ಅಯೋಧ್ಯೆ: ಶ್ರೀರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ (Ram Mandir Donation Row) ತನಿಖೆ ನಡೆಸುತ್ತಿರುವ ಅಯೋಧ್ಯೆಯ ರಾಮ ಜನ್ಮಭೂಮಿ ಠಾಣೆ ಪೊಲೀಸರು ಆರೋಪಿಗಳಿಂದ ಈವರೆಗೆ ಒಟ್ಟು 77.85 ಲಕ್ಷ ರೂ. ಹಾಗೂ 1121 ಡಾಲರ್ ಕರೆನ್ಸಿಯನ್ನ ಜಪ್ತಿ ಮಾಡಿರುವುದಾಗಿ ತಿಳಿದುಬಂದಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (RamJanmabhoomi Teerth Kshetra Trust) ಈಗಾಗಲೇ ದೇಣಿಗೆ ಹಗರಣದ ಕುರಿತು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಸಿದ್ಧತೆ ನಡೆಸುತ್ತಿದೆ. ಜುಲೈ 6 ರಂದು ಅಯೋಧ್ಯೆಯಲ್ಲಿ ಟ್ರಸ್ಟ್‌ನ ಮಹತ್ವದ ಸಭೆ ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Ram Temple Donation Theft| ಆರೋಪಿ ಮನೆಯಲ್ಲಿ ನಕಲಿ ‘ರಾಮರಾಜ್ಯ ಕೋಶ’ ಪೆಟ್ಟಿಗೆ, ಕ್ಯೂಆರ್ ಕೋಡ್ ಪತ್ತೆ!
ಅಲ್ಲದೇ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ (Champat Rai) ಮತ್ತು ಸದಸ್ಯ ಅನಿಲ್ ಮಿಶ್ರಾ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಸಭೆಯಲ್ಲಿ ಟ್ರಸ್ಟ್‌ನ ಈ ಇಬ್ಬರು ಹಿರಿಯ ಸದಸ್ಯರ ರಾಜೀನಾಮೆ ಕುರಿತು ಚರ್ಚಿಸುವ ಸಾಧ್ಯತೆಗಳೂ ಇವೆ. ಇದನ್ನೂ ಓದಿ: ಗೋಹತ್ಯೆ ಸಂಪೂರ್ಣ ನಿಷೇಧ – ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ತ.ನಾಡು ಸರ್ಕಾರ ಮೇಲ್ಮನವಿ

ಈ ಮಧ್ಯೆ ಅಯೋಧ್ಯೆ ಪೊಲೀಸರು ಎಲ್ಲಾ ಆರೋಪಿಗಳಿಂದ ಈವರೆಗೆ ವಶಪಡಿಕೊಂಡ ದೇಣಿಗೆ ವಿವರಗಳನ್ನ ಬಹಿರಂಗಪಡಿಸಿದ್ದಾರೆ. ಒಟ್ಟು 77.85 ಲಕ್ಷ ರೂ. ನಗದು ಹಾಗೂ 1121 ಯುಎಸ್ ಡಾಲರ್ ಕರೆನ್ಸಿಯನ್ನ ಜಪ್ತಿ ಮಾಡಿರುವುದಾಗಿ ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ ದಾಖಲೆಗಳಲ್ಲಿ ತಿಳಿಸಿದ್ದಾರೆ.
ಆರೋಪಿ ಯಾರು? – ಅವರ ಬಳಿ ಸಿಕ್ಕಿದ್ದೇನು?
1. ಆರೋಪಿ: ಮನೀಶ್ ಕುಮಾರ್ ಯಾದವ್
ತಂದೆಯ ಹೆಸರು: ದಿ. ಸುಧೀರ್ ಕುಮಾರ್ ಯಾದವ್
ನಿವಾಸಿ: ಸ್ವರ್ಗದ್ವಾರ, ನಯಘಾಟ್, ಅಯೋಧ್ಯಾ
ವಶಪಡಿಸಿಕೊಂಡ ಹಣ: ಒಟ್ಟು 2,00,000 ರೂ. ನಗದು
2. ಆರೋಪಿ: ಕರುಣೇಶ್ ಪಾಂಡೆ
ತಂದೆಯ ಹೆಸರು: ರಾಮರಾಜ್ ಪಾಂಡೆ
ನಿವಾಸಿ: ತಲ್ಧೋರಿ, ಮಿಲ್ಕಿಪುರ, ಖಾಂದಸಾ ಪೊಲೀಸ್ ಠಾಣೆ, ಅಯೋಧ್ಯಾ
ವಶಪಡಿಸಿಕೊಂಡ ಹಣ: ಒಟ್ಟು 18,07,063 ರೂ. ನಗದು

3. ಆರೋಪಿ: ಅನುಕಲ್ಪ್ ಮಿಶ್ರಾ
ತಂದೆಯ ಹೆಸರು: ರವೀಂದ್ರ ಕುಮಾರ್ ಮಿಶ್ರಾ
ನಿವಾಸಿ: ಕೌಶಲಪುರಿ, ಅಯೋಧ್ಯಾ
ವಶಪಡಿಸಿಕೊಂಡ ಹಣ: ಒಟ್ಟು 16,82,040 ರೂ. ನಗದು
4. ಆರೋಪಿ: ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು
ತಂದೆಯ ಹೆಸರು: ಶ್ರೀ ತುಳಸಿರಾಮ್ ಯಾದವ್
ನಿವಾಸಿ: 993 ಸ್ವರ್ಗದ್ವಾರ, ನಯಾಘಾಟ್, ಅಯೋಧ್ಯೆ
ವಶಪಡಿಸಿಕೊಂಡ ಹಣ: 1,00,000 ರೂ. ನಗದು
5. ಆರೋಪಿ: ರಾಮಂಕರ್ ಮಿಶ್ರಾ
ತಂದೆಯ ಹೆಸರು: ಛದ್ಯುಲಾಲ್ ಮಿಶ್ರಾ
ನಿವಾಸಿ: ಮೀರ್ಪುರ್ ರಾಮಸಖಾ ಬಾಗಿಯಾ, ಅಯೋಧ್ಯೆ
ವಶಪಡಿಸಿಕೊಂಡ ಹಣ: ಒಟ್ಟು 7,32,170 ನಗದು, 2 ಬಿಳಿ ಲೋಹದ ನಾಣ್ಯಗಳು ಮತ್ತು 1 ಜೊತೆ ಕಾಲುಂಗುರ (24.72 ಗ್ರಾಂ ತೂಕ)
6. ಆರೋಪಿ: ಲವಕುಶ್ ಮಿಶ್ರಾ
ತಂದೆಯ ಹೆಸರು: ರಾಜೇಶ್ ಕುಮಾರ್ ಮಿಶ್ರಾ
ನಿವಾಸಿ: ಠಾಕುರಾನ್ ಫೈಗೋಳಿ, ರುದೌಲಿ ಪೊಲೀಸ್ ಠಾಣೆ, ಅಯೋಧ್ಯೆ
ವಶಪಡಿಸಿಕೊಂಡ ಹಣ: ಒಟ್ಟು 14,25,000 ರೂ. ನಗದು
7. ಆರೋಪಿ: ಅವಿನಾಶ್ ಶುಕ್ಲಾ
ತಂದೆಯ ಹೆಸರು: ರಾಮ್ ಸಜೀವನ್ ಶುಕ್ಲಾ
ನಿವಾಸಿ: ಬಾಬುಪುರ, ಮಹೇಶ್‌ಗಂಜ್ ಪೊಲೀಸ್ ಠಾಣೆ, ಪ್ರತಾಪ್‌ಗಢ
ಪ್ರಸ್ತುತ ವಿಳಾಸ: ಕೌಶಲಪುರಿ ಕಾಲೋನಿ, ಮಧುಬನ್ ಡೈರಿಯ ಹಿಂದೆ, ಅಯೋಧ್ಯೆ
ವಶಪಡಿಸಿಕೊಂಡ ಹಣ & ವಸ್ತು: 20,39,220 ರೂ. ನಗದು, 1121 ಅಮೆರಿಕನ್ ಡಾಲರ್ಸ್, ಬೆಳ್ಳಿಯಂತಹ ಲೋಹ (159.54 ಗ್ರಾಂ), 1 ಪಯಾಲಿ ಲೋಹದ (ವೈಟ್ ಮೆಟಲ್ ಮಾದರಿಯಲ್ಲಿರುತ್ತದೆ) ಸರಪಳಿ (8.14 ಗ್ರಾಂ), 1 ಹಳದಿ ಲೋಹ (3.44 ಗ್ರಾಂ)
ಸದ್ಯ ಜುಲೈ 7 ರಂದು ನಿಗದಿಯಾಗಿದ್ದ ಸಭೆಯನ್ನ ಒಂದು ದಿನ ಮುಂಚಿತವಾಗಿಯೇ ನಡೆಸಲು ನಿರ್ಧಾರ ಮಾಡಿದ್ದು, ಸಭೆಯ ಮೇಲೆ ಜನರ ಚಿತ್ತ ನೆಟ್ಟಿದೆ.
