ನವದೆಹಲಿ: ಬಕ್ರೀದ್ (Bakrid) ಸೇರಿದಂತೆ ಇತರೆ ಬೇರೆ ಯಾವುದೇ ದಿನ ಹಸು ಮತ್ತು ಕರುಗಳ ವಧೆಯನ್ನು ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್‌ನ ನೀಡಿದ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ತಮಿಳುನಾಡು (Tamil Nadu) ಸರ್ಕಾರದ ಪಶುಸಂಗೋಪನೆ, ಹಾಲು ಉತ್ಪಾದನೆ, ಮೀನುಗಾರಿಕೆ ಮತ್ತು ಮೀನುಗಾರರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಇದನ್ನೂ ಓದಿ: ಡಿಕೆಶಿ ಕನಸಿನ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್‌ಗೆ ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್ ವಿರೋಧ
ಅರ್ಜಿಯಲ್ಲಿ ತಮಿಳುನಾಡು ಸರ್ಕಾರವು ಹೈಕೋರ್ಟ್ ತನ್ನ ಮೂಲ ಅರ್ಜಿಯ ವ್ಯಾಪ್ತಿಯನ್ನು ಮೀರಿ ಆದೇಶ ಹೊರಡಿಸಿದೆ ಎಂದು ವಾದಿಸಿದೆ. ಕೊಯಂಬತ್ತೂರ್‌ನಲ್ಲಿ ಬಕ್ರೀದ್ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಸುಗಳ ವಧೆ ತಡೆಯುವ ಬಗ್ಗೆ ಮಾತ್ರ ಮೂಲ ಅರ್ಜಿ ಇತ್ತು. ಆದರೆ ಹೈಕೋರ್ಟ್ ರಾಜ್ಯದಾದ್ಯಂತ ಹಸು ವಧೆಗೆ ಸಂಪೂರ್ಣ ನಿಷೇಧ ಹೇರಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಕೆ.ಆರ್ ಪುರಂ ತ್ರಿವಳಿ ಕೊಲೆ ಕೇಸ್; ಸಾಕ್ಷ್ಯ ಸಂಗ್ರಹಕ್ಕೆ ಘಟನೆ ಮರುಸೃಷ್ಟಿ ಮಾಡಿಸಿದ ಪೊಲೀಸರು
ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958, ನಗರ ಸ್ಥಳೀಯ ಸಂಸ್ಥೆಗಳ ಕಾಯ್ದೆ 1998 ಮತ್ತು ಇತರ ನಿಯಮಗಳು ಹಸು ವಧೆಯನ್ನು ನಿಯಂತ್ರಿಸುವುದನ್ನು ಬೆಂಬಲಿಸುತ್ತವೆಯೇ ಹೊರತು ಪೂರ್ಣ ನಿಷೇಧವನ್ನಲ್ಲ. ಹೈಕೋರ್ಟ್ ಧಾರ್ಮಿಕ ವಿಷಯಗಳ ಬಗ್ಗೆ (ಇಸ್ಲಾಮ್‌ನಲ್ಲಿ ಹಸು ಬಲಿ ಅಗತ್ಯವೇ ಎಂಬುದು) ಚರ್ಚಿಸಿದ್ದು ಅನಗತ್ಯ ಮತ್ತು ಅರ್ಜಿಯ ವ್ಯಾಪ್ತಿಗೆ ಮೀರಿದೆ. ಇದನ್ನೂ ಓದಿ: ಹೆಂಡತಿ ದಪ್ಪಗಿದ್ದಾಳೆಂದು ಕತ್ತು ಹಿಸುಕಿ ಕೊಲೆಗೈದ ಪತಿ – ವರದಕ್ಷಿಣೆ ಕಿರುಕುಳ ಆರೋಪ
ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸುವಂತೆ ಮತ್ತು ಹೈಕೋರ್ಟ್ ಆದೇಶಕ್ಕೆ ತಾತ್ಕಾಲಿಕ ಸ್ಥಗಿತ ಹೇರಿಸುವಂತೆ ಕೋರಿದೆ. ವಕೀಲ ಜಯಶ್ರೀ ನರಸಿಂಹನ್ ಅವರು ಅರ್ಜಿಯನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ: ಶುದ್ಧ ಚಿನ್ನದಲ್ಲೇ ಒಳ ಉಡುಪು, 146 ಕೋಟಿ ಕ್ಯಾಶ್, ಗೋಪುರದ ರೀತಿ ಹಣ ಸಂಗ್ರಹ – ಜಗತ್ತಿನ ಅತಿದೊಡ್ಡ ಭ್ರಷ್ಟ ಸಂಸದೆ ಲಾಕ್
