– ಭ್ರಷ್ಟರ ವಿರುದ್ಧ ಹೋರಾಡಿದವಳೇ ಈ ಭ್ರಷ್ಟಾಚಾರ ಕೇಸಲ್ಲಿ ಅರೆಸ್ಟ್
– ಇರಾಕ್ ಸಂಸದರು, ಸರ್ಕಾರಿ ಅಧಿಕಾರಿಗಳ ವಿರುದ್ಧ ಬಿಗ್ ಆಪರೇಷನ್
– ಬರೋಬ್ಬರಿ 3 ಸಾವಿರ ಕೋಟಿ ಹಣ, ಚಿನ್ನಾಭರಣ ಸೀಜ್
ಬಾಗ್ದಾದ್: ಇರಾಕ್‌ನಲ್ಲಿ (Iraq) ಅತಿದೊಡ್ಡ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ನಡೆಸಲಾಗಿದೆ. ಇರಾಕ್ ಸಂಸದರು ಮತ್ತು ಸರ್ಕಾರಿ ಅಧಿಕಾರಿಗಳ ಮನೆಗಳಿಂದ ಸುಮಾರು 3 ಸಾವಿರ ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದು ಪತ್ತೆಯಾಗಿದೆ.
ಪ್ರಧಾನಿ ಅಲಿ ಅಲ್ ಜೈದಿ ನಿರ್ದೇಶನದ ಮೇರೆಗೆ ದಾಳಿ ನಡೆಸಲಾಯಿತು. ಇರಾಕ್‌ನ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯಲ್ಲಿ ಹಲವಾರು ಸಂಸದರು ಮತ್ತು ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಇತರೆ ಸ್ಥಳಗಳಿಂದ ಸುಮಾರು 3 ಸಾವಿರ ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: 40 ಡಿಗ್ರಿ ತಾಪಮಾನಕ್ಕೆ ಕರಗುತ್ತಿವೆ ಯುರೋಪ್ ರಸ್ತೆಗಳು – ಭಾರತದಲ್ಲಿ 55 ಡಿಗ್ರಿ ಬಿಸಿಲಿದ್ದರೂ ಹೈವೇಗಳು ಗಟ್ಟಿಯಾಗಿದೆ ಯಾಕೆ?
ಇರಾಕ್ ಸಂಸದೆ ಆಲಿಯಾ ನಾಸಿಫ್ (Alia Nassif) ಅವರ ಮನೆಯಿಂದ ಅಧಿಕಾರಿಗಳು 20 ಬಿಲಿಯನ್ ಇರಾಕಿ ದಿನಾರ್‌ಗಳು (146 ಕೋಟಿ ರೂ.) ಮತ್ತು ಅಪಾರ ಪ್ರಮಾಣದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆಲಿಯಾ ಮತ್ತು ಆಕೆಯ ಮಗನನ್ನು ಬಂಧಿಸಲಾಗಿದೆ.
اكثر من 20 مليار دينار، وكميات من الذهب عثر عليها في منزل النائبة عالية نصيف، التي تم اعتقالها مع ابنها (سجاد) الذي كان يشغل مدير امن مكتب رئيس الوزراء محمد السوداني. pic.twitter.com/3HP3yzSQxm
— ابو مريم (@AMrym93884) June 28, 2026
ಯಾರು ಈ ಆಲಿಯಾ ನಾಸಿಫ್?
ಈ ಹಿಂದೆ ಮಾಜಿ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುಡಾನಿ ಜೊತೆಯಲ್ಲಿ ಕೆಲಸ ಮಾಡಿದ್ದ ಆಲಿಯಾ ನಾಸಿಫ್, ಸ್ಟೇಲ್ ಆಫ್ ಲಾ ಕೋಲಿಷನ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಈ ಹಿಂದೆ ಭ್ರಷ್ಟಾಚಾರದ ವಿರುದ್ಧ ಮಾತನಾಡಿ ಖ್ಯಾತಿ ಗಳಿಸಿದ್ದರು. ಈಗ ಖುದ್ದು ಅಪಾರ ಪ್ರಮಾಣದ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಲಾಕ್ ಆಗಿದ್ದಾರೆ.
ಸಂಸದೆಯ ಮನೆಯಲ್ಲಿ ಕೋಟಿ ಕೋಟಿ ಹಣ, ಚಿನ್ನಾಭರಣ ಪತ್ತೆಯಾಗಿದೆ. ಇರಾನ್ ಸಂಸದೆ ಶುದ್ಧ ಚಿನ್ನದಲ್ಲಿ ಒಳ ಉಡುಪು ಮಾಡಿಸಿಕೊಂಡಿದ್ದಾರೆ. ಮನೆಯಲ್ಲಿ ಬರೋಬ್ಬರಿ 146 ಕೋಟಿ ನಗದು ಪತ್ತೆಯಾಗಿದೆ. ಗೋಪುರದ ರೀತಿಯಲ್ಲಿ ಹಣ ಹೊಂದಿಸಿಟ್ಟುರುವುದು ಬೆಳಕಿಗೆ ಬಂದಿದೆ. ಸುಮಾರು 805 ಕೋಟಿಯಷ್ಟು ಆಸ್ತಿ ಪತ್ರಗಳು ಪತ್ತೆಯಾಗಿವೆ. ಕಳೆದ ತಿಂಗಳು ಬಂಧನಕ್ಕೊಳಪಟ್ಟ ಮಾಜಿ ಸಚಿವ ಅದ್ನಾನ್ ಅಲ್ ಜುಮೈಲಿ ಮಾಹಿತಿ ಮೇರೆಗೆ ದಾಳಿ ನಡೆದಿತ್ತು.
ಮನೆಯಲ್ಲಿ ಹೂತಿಟ್ಟಿದ್ದ ಶತಕೋಟಿ ಇರಾಕಿ ದಿನಾರ್ ವಶಕ್ಕೆ
ಮನೆಯ ಕೆಳಗೆ ಹೂತ್ತಿಟ್ಟಿದ್ದ ಶತಕೋಟಿ ಇರಾಕಿ ದಿನಾರ್ ವಶಕ್ಕೆ ಪಡೆಯಲಾಗಿದೆ. ಕಳೆದ ವಾರ ಕೆಲವು ಖಾಸಗಿ ಮನೆಗಳ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ಸುಮಾರು ಸಾವಿರ ಕೋಟಿಯಷ್ಟು ಇರಾಕ್ ಕರೆನ್ಸಿಯನ್ನು ಹೂತಿಡಲಾಗಿತ್ತು. ಅತಿದೊಡ್ಡ ಭ್ರಷ್ಟಾಚಾರ ವಿರೋಧಿ ಕಾರ್ಯಚರಣೆ ಭಾಗವಾಗಿ ಅಧಿಕಾರಿಗಳು ಕೋಟಿ ಕೋಟಿ ಹಣ ವಶಕ್ಕೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ವಲಸಿಗರ ವಿರುದ್ಧ ಬಡಿಗೆ ಹಿಡಿದು ಬೀದಿಗಿಳಿದ ಸಾವಿರಾರು ಜನ
ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಪ್ರಧಾನಿ ಅಲಿ ಅಲ್ ಜೈದಿ, ದೇಶದಲ್ಲಿ ಭ್ರಷ್ಟಾಚಾರ ಜಾಲಗಳನ್ನು ಹತ್ತಿಕ್ಕುವುದಾಗಿ ಭರವಸೆ ನೀಡಿದ್ದರು.
