ಚಿಕ್ಕಮಗಳೂರು: ನಗರದ (Chikkamagaluru) ಹೃದಯ ಭಾಗದಲ್ಲಿರೋ ಜಿಲ್ಲಾ ನ್ಯಾಯಾಲಯಕ್ಕೆ (Court) ದುಷ್ಕರ್ಮಿಗಳು ಬಾಂಬ್ ಬೆದರಿಕೆ (Bomb Threats) ಹಾಕಿದ್ದಾರೆ. ಬೆದರಿಕೆಯ ನಡುವೆಯೇ ಕೋರ್ಟ್ ಕಲಾಪ ನಡೆದಿದೆ.
ಮಧ್ಯಾಹ್ನ 1:30 ರಿಂದ 3:30ರ ಒಳಗೆ ಬಾಂಬ್ ಬ್ಲಾಸ್ಟ್ ಮಾಡುತ್ತೇವೆ ಎಂದು ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಆದರೆ ಜಡ್ಜ್ ಕಲಾಪ ನಿಲ್ಲಿಸದೇ ಪೊಲೀಸರಿಗೆ ತಪಾಸಣೆ ನಡೆಸುವಂತೆ ಸೂಚಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದಿಂದ ತಪಾಸಣೆ ನಡೆಯುತ್ತಿದೆ. ಇದನ್ನೂ ಓದಿ: ಪದೇ ಪದೇ ಬಾಂಬ್ ಬೆದರಿಕೆ – ಧಾರವಾಡ ಹೈಕೋರ್ಟ್ ಪೀಠಕ್ಕೆ ಭಾರೀ ಭದ್ರತೆ
ನ್ಯಾಯಾಲಯಕ್ಕೆ ಎಸ್‌ಪಿ ಜಿತೇಂದ್ರ ದಯಾಮ ಭೇಟಿ ನೀಡಿ, ಪೊಲೀಸ್ ಸಿಬ್ಬಂದಿ ಜೊತೆ ಈ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ರಾಜ್ಯದ ವಿವಿಧ ಜಿಲ್ಲಾ ಕೋರ್ಟ್‌ಗಳಿಗೆ ಹುಸಿ ಬಾಂಬ್ ಬೆದರಿಕೆ
