-ನೀರಿನಲ್ಲಿ ಮುಳುಗಡೆಯಾದ ಗಂಗಾ ಘಟ್ಟ
ಪಾಟ್ನಾ: ನೇಪಾಳ ಮತ್ತು ನೆರೆಯ ಜಾರ್ಖಂಡ್ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಾರಣಾಸಿಯಲ್ಲಿ ಗಂಗಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಇತ್ತ ಬಿಹಾರದಲ್ಲಿ (Bihar) ಪ್ರವಾಹದ ಭೀತಿ ಶುರುವಾಗಿದ್ದು, ಮುಳುಗಡೆ ಆತಂಕ ಎದುರಾಗಿದೆ.
ಗಂಗಾ, ಗಂಡಕ, ಕೋಸಿ, ಬುರ್ಹಿ ಗಂಡಕ, ಬಾಗ್ಮತಿ, ಪುನಪುನ್ ಮತ್ತು ಘಘ್ರಾ ನದಿಗಳು ಉಕ್ಕಿ ಹರಿಯುತ್ತಿದ್ದು, ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಪ್ರಭಾವಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಇದನ್ನೂ ಓದಿ: ಖರ್ಗೆ ಭಾಷಣ ಸ್ಥಳ ಶುದ್ಧೀಕರಣ ವಿವಾದ – ಬೆಂಗ್ಳೂರಲ್ಲಿ ದಾಖಲಾಗಿದ್ದ FIR ಉತ್ತರಾಖಂಡಕ್ಕೆ ವರ್ಗಾವಣೆ
ಪಾಟ್ನಾ, ವೈಶಾಲಿ, ಮುಝಫರ್ಪುರ, ಭಾಗಲ್ಪುರ, ಭೋಜ್ಪುರ, ಖಾಗರಿಯಾ, ಪೂರ್ಣಿಯಾ, ಮಾಧೇಪುರ, ಸಹರ್ಸಾ ಮತ್ತು ಕತಿಹಾರ್ ಜಿಲ್ಲೆಗಳ ಹಲವು ತಗ್ಗು ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಈವರೆಗೆ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ತಿಳಿದುಬಂದಿದೆ.
ಧಾರಾಕಾರ ಮಳೆಯ ನಂತರ ಗಂಗಾ ಮತ್ತು ಕೋಸಿ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದು, ಪಾಟ್ನಾ, ಭೋಜ್ಪುರ, ವೈಶಾಲಿ, ಲಖಿಸರಾಯ್ ಮತ್ತು ಭಾಗಲ್ಪುರದಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಪಾಕ್ ಲಷ್ಕರ್ ಕಮಾಂಡರ್ ಬಲಿ
