ಧಾರವಾಡ: ಕರ್ತವ್ಯದ ಮೇಲಿದ್ದಾಗಲೇ ಹೃದಯಾಘಾತದಿಂದ (Heart Attack) ಶಾಲಾ ಮುಖ್ಯ ಶಿಕ್ಷಕ (Head Teacher) ಸಾವನ್ನಪ್ಪಿದ ಘಟನೆ ಧಾರವಾಡ (Dharwad) ನಗರದ ಮಾಳಮಡ್ಡಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಐಐ ಮುಲ್ಲಾನವರ್ (59) ಹೃದಯಾಘಾತದಿಂದ ಸಾವನ್ನಪ್ಪಿದ ಮುಖ್ಯ ಶಿಕ್ಷಕ. ಕಳೆದ ಎರಡು ದಿನಗಳ ಹಿಂದೆ ಶುಕ್ರವಾರ ಶಾಲೆಯಲ್ಲಿ ಇದ್ದಾಗಲೇ ಹೃದಯಾಘಾತವಾಗಿತ್ತು. ಈ ವೇಳೆ ಶಾಲೆಯಲ್ಲಿ ಇದ್ದ ಶಿಕ್ಷಕರು ಮುಖ್ಯ ಶಿಕ್ಷಕ ಮುಲ್ಲಾನವರನ್ನು ಆಸ್ಪತ್ರೆಗೆ ರವಾನೆ ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮುಖ್ಯ ಶಿಕ್ಷಕ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸರ್ಕಾರಿ ಗೋಮಾಳ, ಕೆರೆ ಜಾಗ ಒತ್ತುವರಿ ಆರೋಪ – ನಾಲ್ಕು ಲಾರಿ, ಟ್ರ‍್ಯಾಕ್ಟರ್ ಸೀಜ್
ಶುಕ್ರವಾರ ಸಂಜೆ ಮುಖ್ಯ ಶಿಕ್ಷಕ ಸಾವನ್ನಪ್ಪಿದ ಹಿನ್ನೆಲೆ ಶಿಕ್ಷಕರ ದಿನಾಚರಣೆ ದಿನವೇ ಮುಲ್ಲಾನವರ ಕುಟುಂಬದವರು ಅವರ ಅಂತ್ಯಕ್ರಿಯೆ ಮಾಡಿದ್ದಾರೆ. ಇದನ್ನೂ ಓದಿ: ಸಚಿವ ಬಾಲಕೃಷ್ಣರ ಕಾರು ತಡೆದು, ದೃಷ್ಟಿ ತೆಗೆದು ಊಟಕ್ಕೆ ಕರೆದ ವೃದ್ಧೆ
