಾಗಿದೆ.
ಕಾರ್ಯಾಚರಣೆಗಾಗಿ ಒಟ್ಟು 9 ಜೆಸಿಬಿಗಳು, 28 ಟ್ರಾಕ್ಟರ್‌ಗಳು, 1 ಟಿಪ್ಪರ್, 1 ಇತರೆ ಯಂತ್ರ ಹಾಗೂ 108 ಕಾರ್ಮಿಕರನ್ನು ನಿಯೋಜಿಸಲಾಗಿತ್ತು.
ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಬಳಕೆಗೆ ಸಂಪೂರ್ಣವಾಗಿ ಮುಕ್ತಗೊಳಿಸುವ ಉದ್ದೇಶದಿಂದ ಇಂತಹ ಕಾರ್ಯಾಚರಣೆಗಳನ್ನು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಕಾರ್ಯಾಚರಣೆ ನಡೆಯಲಿದೆ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ತಿಳಿಸಿದೆ.
