– ಜಮೀನಿನಿಂದ ಜಾಗ ಖಾಲಿ ಮಾಡುವಂತೆ ಮುಸ್ಲಿಂ ಮಹಿಳೆಗೆ ಬೆದರಿಕೆ
– ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಆರೋಪ
ಡೆಹ್ರಾಡೂನ್: ಉತ್ತರಾಖಂಡದಲ್ಲಿ 4 ಎಕ್ರೆ ಭೂಮಿ ಕಬಳಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಮತ್ತು ಅವರ ಪತಿ ರಾಬರ್ಟ್ ವಾದ್ರಾ (Robert Vadra) ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಜಮೀನಿನಿಂದ ಜಾಗ ಖಾಲಿ ಮಾಡುವಂತೆ 90 ವರ್ಷದ ವೃದ್ಧೆಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಬಿಜೆಪಿ (BJP) ಆರೋಪಿಸಿದೆ. ಸದ್ಯ ಈ ಬಗ್ಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅಥವಾ ಪತಿ ರಾಬರ್ಟ್ ವಾದ್ರಾ ಅವರಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಓದಿ: ಶಿವಾಜಿ ಮಹಾರಾಜರ ಶೌರ್ಯಕ್ಕೆ ಸಾಕ್ಷಿಯಾದ ಕೋಟೆಗೆ ʻಸಿಯಾ ಪಾಯಿಂಟ್ʼ ಹೆಸರು ಕಳಂಕ – ಸ್ಥಳೀಯರ ಆಕ್ರೋಶ

ಉತ್ತರಾಖಂಡದಲ್ಲಿಂದು (Uttarakhand) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ (Pradeep Bhandari), ಗಾಂಧಿ – ವಾದ್ರಾ ಕುಟುಂಬದ ನಿಜವಾದ ವ್ಯವಹಾರ ರಾಜಕೀಯ ಅಲ್ಲ, ಜನರ ಭೂಮಿ ಕಬಳಿಸುವುದು. ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರ ಸಹೋದರಿ ಸಾಯಿರಾ ವಾದ್ರಾ, ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಕಿಚ್ಚಾದಲ್ಲಿ 4 ಎಕ್ರೆ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆ ನಾಲ್ಕು ಎಕ್ರೆ ಜಮೀನಿನ ಮೂಲ ಭೂ ಗುತ್ತಿಗೆ ದಿವಂಗತ ಕುಲ್ಸುಮ್ ಖಾನ್ ಹೆಸರಿನಲ್ಲಿದೆ. ಪ್ರಸ್ತುತ ಆ ಆಸ್ತಿಯನ್ನ ಅವರ 90 ವರ್ಷದ ಸಹೋದರಿ ನಸ್ರೀನ್ ಖಾನ್ ನೋಡಿಕೊಳ್ಳುತ್ತಿದ್ದಾರೆ. ಬುಧವಾರ (ಜು.2) ತಡರಾತ್ರಿ ಕಿಚ್ಚಾ ಕ್ಷೇತ್ರದ ಕಾಂಗ್ರೆಸ್ ಶಾಸಕ ತಿಲಕ್ ರಾಜ್ ಬೆಹಾರ್, ಸುಮಾರು 100 ಬೆಂಬಲಿಗರೊಂದಿಗೆ ಬಂದು, ನಸ್ರೀನ್ ಖಾನ್ ಅವರು ಜಮೀನನ್ನ ಖಾಲಿ ಮಾಡದಿದ್ರೆ, ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರಿದ್ದಾರೆ.

ಮುಂದುವರಿದು…. ಕಾನೂನು ಮಾರ್ಗಗಳು ವಿಫಲವಾದಾಗ ಕಾಂಗ್ರೆಸ್ ನಾಯಕರು ಜನರನ್ನ ಬೆದರಿಸುವ ಕೆಲಸ ಮಾಡ್ತಾರೆ. ಹಾಗೆಯೇ ಸಾಯಿರಾ ವಾದ್ರಾ ಕಾನೂನು ಮಾರ್ಗದಿಂದ ಪಡೆಯೋಕಾಗಲ್ಲ ಅನ್ನೋದು ಗೊತ್ತಾಗಿ ವೃದ್ಧಯನ್ನ ಬೆದರಿಸುತ್ತಿದ್ದಾರೆ. ಆದ್ರೆ ನಿಜವಾಗಿಯೂ ಇದರ ಹಿಂದಿರೋದು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಪತಿ ರಾಬರ್ಟ್ ವಾದ್ರಾ ಭಂಡಾರಿ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಇರಾನ್ ಯುದ್ಧದಿಂದ ತೈಲ ಕಂಪನಿಗಳಿಗೆ 74,781 ಕೋಟಿ ನಷ್ಟ – ಹರ್ದೀಪ್ ಸಿಂಗ್ ಪುರಿ
ಇದು ಸುಳ್ಳಲ್ಲ, ಖುದ್ದು ನಸ್ರೀನ್ ಖಾನ್ ಅವರ ಹೇಳಿಕೆಯನ್ನು ಪಡೆದೇ ಹೇಳುತ್ತಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಆಸ್ತಿಯನ್ನ ವಾದ್ರಾ ಕುಟುಂಬಕ್ಕೆ ಹಸ್ತಾಂತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಸ್ರೀನ್ ಖಾನ್ ಹೇಳಿಕೊಂಡಿದ್ದಾರೆ. ಈ ವಿಷಯದಲ್ಲಿ ಪ್ರಿಯಾಂಕಾ ಗಾಂಧಿ ಅವರ ಕೈವಾಡ ಇದೆ. ಪ್ರಿಯಾಂಕಾ ಅವ್ರೇ ಕಾಂಗ್ರೆಸ್ ಶಾಸಕರಿಗೆ ಕರೆ ಮಾಡಿ 90 ವರ್ಷದ ವೃದ್ಧೆಯನ್ನ ಬೆದರಿಸಿ, ಭೂಮಿ ಸ್ವಾಧೀನಪಡಿಸಿಕೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಸ್ಲಿಮರು ಮತ್ತು ಬಡವರ ಪರ ನಿಲ್ಲುವುದಾಗಿ ಹೇಳಿಕೊಳ್ಳುತ್ತದೆ. ಆದ್ರೆ, 90 ವರ್ಷದ ಮುಸ್ಲಿಂ ಮಹಿಳೆಯೊಬ್ಬರಿಗೆ ತಮ್ಮ ಜಮೀನು ಖಾಲಿ ಮಾಡುವಂತೆ ಬೆದರಿಕೆ ಹಾಕಲಾಗುತ್ತಿದೆ. ಕಾಂಗ್ರೆಸ್ ಯಾವುದೇ ಒಂದು ಜಾಗದ ಮೇಲೆ ಕಣ್ಣಿಟ್ಟರೂ, ಅದನ್ನ ಪಡೆಯೋವರೆಗೆ ಬಿಡಲ್ಲ. ತಮ್ಮ ಬೆಂಬಲಿಗರನ್ನ ಕಳಿಸಿ ಪದೇ ಪದೇ ಬೆದರಿಕೆ ಹಾಕ್ತಾರೆ, ದೇಶದ ಜನ ಇದನ್ನ ಅರ್ಥಮಾಡಿಕೊಳ್ಳಬೇಕು ಎಂದು ಭಂಡಾರಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕೊಡಗಿನ ರಿಯಾಜ್ ನಜೀರ್ ಈಗ ಅಬುಧಾಬಿಯಲ್ಲಿ ಲೋಕೋ ಪೈಲಟ್!
