– ಸ್ಥಳಕ್ಕೆ ತೆರಳಿದ ಅಧಿಕಾರಿಗಳಿಗೆ ಧಮ್ಕಿ
ಬೆಂಗಳೂರು: ಸರ್ಕಾರಿ ಗೋಮಾಳ (Government Gomala Land) ಹಾಗೂ ಕೆರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲು ಘನತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯ ತುಂಬಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಅಧಿಕಾರಿಗಳು ದಾಳಿ ನಡೆಸಿ ನಾಲ್ಕು ಲಾರಿ ಹಾಗೂ ಒಂದು ಟ್ರ‍್ಯಾಕ್ಟರ್ ಅನ್ನು ವಶಕ್ಕೆ ಪಡೆದಿದ್ದಾರೆ.
ಜಿಗಣಿ (Jigani) ಸಮೀಪದ ವಡೇರಹಳ್ಳಿ (Vaderahalli) ಗ್ರಾಮದ ಸರ್ವೇ ನಂಬರ್ 20ರಲ್ಲಿ ಘಟನೆ ನಡೆದಿದೆ. ಇಲ್ಲಿ ಸುಮಾರು 2 ಎಕರೆ 14 ಗುಂಟೆ ಸರ್ಕಾರಿ ಗೋಮಾಳ ಜಾಗವಿದೆ. ಈ ಪ್ರದೇಶದಲ್ಲಿ ಈ ಹಿಂದೆ ಕಲ್ಲು ಗಣಿಗಾರಿಕೆ ನಡೆಸಲಾಗಿದ್ದು, ಸುಮಾರು 150 ಅಡಿ ಹಳ್ಳ ಬಿದ್ದಿತ್ತು. ಇದನ್ನೂ ಓದಿ: ಜೆಎನ್‌ಯು ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ – 10 ವಿದ್ಯಾರ್ಥಿಗಳಿಂದ ದೂರು
ಇದೀಗ ಇದೇ ಸರ್ಕಾರಿ ಜಾಗವನ್ನು ಕಬಳಿಸುವ ಉದ್ದೇಶದಿಂದ ಲಾರಿ ಹಾಗೂ ಟ್ರ‍್ಯಾಕ್ಟರ್‌ಗಳ ಮೂಲಕ ನೂರಾರು ಲೋಡ್ ಘನತ್ಯಾಜ್ಯ, ಮಣ್ಣು ಹಾಗೂ ಕಟ್ಟಡ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರ ಜೊತೆಗೆ ಗೋಮಾಳದ ಪಕ್ಕದಲ್ಲಿರುವ 4 ಎಕರೆ 15 ಗುಂಟೆ ವಿಸ್ತೀರ್ಣದ ಕೆರೆ ಜಾಗವನ್ನೂ ಒತ್ತುವರಿ ಮಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಕೆರೆ ಜಾಗದಲ್ಲಿಯೂ ಘನತ್ಯಾಜ್ಯ ಮತ್ತು ಕಟ್ಟಡಗಳ ತ್ಯಾಜ್ಯವನ್ನು ತುಂಬುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಕುರಿತು ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಜಿಗಣಿ ಉಪತಹಶೀಲ್ದಾರ್ ಚೈತ್ರ ಹಾಗೂ ಪ್ರಭಾರ ಕಂದಾಯ ನಿರೀಕ್ಷಕ ಲಕ್ಷ್ಮೀಕಾಂತ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷ ಮುಖ್ಯವಲ್ಲ, ಜಿ.ಟಿ ದೇವೇಗೌಡ ಮಾತ್ರ ಮುಖ್ಯ – ಜಿಟಿಡಿ ಖಡಕ್ ಹೇಳಿಕೆ

ಈ ವೇಳೆ ಸರ್ಕಾರಿ ಜಾಗದಲ್ಲಿ ತ್ಯಾಜ್ಯ ಸುರಿಯುತ್ತಿದ್ದ ನಾಲ್ಕು ಲಾರಿ ಮತ್ತು ಒಂದು ಟ್ರ‍್ಯಾಕ್ಟರ್ ಅನ್ನು ಸೀಜ್ ಮಾಡಲಾಗಿದೆ. ಸರ್ಕಾರಿ ಗೋಮಾಳ ಹಾಗೂ ಕೆರೆ ಜಾಗವನ್ನು ಮುಚ್ಚಿಸುತ್ತಿದ್ದ ಖಾಸಗಿ ವ್ಯಕ್ತಿ ರಾಜೇಶ್ ಅಲಿಯಾಸ್ ವೆಂಕಟೇಶ್ ವಿರುದ್ಧ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಸ್ಥಳಕ್ಕೆ ತೆರಳಿದ್ದ ಅಧಿಕಾರಿಗಳೊಂದಿಗೆ ಆತ ಅವಾಚ್ಯವಾಗಿ ವರ್ತಿಸಿ, ಸರ್ಕಾರಿ ಜಾಗ ಉಳಿಸಲು ಮುಂದಾದ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ಕೋಟೆ ನಾಡಿನತ್ತ ಹರಿದ ಭದ್ರಾ ನೀರು – ಹಲವು ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತ
ಘಟನೆಯ ಹಿಂದೆ ಪ್ರಭಾವಿಗಳ ಕೈವಾಡ ಇರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಸರ್ಕಾರಿ ಜಾಗ ಒತ್ತುವರಿ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪಕ್ಷದ ಬಾವುಟವಿಲ್ಲದೇ ಮೈಸೂರಿನಲ್ಲಿ ಶಕ್ತಿ ಪ್ರದರ್ಶನ – ದಳಪತಿ ಹೇಳಿಕೆಗೆ ಟಕ್ಕರ್ ಕೊಟ್ರಾ ಜಿಟಿಡಿ?
ಅಕ್ರಮವಾಗಿ ತ್ಯಾಜ್ಯ ಸುರಿಯಲು ಬಳಸಲಾಗಿದ್ದ ಲಾರಿ ಹಾಗೂ ಟ್ರ‍್ಯಾಕ್ಟರ್‌ಗಳನ್ನು ಬನ್ನೇರುಘಟ್ಟ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ʻಗೌರಿ ಲಂಕೇಶ್ʼ ಕೊಲೆ ಕೇಸ್ ಆರೋಪಿಯಿಂದ ಹುಬ್ಬಳ್ಳಿ ನೂತನ ಪೊಲೀಸ್ ಆಯುಕ್ತರಿಗೆ ಸನ್ಮಾನ
