Bigg Boss 20 (ಹಿಂದಿ ಆವೃತ್ತಿ) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ರಿಯಾಲಿಟಿ ಶೋನ 20ನೇ ಸೀಸನ್‌ಗೆ ಸಲ್ಮಾನ್ ಖಾನ್ ಮತ್ತೆ ನಿರೂಪಕರಾಗಿ ಮರಳುತ್ತಿದ್ದು, ಇಂದು ಗ್ರ್ಯಾಂಡ್ ಪ್ರೀಮಿಯರ್ ನಡೆಯಲಿದೆ. ಪ್ರೀಮಿಯರ್‌ಗೆ ಮುನ್ನವೇ ಶೋ ಸೆಟ್‌ಗಳಿಂದ ಹಲವು ವಿಡಿಯೋಗಳು ಮತ್ತು ಝಲಕ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.
ಈ ನಡುವೆ, Bigg Boss 20ಗೆ ಎಂಟ್ರಿ ನೀಡಲಿದ್ದಾರೆ ಎನ್ನಲಾದ 18 ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಟಿವಿ ತಾರೆಯರು, ಪ್ರಾದೇಶಿಕ ಕಲಾವಿದರು, ಡಿಜಿಟಲ್ ಕ್ರಿಯೇಟರ್‌ಗಳು, ರಿಯಾಲಿಟಿ ಶೋ ಸ್ಪರ್ಧಿಗಳು, ಖ್ಯಾತ ಕ್ರೀಡಾಪಟು, ಸಂಗೀತ ಮತ್ತು ಇ-ಸ್ಪೋರ್ಟ್ಸ್ ಕ್ಷೇತ್ರದ ಪ್ರಮುಖ ಹೆಸರುಗಳು ಈ ಪಟ್ಟಿಯಲ್ಲಿದ್ದಾರೆ. ಅದರ ಪಟ್ಟಿ ನೋಡುವುದಾದ್ರೆ….
1. ಮೇರಿ ಕೋಮ್
ಒಲಿಂಪಿಕ್ಸ್ ಪದಕ ವಿಜೇತೆ ಹಾಗೂ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಹೆಸರು ಈ ಪಟ್ಟಿಯಲ್ಲಿರುವ ಅತ್ಯಂತ ಅನಿರೀಕ್ಷಿತ ಹೆಸರು ಎನ್ನಲಾಗ್ತಿದೆ. ಬಾಕ್ಸಿಂಗ್‌ನಲ್ಲಿ ತಮ್ಮ ಸಾಧನೆಯ ಮೂಲಕ ದೇಶದ ಗಮನ ಸೆಳೆದಿರುವ ಅವರು ಬಿಗ್‌ಬಾಸ್ ಮನೆಗೆ ವಿಭಿನ್ನ ಆಯಾಮ ತರಬಹುದು. ಅವರ ಪ್ರವೇಶದಿಂದ ಈ ಸೀಸನ್‌ಗೆ ಕ್ರೀಡಾ ಕ್ಷೇತ್ರದ ಬಲಿಷ್ಠ ಉಪಸ್ಥಿತಿ ಸಿಗುವ ಸಾಧ್ಯತೆಯಿದೆ.

2. ಕನಿಕಾ ಮಾನ್
ಟೆಲಿವಿಷನ್ ನಟಿ ಕನಿಕಾ ಮಾನ್ ಕೂಡ ಬಿಗ್‌ಬಾಸ್‌ಗೆ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. ʻGuddan Tumse Na Ho Payegaʼ ಮತ್ತು ʻNaaginʼ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಕನಿಕಾ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಕ್ಷೇತ್ರದಲ್ಲಿನ ಅನುಭವ ಮತ್ತು ಜನಪ್ರಿಯತೆಯಿಂದ ಅವರು ಗಮನ ಸೆಳೆಯುವ ಸ್ಪರ್ಧಿಯಾಗಬಹುದು.
3. ಆಸಿಫ್ ಖಾನ್
ʻPanchayatʼ ಸೀರಿಯಲ್‌ನ ಪಾತ್ರದಿಂದ ಹೆಚ್ಚು ಪರಿಚಿತರಾಗಿರುವ ಆಸಿಫ್ ಖಾನ್ ಕೂಡ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ.
4. ಅಮ್ರಪಾಲಿ ದುಬೆ
ಭೋಜ್‌ಪುರಿ ಚಿತ್ರರಂಗದ ಜನಪ್ರಿಯ ನಟಿ ಅಮ್ರಪಾಲಿ ದುಬೆ ಕೂಡ ಶೋಗೆ ಬರಲಿದ್ದಾರೆ ಎನ್ನಲಾಗಿದೆ. ಭೋಜ್‌ಪುರಿ ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಅವರ ಉಪಸ್ಥಿತಿಯಿಂದ ಬಿಗ್‌ಬಾಸ್‌ಗೆ ಮತ್ತಷ್ಟು ಕ್ರೇಜ್ ತರುವ ವಿಶ್ವಾಸವಿದೆ.

5. ಅರಿಶ್ಫಾ ಖಾನ್
ಡಿಜಿಟಲ್ ಕ್ರಿಯೇಟರ್ ಹಾಗೂ ಮಾಜಿ ಬಾಲನಟಿ ಅರಿಶ್ಫಾ ಖಾನ್ ಕೂಡ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಖ್ಯೆಯ ಫಾಲೋವರ್ಸ್ ಹೊಂದಿರುವ ಅವರು ಬಿಗ್‌ಬಾಸ್‌ಗೆ ಯುವ ಪ್ರೇಕ್ಷಕರನ್ನ ಸೆಳೆಯುವ ಸಾಧ್ಯತೆಯಿದೆ.
6. ಮಾಹಿ ವಿಜ್
ಟೆಲಿವಿಷನ್ ನಟಿ ಮಾಹಿ ವಿಜ್ ಕೂಡ ಈ ಪಟ್ಟಿಯಲ್ಲಿರುವ ಮತ್ತೊಂದು ಪರಿಚಿತ ಹೆಸರು. ಹಲವು ವರ್ಷಗಳಿಂದ ಕಿರುತೆರೆ ಕ್ಷೇತ್ರದಲ್ಲಿರುವ ಅವರು ಪ್ರೇಕ್ಷಕರಿಗೆ ಪರಿಚಿತ ಮುಖವಾಗಿದ್ದು, ಬಿಗ್ ಮನೆಯಲ್ಲಿ ತಮ್ಮ ಅನುಭವ ಬಳಸಿಕೊಳ್ಳಬಹುದು.
7. ಕುಶಾಲ್ ತನ್ವರ್ ಅಕಾ ಗುಲ್ಲು
ರಿಯಾಲಿಟಿ ಶೋ ವ್ಯಕ್ತಿತ್ವ ಕುಶಾಲ್ ತನ್ವರ್, ಜನಪ್ರಿಯವಾಗಿ ಗುಲ್ಲು ಎಂದೇ ಪರಿಚಿತರಾಗಿರುವವರು ಕೂಡ ಬಿಗ್‌ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗಿದೆ. Roadies ಮತ್ತು Splitsvilla ಸೇರಿದಂತೆ ಹಲವು ರಿಯಾಲಿಟಿ ಶೋಗಳೊಂದಿಗೆ ಅವರು ಗುರುತಿಸಿಕೊಂಡಿದ್ದಾರೆ.
8. ಇಶಾ ರಿಖಿ
ನಟಿ ಇಶಾ ರಿಖಿ ಅವರ ಹೆಸರೂ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ವೃತ್ತಿಜೀವನದ ಜೊತೆಗೆ ವೈಯಕ್ತಿಕ ವಿಚಾರಗಳಿಂದಲೂ ಸುದ್ದಿಯಲ್ಲಿದ್ದ ಅವರು ಬಿಗ್‌ಬಾಸ್‌ಗೆ ಎಂಟ್ರಿ ನೀಡಿದರೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಬಹುದು.
9. ಅಮನ್ ಗಾಂಧಿ
ಟೆಲಿವಿಷನ್ ನಟ ಅಮನ್ ಗಾಂಧಿ ಕೂಡ ಈ ಪಟ್ಟಿಯಲ್ಲಿದ್ದಾರೆ. Naagin 3, Bhagya Lakshmi ಮತ್ತು Kyunki Saas Bhi Kabhi Bahu Thi 2 ಸೇರಿದಂತೆ ಹಲವು ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

10. ಉದಿತಿ ಸಿಂಗ್
ಉದಿತಿ ಸಿಂಗ್ ಕೂಡ Bigg Boss 20ಗೆ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. ನಟ ಕರಣ್ ವಾಹಿ ಅವರೊಂದಿಗಿನ ಹಿಂದಿನ ಸಂಬಂಧದ ಕುರಿತ ವರದಿಗಳಿಂದಾಗಿ ಅವರ ಹೆಸರು ಗಮನ ಸೆಳೆದಿದೆ.
11. ಯಂಗ್ ಡಿಎಸ್ಎ
ರ‍್ಯಾಪರ್ ಮತ್ತು ಡಿಜಿಟಲ್ ಕ್ರಿಯೇಟರ್ ಯಂಗ್ ಬಿಗ್ ಮನೆಗೆ ವಿಭಿನ್ನ ಎನರ್ಜಿ ತರಬಹುದು. ಸಂಗೀತ ಕ್ಷೇತ್ರದ ಹಿನ್ನೆಲೆ ಹಾಗೂ ಡಿಜಿಟಲ್ ಜಗತ್ತಿನಲ್ಲಿನ ಅವರ ಉಪಸ್ಥಿತಿಯಿಂದ ಸೀಸನ್‌ಗೆ ಯುವ ಪ್ರೇಕ್ಷಕರ ಸಂಪರ್ಕ ಮತ್ತಷ್ಟು ಬಲವಾಗಬಹುದು.
12. ರಿತಿ ತಿವಾರಿ
ಗಾಯಕಿ, ಗೀತರಚನೆಕಾರ್ತಿ ಹಾಗೂ ಸಂಗೀತ ಸಂಯೋಜಕಿ ರಿತಿ ತಿವಾರಿ ಕೂಡ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ. ಅವರು ನಟ-ಗಾಯಕ ಮನೋಜ್ ತಿವಾರಿ ಅವರ ಪುತ್ರಿಯಾಗಿದ್ದು, ಬಿಗ್‌ಬಾಸ್ ಮೂಲಕ ರಿಯಾಲಿಟಿ ಶೋಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.
13. ಲವ್ ಗಿಲ್
ಪಂಜಾಬಿ ಮನರಂಜನಾ ಕ್ಷೇತ್ರದ ವ್ಯಕ್ತಿತ್ವ ಲವ್ ಗಿಲ್ ಕೂಡ ಈ ಪಟ್ಟಿಯಲ್ಲಿದ್ದಾರೆ.
14. ರಿಹ್ಯಾ ಅಹಿರ್
ರಿಹ್ಯಾ ಯಾದವ್, ಅಂದರೆ ರಿಹ್ಯಾ ಅಹಿರ್, ಅವರ ಹೆಸರೂ ಬಿಗ್‌ಬಾಸ್‌ಗೆ ಸಂಬಂಧಿಸಿದಂತೆ ಕೇಳಿಬಂದಿದೆ. ಇತ್ತೀಚೆಗೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ ಬೆಳವಣಿಗೆಯ ನಂತರ ರಿಹ್ಯಾ ಗಮನ ಸೆಳೆದಿದ್ದರು.
15. ಖಾಜಿ ತೌಕೀರ್
ಗಾಯಕ ಹಾಗೂ ರಿಯಾಲಿಟಿ ಶೋ ವ್ಯಕ್ತಿತ್ವ ಖಾಜಿ ತೌಕೀರ್ ಕೂಡ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ. Fame Gurukul ಗೆದ್ದು ಖ್ಯಾತಿ ಪಡೆದ ಅವರು ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
16. ರೋಹೆಡ್ ಖಾನ್
ರೋಹೆಡ್ ಖಾನ್ ಅವರ ಹೆಸರೂ ಈ ಪಟ್ಟಿಯಲ್ಲಿದೆ. ಟೆಲಿವಿಷನ್ ಪ್ರೇಕ್ಷಕರಿಗೆ ಅವರ ಹೆಸರು ಅಷ್ಟಾಗಿ ಪರಿಚಿತವಾಗಿಲ್ಲದಿದ್ದರೂ, ಬಿಗ್‌ಬಾಸ್ ವೇದಿಕೆಯ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸುವ ಅವಕಾಶ ಅವರಿಗೆ ಸಿಗಬಹುದು.
17. ಸ್ಕೌಟ್ಓಪಿ ಅಕಾ ತನ್ಮಯ್ ಸಿಂಗ್
ಇ-ಸ್ಪೋರ್ಟ್ಸ್ ಆಟಗಾರ ಹಾಗೂ ಕಂಟೆಂಟ್ ಕ್ರಿಯೇಟರ್ ತನ್ಮಯ್ ಸಿಂಗ್, ಜನಪ್ರಿಯವಾಗಿ ScoutOP ಎಂದು ಕರೆಯಲ್ಪಡುವವರು ಕೂಡ ಬಿಗ್‌ಬಾಸ್‌ಗೆ ಎಂಟ್ರಿಯಾಗಲಿದ್ದಾರೆ ಎನ್ನಲಾಗಿದೆ.
18. ಫೈಸಲ್ ಖಾನ್
ನಟ ಫೈಸಲ್ ಖಾನ್, ಬಾಲಿವುಡ್ ನಟ ಆಮಿರ್ ಖಾನ್ ಅವರ ಸಹೋದರ, ಈ 18 ಜನರ ಪಟ್ಟಿಯಲ್ಲಿರುವ ಕೊನೆಯ ಹೆಸರು. ಅವರ ಕುಟುಂಬದ ಹಿನ್ನೆಲೆ ಹಾಗೂ ಹಿಂದಿನ ಸಾರ್ವಜನಿಕ ಕಾಣಿಸಿಕೊಳ್ಳುವಿಕೆಯಿಂದಾಗಿ ಬಿಗ್‌ಬಾಸ್‌ಗೆ ಅವರ ಪ್ರವೇಶ ಸಾಕಷ್ಟು ಗಮನ ಸೆಳೆಯುವ ಸಾಧ್ಯತೆಯಿದೆ.
ಇನ್ನೂ Bigg Boss 20ರ 20ನೇ ಸೀಸನ್‌ಗೆ ಸಲ್ಮಾನ್ ಖಾನ್ ಅವ್ರೇ ಮತ್ತೊಮ್ಮೆ ನಿರೂಪಕರಾಗಿ ಮರಳುತ್ತಿದ್ದಾರೆ.
ಶೋ ಯಾವುದರಲ್ಲಿ ಪ್ರಸಾರ
ಹಿಂದಿ Bigg Boss 20 ಅನ್ನು Colors TVಯಲ್ಲಿ ಹಾಗೂ Jio Hotstar ನಲ್ಲಿ ಪ್ರತಿದಿನ ರಾತ್ರಿ 10:30ಕ್ಕೆ ವೀಕ್ಷಿಸಬಹುದು.
