– ಭೀಕರ ಅಪಘಾತದಲ್ಲಿ ಓರ್ವ ಪ್ರವಾಸಿಗ ಸಾವು
ಶಿಮ್ಲಾ: ಮನಾಲಿ ಮತ್ತು ಲೇಹ್ ಸಂಪರ್ಕಿಸುವ ವಿಶ್ವದ ಅತೀ ಉದ್ದದ ಅಟಲ್ ಸುರಂಗದ (Atal Tunnel) ಬಳಿ ಭೀಕರ ಅಪಘಾತ (Accident) ನಡೆದಿದೆ. ಘಟನೆಯಲ್ಲಿ ಪ್ರವಾಸಿಗನೊಬ್ಬ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಅತೀ ವೇಗವಾಗಿ ಬಂದ ಎಸ್‌ಯುವಿ ಕಾರು (SUV Car) ನಿಯಂತ್ರಣ ತಪ್ಪಿ ರಸ್ತೆಯಿಂಚಾಚೆಗೆ ನೆಗೆದಿದೆ. ಅಪಘಾತದಲ್ಲಿ ಒಬ್ಬ ಪ್ರವಾಸಿಗ ರಾಜಸ್ಥಾನದ ಸಿಕಾರ್‌ನ 34 ವರ್ಷದ ಕೈಲಾಶ್ ಎಂದು ಗುರುತಿಸಲಾಗಿದೆ. ಗಾಯಾಳುಗಳು ಲಖಿಂಪುರ ಮೂಲದ ರಾಜೇಂದ್ರ, ಸಿದ್ಧಾರ್ಥ್ ಮತ್ತು ಆದಿತ್ಯ ಎಂದು ತಿಳಿದುಬಂದಿದೆ. ಇದನ್ನೂ ಓದಿ: 15 ದಾಖಲೆ ಸಲ್ಲಿಸಿದರೂ `ಭಾರತೀಯ’ ಎಂದು ನಿರೂಪಿಸುವಲ್ಲಿ ವಿಫಲನಾದ ಕೂಲಿ ಕಾರ್ಮಿಕ
See the accident in Atal Tunnel!
An SUV went out of control and veered off the road in the Atal Tunnel area of Himachal Pradesh.
It crashed into the divider and plunged into the construction site below, resulting in the death of one person in the accident.
Appeal:… pic.twitter.com/jM6xPfpBSv
— NEWS WALA (@NEWSWALApy) July 2, 2026
ರಸ್ತೆಬದಿಯ ಬ್ಯಾರಿಕೇಡ್‌ಗಳಿಗೆ (Barricades) ಡಿಕ್ಕಿ ಹೊಡೆದ ಕಾರು ನಿರ್ಮಾಣ ಹಂತದ ಸೇತುವೆಯ ಮೇಲಕ್ಕೆ ನೆಗೆದಿದೆ. ರಸ್ತೆ ಬಳಿ ತಡೆಗೋಡೆಯೂ ಇಲ್ಲದ ಕಾರಣ, ಬೃಹತ್ ಕಬ್ಬಿಣದ ಸರಳುಗಳ ಮಧ್ಯೆ ಸಿಲುಕಿಕೊಂಡಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಅಟಲ್ ಸುರಂಗದಿಂದ ಕಾರು ಹೊರಬರುತ್ತಿದ್ದಂತೆ, ಚಾಲಕ ಎಸ್‌ಯುವಿ ನಿಯಂತ್ರಣ ಕಳೆದುಕೊಂಡಿದ್ದಾನೆ. ಬಳಿಕ ರಸ್ತೆ ಬದಿಯ ಬ್ಯಾರಿಕೇಡ್‌ಗಳಿಗೆ ಗುದ್ದಿಸಿಕೊಂಡು, ನಿರ್ಮಾಣ ಹಂತದ ಸೇತುವೆಯ ಮೇಲೆ ಬಿದ್ದಿದೆ. ಇದನ್ನೂ ಓದಿ: ರಾಮಮಂದಿರ ದೇಣಿಗೆ ಕಳ್ಳತನದಲ್ಲಿ ಟಿನ್ನು ಯಾದವ್ ಕಿಂಗ್‌ಪಿನ್: ಚಂಪತ್ ರಾಯ್ ಬಹಿರಂಗ

ಅಟಲ್ ಸುರಂಗದ ವಿಶೇಷತೆ ಏನು?
ಮನಾಲಿಯಿಂದ ಲೇಹ್ ಸಂಪರ್ಕಿಸುವ ʻಅಟಲ್ ಸುರಂಗʼ ನಿರ್ಮಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಏಕೆಂದರೆ, ಇಲ್ಲಿ ಭಾರೀ ಹಿಮಪಾತ ಸಂಭವಿಸುತ್ತಿರುತ್ತದೆ. ಆದ್ದರಿಂದ ಸುರಂಗ ನಿರ್ಮಿಸಲು ಪ್ರತಿವರ್ಷ ಸುಮಾರು 6 ತಿಂಗಳ ಕಾಲ ಮಾತ್ರ ಕಣಿವೆಯನ್ನ ಕತ್ತರಿಸಲಾಗುತಿತ್ತು. ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 3,000 ಮೀಟರ್ ಅಂದರೆ 10,000 ಅಡಿ ಎತ್ತರದಲ್ಲಿ ಅಲ್ಟ್ರಾ-ಮಾಡರ್ನ್ ವಿಶೇಷಣಗಳೊಂದಿಗೆ ಸುರಂಗವನ್ನು ನಿರ್ಮಿಸಲಾಗಿದೆ.

ಕುದುರೆ ಲಾಳದ ಆಕೃತಿಯ ಸುರಂಗ
ಅಟಲ್ ಸುರಂಗದ ದಕ್ಷಿಣದ ಹೆಬ್ಬಾಗಿಲು ಮನಾಲಿಯಿಂದ 25 ಕಿ.ಮೀ ದೂರದಲ್ಲಿ 3,060 ಮೀಟರ್ ಎತ್ತರದಲ್ಲಿದೆ. ಸುರಂಗದ ಉತ್ತರದ ಹೆಬ್ಬಾಗಿಲು ಲಾಹೌಲ್ ಕಣಿವೆಯ ಸಿಸ್ಸು ಎಂಬ ಹಳ್ಳಿಯ ಟೆಲ್ಲಿಂಗ್ ಬಳಿ ಇದ್ದು, ಇದು 3,071 ಮೀಟರ್ ಎತ್ತರದಲ್ಲಿದೆ. ಇದು ಕುದುರೆ ಲಾಳದ ಆಕೃತಿಯ, ಸಿಂಗಲ್ ಟ್ಯೂಬ್ ಡಬಲ್ ಲೇನ್ ಸುರಂಗವಾಗಿದ್ದು, ಎಂಟು ಮೀಟರ್ ರಸ್ತೆ ಮಾರ್ಗವಿದೆ. ಹಾಗೆಯೇ 5.525 ಮೀಟರ್ ಓವರ್ ಹೆಡ್ ಕ್ಲಿಯರೆನ್ಸ್ ಹೊಂದಿದೆ. ಅಲ್ಲದೇ ಇದು 10.5 ಮೀಟರ್ ಅಗಲವಿದೆ. 3.6 x 2.25 ಮೀಟರ್ ಅಗ್ನಿ ನಿರೋಧಕ ತುರ್ತು ನಿರ್ಗಮನ ಸುರಂಗವನ್ನು ಮುಖ್ಯ ಸುರಂಗದ ಬಳಿಯೇ ನಿರ್ಮಿಸಲಾಗಿದೆ.
