ಲಕ್ನೋ: ರಾಮಮಂದಿರ ದೇಣಿಗೆ ಕಳ್ಳತನ (Ram Temple Donation Theft) ಪ್ರಕರಣದಲ್ಲಿ ಪ್ರತಿದಿನ ಹೊಸ ಹೊಸ ವಿಷಯಗಳು ಬಹಿರಂಗವಾಗುತ್ತಿವೆ. ಕಾಣಿಕೆ ಕಳ್ಳತನದಲ್ಲಿ ಟಿನ್ನು ಯಾದವ್ (Tinnu Yadav) ಪ್ರಮುಖ ಪಾತ್ರಧಾರಿ ಎಂದು ಪೊಲೀಸರ ವಿಚಾರಣೆಯಲ್ಲಿ ಚಂಪತ್ ರಾಯ್ (Champat Rai) ಗಂಭೀರ ಆರೋಪ ಮಾಡಿದ್ದಾರೆ.
ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಕೂಡ ಚಂಪತ್ ರಾಯ್ ಚಾಲಕನಾಗಿದ್ದ. ಇಡೀ ಹಗರಣದ ಹಿಂದಿನ ಪ್ರಮುಖ ವ್ಯಕ್ತಿ ಟಿನ್ನು ಯಾದವ್ ಎಂದು ಚಂಪತ್ ರಾಯ್ ಒಪ್ಪಿಕೊಂಡಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ. ಇದನ್ನೂ ಓದಿ: Ram Mandir Donation Row | 77.85 ಲಕ್ಷ ಹಣ, 1121 ಡಾಲರ್ ಕರೆನ್ಸಿ ಜಪ್ತಿ – ರಾಮನ ದೇಣಿಗೆ ಕದ್ದವರ ಮನೆಯಲ್ಲಿ ಸಿಕ್ಕಿದ್ದೇನು?
ಟಿನ್ನು ಯಾದವ್ ಪೊಲೀಸರಿಗೆ ಸಿಕ್ಕಿ ಬೀಳುವ ಮೊದಲು, ಪ್ರಕರಣ ಸಂಬಂಧ ಸಮಾಜವಾದಿ ನಾಯಕರೊಬ್ಬರಿಗೆ ಮಾಹಿತಿ ಸೋರಿಕೆ ಮಾಡಿದ್ದ ಎಂದು ಮೂಲಗಳು ತಿಳಿಸಿವೆ. ದೇಣಿಗೆ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ ಎಂಟು ಆರೋಪಿಗಳಲ್ಲಿ ಟಿನ್ನು ಯಾದವ್ ಒಬ್ಬ. ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ ಮತ್ತು ಸುಭಾಷ್ ಶ್ರೀವಾಸ್ತವ ಬಂಧಿತರಾಗಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಚಂಪತ್ ರಾಯ್ ಅವರ ಹೇಳಿಕೆಯನ್ನು ಸಹ ದಾಖಲಿಸಿಕೊಂಡಿದ್ದಾರೆ. ಅವರನ್ನು ಯಾವಾಗ, ಎಲ್ಲಿ, ಅಥವಾ ಎಷ್ಟು ಸಮಯದವರೆಗೆ ವಿಚಾರಣೆಗೆ ಒಳಪಡಿಸಲಾಯಿತು ಎಂಬುದು ತಿಳಿದಿಲ್ಲ. ಕಾಣಿಕೆಗಳ ದುರುಪಯೋಗಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸುವಂತೆ ಅವರನ್ನು ಕೇಳಲಾಗಿದೆ. ಇದನ್ನೂ ಓದಿ: Ram Temple Donation Theft| ಆರೋಪಿ ಮನೆಯಲ್ಲಿ ನಕಲಿ ‘ರಾಮರಾಜ್ಯ ಕೋಶ’ ಪೆಟ್ಟಿಗೆ, ಕ್ಯೂಆರ್ ಕೋಡ್ ಪತ್ತೆ!
ಕಳ್ಳತನ ಪ್ರಕರಣ ಸ್ಫೋಟಗೊಂಡ ನಂತರ ಜೂನ್ 27 ರಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚಂಪತ್ ರಾಯ್ ರಾಜೀನಾಮೆ ನೀಡಿದರು. ಟ್ರಸ್ಟಿ ಅನಿಲ್ ಮಿಶ್ರಾ ಕೂಡ ಅವರೊಂದಿಗೆ ರಾಜೀನಾಮೆ ನೀಡಿದ್ದರು.
