ಮಡಿಕೇರಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (UAE) ಆರಂಭವಾದ ‘ಇತ್ತಿಹಾದ್’ ರೈಲು (Etihad Rail) ಸೇವೆಯ ಲೋಕೋ ಪೈಲಟ್ ಆಗಿ ಕೊಡಗು ಜಿಲ್ಲೆಯ ಮಾದಾಪುರ ಗ್ರಾಮದ ರಿಯಾಜ್ ನಜೀರ್ ಅವರು ಕಾರ್ಯನಿರ್ವಹಿಸುತ್ತಿದ್ದು, ಗಮನ ಸೆಳೆದಿದ್ದಾರೆ.
ಪ್ರಸ್ತುತ ನಜೀರ್ ಪೋಷಕರಾದ ಹಾಜಿ ನಜೀರ್ ಮತ್ತು ರೆಪ್ಪತ್ ಅವರು ಶುಂಠಿಕೊಪ್ಪದಲ್ಲಿ ವಾಸವಾಗಿದ್ದಾರೆ. ಇದನ್ನೂ ಓದಿ: ಹಾರ್ಮುಜ್‌ನಲ್ಲಿ ಭೀಕರ ದಾಳಿಯಿಂದ ಬಚಾವ್ ಆಗಿ ಭಾರತಕ್ಕೆ ಸುರಕ್ಷಿತವಾಗಿ ತಲುಪಿದ ತೈಲ ಟ್ಯಾಂಕರ್

ಸಾರಿಗೆ ಇತಿಹಾಸದಲ್ಲಿ ಮೈಲಿಗಲ್ಲು ಸೃಷ್ಟಿಸಿರುವ ಯುಎಇ ಯ ಹೊಸ ಪ್ರಯಾಣಿಕ ರೈಲು (Passenger Train) ಸಾರಿಗೆಯ ಪ್ರಥಮ ಯಾನಕ್ಕೆ ಲೋಕೋ ಪೈಲಟ್ ಆಗಿ ರಿಯಾಜ್ ಅವರನ್ನು ಅಲ್ಲಿನ ಆಡಳಿತ ನೇಮಕ ಮಾಡಿದೆ. ಇದನ್ನೂ ಓದಿ: ಅಟಲ್ ಸುರಂಗದ ಬಳಿ ಭೀಕರ ಅಪಘಾತ; ನಿರ್ಮಾಣ ಹಂತದ ಸೇತುವೆ ಮೇಲಕ್ಕೆ ನೆಗೆದು, ಸರಳಿಗೆ ಸಿಲುಕಿದ ಕಾರು
ಇದೇ ಮೊದಲ ಬಾರಿಗೆ ಅಲ್ಲ, ಈ ಹಿಂದೆ ಕೂಡ ರಿಯಾಜ್ ಹಲವು ಪ್ರತಿಷ್ಠಿತ ಸಾರಿಗೆ ಯೋಜನೆಗಳಲ್ಲಿ ಮಹತ್ವದ ಹೊಣೆಗಾರಿಕೆ ನಿರ್ವಹಿಸಿದ್ದಾರೆ. ಕತಾರ್ ಮೆಟ್ರೊ ಮತ್ತು ಕತಾರ್ ಟ್ರಾಮ್ ಸೇವೆಗಳ ಉದ್ಘಾಟನೆಯ ವೇಳೆ ಕೂಡ ಮೊದಲ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದರು.

ಬಾಲ್ಯದ ಸಮಯದಲ್ಲಿ ಕನಿಷ್ಠ ಸೈಕಲ್ ಕೂಡ ನನಗೆ ಸಿಗಲಿಲ್ಲ. ಈಗ ಅತ್ಯಂತ ಜವಾಬ್ದಾರಿಯುತ ರೈಲು ಸೇವೆಯ ಪ್ರಥಮ ಯಾನದ ಪೈಲಟ್ ಆಗುವ ಯೋಗ ಸಿಕ್ಕಿರುವುದಕ್ಕೆ ಹೆಮ್ಮೆ ಆಗುತ್ತಿದೆ ಎಂದು ರಿಯಾಜ್ ಅವರು ಪ್ರತಿಕ್ರಿಯಿಸಿದ್ದಾರೆ.
