– ಪಾರ್ಕ್ ಮಾಡಿದ್ದ ಆಟೋ ಜಖಂ
ಬೆಂಗಳೂರು: ನಗರದ (Bengaluru) ಕಾಟನ್ ಪೇಟೆಯಲ್ಲಿ (Cottonpete) ಬೃಹತ್ ಕಟ್ಟಡವೊಂದು ಒಂದು ಬದಿ ವಾಲಿದ್ದು (Building Collapse), ಅದರಲ್ಲಿ ಸಿಲುಕಿದ್ದವರು ಹಾಗೂ ಕಟ್ಟಡದ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ವಾಲಿದ ಕಟ್ಟಡದ ಒಳಗೆ ಸಿಲುಕಿದ್ದ ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ. ಕಟ್ಟಡದಲ್ಲಿ ಖಾಸಗಿ ಕ್ಲಿನಿಕ್ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಕಟ್ಟಡ ವಾಲಿ, ರಸ್ತೆಗೆ ಕುಸಿದಿದ್ದರಿಂದ ಅಲ್ಲೇ ನಿಲ್ಲಿಸಿದ್ದ ಆಟೋವೊಂದು ಜಖಂ ಆಗಿದೆ. ಇದನ್ನೂ ಓದಿ: ಚಿಕ್ಕಮಗಳೂರು ಕೋರ್ಟ್‌ಗೆ ಬಾಂಬ್ ಬೆದರಿಕೆ – ಕಲಾಪ ನಿಲ್ಲಿಸದೇ ತಪಾಸಣೆಗೆ ಸೂಚಿಸಿದ ಜಡ್ಜ್
ಸ್ಥಳದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಕಟ್ಟಡವನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಳ್ಳಾರಿ ಕಾಮುಕ ಉಪನ್ಯಾಸಕ ಅರೆಸ್ಟ್
