– ಟ್ರಾಫಿಕ್ ಸಮಸ್ಯೆಗೆ ವರದಿ ಸಿದ್ಧಪಡಿಸಿದ ಪೊಲೀಸ್ ಇಲಾಖೆ
ಬೆಂಗಳೂರು: ನಗರದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ (Traffic) ಸಮಸ್ಯೆ ಪರಿಹಾರಕ್ಕೆ ನಗರಾಭಿವೃದ್ಧಿ ಸಚಿವರು ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ವರದಿ ಸಿದ್ಧಪಡಿಸಿರುವ ಬೆಂಗಳೂರು ಸಂಚಾರಿ ಪೊಲೀಸರು (Traffic Police), ಜಿಬಿಎಗೆ (GBA) ವರದಿ ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರು ನಗರದ ಜಂಕ್ಷನ್‌ಗಳಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ನಿವಾರಣೆಗೆ ವರದಿ ಸಿದ್ಧಪಡಿಸುವಂತೆ ತಿಂಗಳ ಹಿಂದಷ್ಟೇ ಸಂಚಾರಿ ಪೊಲೀಸರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಸೂಚನೆ ನೀಡಿದ್ದರು. ಸಚಿವರ ಸೂಚನೆಯಂತೆ ನಗರದ ಜಂಕ್ಷನ್‌ಗಳಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ವರದಿ ಸಿದ್ಧಪಡಿಸಿ ಅದರಂತೆ ಜಿಬಿಎ ಕೈಗೊಳ್ಳಬೇಕಿರುವ ಕ್ರಮಗಳ ಸಂಬಂಧ ಸಂಚಾರಿ ಪೊಲೀಸ್ ವಿಭಾಗ ಜಿಬಿಎಗೆ ಪತ್ರದ ಮೂಲಕ ಮನವಿ ಮಾಡಿದೆ. ಇದನ್ನೂ ಓದಿ: ರೈತನನ್ನು ಅರ್ಧ ಗಂಟೆ ಕಾಲ ಕಚ್ಚಿ ಹಿಡಿದ ಸಿಂಹ – ಬದುಕಿದ್ದೇ ಪವಾಡ
ಹೌದು, ನಗರದ ಸುಮಾರು 750 ಜಂಕ್ಷನ್‌ಗಳಲ್ಲಿ ರಸ್ತೆ ಸರಿಪಡಿಸುವಂತೆ ವರದಿ ಮೂಲಕ ಜಿಬಿಎಗೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. 750 ಜಂಕ್ಷನ್‌ಗಳಲ್ಲಿ ರಸ್ತೆ ಗುಂಡಿ, ಹದಗೆಟ್ಟ ರಸ್ತೆ ಸಮಸ್ಯೆಯಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಜಂಕ್ಷನ್‌ಗಳಲ್ಲಿ ರಸ್ತೆ ಸರಿ ಇಲ್ಲದ ಕಾರಣ ವಾಹನ ಓಡಾಟದ ಸಮಯಾವಧಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ವೈಜ್ಞಾನಿಕವಾಗಿ ಸಿಗ್ನಲ್ ಇಂಟರ್ ಸೆಕ್ಷನ್‌ಗಳಲ್ಲಿ ಹಾಳಗಿರುವ ರಸ್ತೆಗಳನ್ನ ಸರಿಪಡಿಸುವಂತೆ ಮನವಿ ಮಾಡಲಾಗಿದೆ. ಇದನ್ನೂ ಓದಿ: ಮಲ್ಲಳ್ಳಿ ಜಲಪಾತದಲ್ಲಿ ಸೆಲ್ಫಿ ಹುಚ್ಚಾಟ: ಏಕಾಏಕಿ ಹೆಚ್ಚಿದ ನೀರು, ಬೆಂಗಳೂರಿನ ವಿದ್ಯಾರ್ಥಿಗಳ ರಕ್ಷಣೆ
ಸಚಿವರ ಸೂಚನೆಯಂತೆ ಸಂಚಾರಿ ವಿಭಾಗದ ಗ್ರೌಂಡ್ ಸ್ಟಾಫ್‌ಗಳ ಬಳಕೆ ಮಾಡಿ, ಜಂಕ್ಷನ್ ಮತ್ತು ಇಂಟರ್ ಸೆಕ್ಷನ್‌ಗಳ ವಿಶ್ಲೇಷಣೆ ಮಾಡಿಸಿ, ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ ನಗರದ 9 ಕಡೆ ಸಿಗ್ನಲ್‌ಗಳಲ್ಲಿ ಹಂಪ್ ಇದ್ದು, ಇದು ಕೂಡ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದೆ. ಕೂಡಲೇ ಅದನ್ನು ತೆರವುಗೊಳಿಸಲು ಜಿಬಿಎಗೆ ಮನವಿ ಮಾಡಲಾಗಿದೆ. ಇದನ್ನೂ ಓದಿ: ಮಣಿಪುರದಲ್ಲಿ ದಂಗೆಕೋರರಿಂದ ದಾಳಿ – ಅಸ್ಸಾಂ ರೈಫಲ್ಸ್‌ನ ಇಬ್ಬರು ಯೋಧರು ಹುತಾತ್ಮ
ಒಟ್ಟಾರೆ ಟ್ರಾಫಿಕ್‌ಗೆ ಕಾರಣವಾಗಿರುವ ಅಂಶಗಳನ್ನ ವರದಿ ಮೂಲಕ ಜಿಬಿಎಗೆ ಸಂಚಾರಿ ಪೊಲೀಸರು ಮನವಿ ಮಾಡಿದ್ದು, ಜಿಬಿಎ ಎಷ್ಟರ ಮಟ್ಟಿಗೆ ವರದಿ ಆಧಾರಿಸಿ ಪರಿಸ್ಥಿತಿ ಸರಿಪಡಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಾತ್ಕಾಲಿಕ ಪ್ರಧಾನ ಕಾರ್ಯದರ್ಶಿ ನೇಮಕ – ಯಾರು ಈ ಕೃಷ್ಣಮೋಹನ್?
