ಚಿಕ್ಕೋಡಿ: ಜುಲೈ ತಿಂಗಳು ಆರಂಭವಾದರೂ ಮಳೆಯ ಸುಳಿವೇ ಇಲ್ಲದ ಕಾರಣ ಪ್ರತಿ ವರ್ಷ ಈ ವೇಳೆಗೆ ಇಕ್ಕೆಲಗಳನ್ನೂ ಮೀರಿ ಉಕ್ಕಿ ಹರಿಯುತ್ತಿದ್ದ ಪ್ರಸಿದ್ಧ ಹಿರಣ್ಯಕೇಶಿ ನದಿ( Hiranyakeshi River) ಈ ಬಾರಿ ಸಂಪೂರ್ಣವಾಗಿ ಬತ್ತಿ ಹೋಗುವ ಹಂತ ತಲುಪಿದೆ. ನದಿಯ ಒಡಲು ಸಂಪೂರ್ಣ ಖಾಲಿಯಾಗಿರುವುದು ನದಿ ತೀರದ ಜನರಲ್ಲಿ ಆತಂಕ ಮೂಡಿಸಿದೆ.
ಹಿರಣ್ಯಕೇಶಿ ನದಿಯ ಪ್ರಮುಖ ಅಚ್ಚುಕಟ್ಟು ಪ್ರದೇಶಗಳಲ್ಲಿ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮಳೆಯ ಕೊರತೆಯಿಂದಾಗಿ ನದಿಗೆ ಹರಿದು ಬರುತ್ತಿದ್ದ ಒಳಹರಿವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ನದಿಯಲ್ಲಿ ನೀರು ಕಡಿಮೆಯಾಗಿ ಮರಳಿನ ಕಾಡಿನಂತಾಗಿ ಮಾರ್ಪಟ್ಟಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ. ಜುಲೈ ತಿಂಗಳಲ್ಲಿ ಪ್ರವಾಹದ ಭೀತಿ ಸೃಷ್ಟಿಸುತ್ತಿದ್ದ ನದಿಯು, ಈ ಬಾರಿ ಮಳೆಗಾಲದಲ್ಲೂ ಬೇಸಿಗೆಯ ಭೀಕರತೆಯನ್ನು ನೆನಪಿಸುತ್ತಿದೆ. ಇದನ್ನೂ ಓದಿ: ದರ ಕುಸಿತ – ರೂಟರ್ ಹರಿಸಿ ಹೊಲದಲ್ಲೇ ಕೊತ್ತಂಬರಿ ಸೊಪ್ಪು ನಾಶಪಡಿಸಿದ ರೈತರು

ನದಿಯನ್ನೇ ನಂಬಿ ಕೃಷಿ ಚಟುವಟಿಕೆ ಆರಂಭಿಸಿದ್ದ ರೈತರು(Farmers) ಹಾಗೂ ಕುಡಿಯುವ ನೀರಿಗಾಗಿ (Drinking Water) ನದಿಯನ್ನೇ ಅವಲಂಬಿಸಿದ್ದ ಸಾರ್ವಜನಿಕರು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಆರಂಭದಲ್ಲೇ ಇಂತಹ ಪರಿಸ್ಥಿತಿ ಎದುರಾಗಿರುವುದರಿಂದ ಮುಂದಿನ ದಿನಗಳಲ್ಲಿ ಭೀಕರ ಬರಗಾಲ ಎದುರಾಗಬಹುದು ಎಂಬ ಭೀತಿ ಇಡೀ ಭಾಗವನ್ನು ಆವರಿಸಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಜುಲೈ 10 ರಿಂದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ
