ಹನೋಯ್: ಈ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ನಿಖಿತಾ ಪೊರ್ವಾಲ್ (Nikita Porwal) ಅವರು 2026ರ ವಿಶ್ವಸುಂದರಿ (Miss World 2026) ಸ್ಪರ್ಧೆಯಲ್ಲಿ ಟಾಪ್ 40 ಸ್ಥಾನಕ್ಕೆ ತಮ್ಮ ಪಯಣ ಅಂತ್ಯಗೊಳಿಸಿದರು.
ಸೆಪ್ಟೆಂಬರ್ 5ರಂದು ವಿಯೆಟ್ನಾಂನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಅವರು ಟಾಪ್ 20 ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲರಾದರು.
View this post on Instagram
ಈ ಕುರಿತು ಮಿಸ್ ಇಂಡಿಯಾ ಆರ್ಗನೈಸೇಶನ್ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ʻನಿಖಿತಾ ಪೊರ್ವಾಲ್ ಅವರು ಟಾಪ್ 40ರಲ್ಲಿ ತಮ್ಮ 73ನೇ ಮಿಸ್ ವರ್ಲ್ಡ್ ಪಯಣ ಮುಕ್ತಾಯಗೊಳಿಸಿದ್ದಾರೆ. ಈ ಮೂಲಕ ಕಳೆದ 5 ಆವೃತ್ತಿಗಳಲ್ಲಿ ಭಾರತ ಸತತವಾಗಿ ಟಾಪ್ ಸ್ಥಾನಗಳಲ್ಲಿ ಕಾಣಿಸಿಕೊಂಡಿರುವ ತನ್ನ ಗಮನಾರ್ಹ ದಾಖಲೆ ಮುಂದುವರಿಸಿದೆʼ ಎಂದು ತಿಳಿಸಿದೆ.
View this post on Instagram
ಮುಂದುವರಿದು… ನಿಖಿತಾ, ವಿಶ್ವದ ಅತಿದೊಡ್ಡ ವೇದಿಕೆಯೊಂದರಲ್ಲಿ ಭಾರತವನ್ನು ಆತ್ಮವಿಶ್ವಾಸದಿಂದ ಮತ್ತು ಹೃದಯಪೂರ್ವಕವಾಗಿ ಪ್ರತಿನಿಧಿಸಿದ್ದೀರಿ. ನೀವು ನೀಡಿದ ಪ್ರತಿಯೊಂದು ಕ್ಷಣಕ್ಕೂ, ಭಾರತಕ್ಕೆ ತಂದ ಪ್ರತಿಯೊಂದು ಸಂಭ್ರಮಕ್ಕೂ ಧನ್ಯವಾದಗಳು. ನಿಮ್ಮ ಬಗ್ಗೆ ಭಾರತ ಎಂದಿಗೂ ಹೆಮ್ಮೆಪಡುತ್ತದೆ ಎಂದು ಬರೆದುಕೊಂಡಿದೆ.

ಈ ಬಾರಿ ಡೊಮಿನಿಕನ್ ರಿಪಬ್ಲಿಕ್ನ ಜೊಹೆರಿ ಮೊಲಾ ಅವರು ʻಮಿಸ್ ವರ್ಲ್ಡ್ 2026ʼ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇನ್ನೂ ಗ್ರ್ಯಾಂಡ್ ಫಿನಾಲೆಗಾಗಿ ನಿಖಿತಾ ಪೊರ್ವಾಲ್ ಅವರು ಡಿಸೈನರ್ ಭವನಾ ರಾವ್ ವಿನ್ಯಾಸಗೊಳಿಸಿದ ವಿಶೇಷ ಕಸ್ಟಮ್ಮೇಡ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು.
