ಗಾಂಧಿನಗರ: ಸಿಂಹವೊಂದು ರೈತನನ್ನು ಅರ್ಧ ಗಂಟೆ ಕಾಲ ಕಚ್ಚಿ ಹಿಡಿದ ಘಟನೆ ಗುಜರಾತ್‌ನ ಭಾವನಗರ ಜಿಲ್ಲೆಯ ಗರಾಜಿಯಾ ಗ್ರಾಮದಲ್ಲಿ ನಡೆದಿದೆ. ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ.
ಸಿಂಹ ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 46 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ, ಸಿಂಹದ ಹಿಡಿತದಿಂದ ತಪ್ಪಿಸಿಕೊಳ್ಳಲು ಕಲುಭಾಯಿ ಒದ್ದಾಡುತ್ತಿರುವುದನ್ನು ನೋಡಬಹುದು. ಅವರ ಕಾಲುಗಳನ್ನು ಸಿಂಹ ಬಿಗಿಯಾಗಿ ಹಿಡಿದುಕೊಂಡಿತ್ತು. ಗ್ರಾಮಸ್ಥರು ಸಿಂಹವನ್ನು ಓಡಿಸಲು ಜೋರಾಗಿ ಕಿರುಚಾಡುತ್ತಿರುವುದು ಕೇಳಿಸುತ್ತದೆ. ಕೆಲವರು ಸಿಂಹದ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ.
LION ATTACKS ON ANIMAL CARE TAKER 🚨
A lioness attacked a Maldhari family near Palitana in Gujarat’s Bhavnagar district.
– Lion trapped the guy for 30 minutes😨
– Look at the guy how he consoles Lion by Touching his head 😭
– After being rescued and rushed to a hospital for… pic.twitter.com/gWYDg9AYkX
— Jeet (@JeetN25) July 6, 2026
ಕಲುಭಾಯ್ ಬೋಘಾಯ್ ಪರ್ಮಾರ್ ಮನೆಯ ಬಳಿ ಹಸುಗಳಿಗೆ ಮೇವು ಹಾಕಲು ಹೋಗಿದ್ದಾಗ ಸಿಂಹ ದಾಳಿ ನಡೆಸಿದೆ. ಸುಮಾರು 30 ನಿಮಿಷಗಳ ಬಳಿಕ ಸಿಂಹ ಆತನನ್ನು ಬಿಟ್ಟು, ಕಟ್ಟಿಹಾಕಿದ್ದ ಹಸುವಿನ ಕಡೆಗೆ ತೆರಳಿದೆ. ಬಳಿಕ ಆತನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಯ ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅಧಿಕಾರಿಗಳು ತಡವಾಗಿ ಬಂದಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಅರಣ್ಯ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
