ರಾಮನಗರ: ರಸ್ತೆಯಲ್ಲಿ ತೆರಳುತ್ತಿದ್ದ ಸಚಿವ ಬಾಲಕೃಷ್ಣ (H C Balakrishna) ಅವರ ಕಾರನ್ನು ತಡೆದು ವೃದ್ಧೆಯೊಬ್ಬರು, ಸಚಿವರನ್ನು ಊಟಕ್ಕೆ ಕರೆದ ಪ್ರಸಂಗ ನಡೆಯಿತು. ಸಚಿವರಿಗೆ ದೃಷ್ಟಿ ತೆಗೆದು, ನಿನಗೆ ಒಳ್ಳೆಯದು ಆಗಲಪ್ಪ ಅಂತ ವೃದ್ಧೆ ಆಶೀರ್ವದಿಸಿದರು.
ಮಾಗಡಿಗೆ ತೆರಳುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಬಾಲಕೃಷ್ಣರ ಕಾರನ್ನು ತಡೆದು ದೇವಮ್ಮ ಎಂಬ ವೃದ್ಧೆಯೊಬ್ಬರು ಆತ್ಮೀಯವಾಗಿ ಮಾತುಕತೆ ನಡೆಸಿದರು. ಈ ಸಂಭಾಷಣೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ವೃದ್ಧೆ ದೇವಮ್ಮ ಸಚಿವರ ಕಾರನ್ನು ನಿಲ್ಲಿಸಿ ಆತ್ಮೀಯವಾಗಿ ಮಾತನಾಡಿಸಿದರು. ಚುನಾವಣೆ ವೇಳೆ ನೀನು ನಮ್ಮ ಮನೆ ಬಳಿ ಬಂದಿದ್ದೆ. ಆಗ ನಾನು ನಿನಗೆ ಗೆಲ್ಲಲಿ ಎಂದು ಆಶೀರ್ವಾದ ಮಾಡಿದ್ದೆ. ಈಗ ನೀನು ಮಂತ್ರಿಯಾಗಿದ್ದೀಯಾ. ನಿನಗೆ ಇನ್ನಷ್ಟು ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ಸರ್ಕಾರಿ ಗೋಮಾಳ, ಕೆರೆ ಜಾಗ ಒತ್ತುವರಿ ಆರೋಪ – ನಾಲ್ಕು ಲಾರಿ, ಟ್ರ‍್ಯಾಕ್ಟರ್ ಸೀಜ್
ಇದೇ ವೇಳೆ, ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವರು ಮಾಡುವ ರಾಜಕೀಯ ಟೀಕೆಗಳನ್ನು ನೆನಪಿಸಿಕೊಂಡ ವೃದ್ಧೆ, ಕುಮಾರಸ್ವಾಮಿಗೆ ಹಾಗೆ ಬೈತೀಯಲ್ಲ, ನಿನಗೆ ಎಷ್ಟು ಧೈರ್ಯ? ಎಂದು ತಮಾಷೆಯಾಗಿ ಮಾತನಾಡುತ್ತಾ ಮನೆಗೆ ಬಾ, ಊಟ ಮಾಡು ಎಂದು ಆಹ್ವಾನಿಸಿದ್ದಾರೆ. ಇಷ್ಟೇ ಅಲ್ಲದೆ, ನಮ್ಮ ಮನೆ ಬಳಿ ಕೊಳಚೆ ನೀರು ನಿಲ್ಲುತ್ತಿದೆ. ಅದನ್ನು ತಕ್ಷಣ ಸರಿಪಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ವೃದ್ಧೆಯ ಪ್ರೀತಿ ಹಾಗೂ ತಮಾಷೆ ಮಾತಿಗೆ ಮೃದುವಾಗಿ ಸ್ಪಂದಿಸಿದ ಸಚಿವ ಬಾಲಕೃಷ್ಣ, ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕೋಟೆ ನಾಡಿನತ್ತ ಹರಿದ ಭದ್ರಾ ನೀರು – ಹಲವು ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತ
