ಕಳೆದ ಮೂರು ದಿನಗಳಿಂದ ಮುಂಬೈನಾದ್ಯಂತ ಎಡೆಬಿಡದೆ ಮಳೆ (Mumbai Rains) ಸುರಿಯುತ್ತಿದೆ. ಜನಜೀವನ ಅಸ್ತವ್ಯಸ್ಥವಾಗಿದೆ. ಈ ನಡುವೆಯೂ ಅಮಿತಾಭ್ ಬಚ್ಚನ್ (Amitabh Bachchan) ಅಭಿಮಾನಿಗಳು ಮಾತ್ರ ಅಭಿಮಾನದ ಪರಾಕಾಷ್ಠೆ ಮೆರೆದಿದ್ದಾರೆ.
ಮುಂಬೈನಲ್ಲಿ ಜುಹುವಿನಲ್ಲಿರುವ ಅಮಿತಾಬ್ ಬಚ್ಚನ್‌ರ ಜಲ್ಸಾ ನಿವಾಸದ ಮುಂದಿನ ರಸ್ತೆಗಳು ನೀರಿನಿಂದ ಆವೃತವಾಗಿತ್ತು. ಮನೆಯೆ ಅಂಗಳದಲ್ಲೂ ಭಾರೀ ನೀರು ತುಂಬಿತ್ತು. ಈ ನಡುವೆಯೂ ಭಾನುವಾರ ಬಿಗ್‌ಬಿ ನೋಡಲು ಅಭಿಮಾನಿಗಳು ಆಗಮಿಸಿದ್ದರು. ಅಂದಹಾಗೆ ಪ್ರತಿ ಭಾನುವಾರ ಅಮಿತಾಬ್ ಬಚ್ಚನ್ ಮನೆ ಬಳಿ ಬರುವ ಅಭಿಮಾನಿಗಳನ್ನು ಭೇಟಿ ಆಗ್ತಾರೆ. ಆಟೋಗ್ರಾಫ್ ಕೊಡ್ತಾರೆ, ಶೇಕ್‌ಹ್ಯಾಂಡ್ ಮಾಡುತ್ತಾರೆ. ಈ ನಡುವೆ ಜೋರಾಗಿ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ತಮ್ಮನ್ನು ನೋಡಲು ಬಂದ ಅಭಿಮಾನಿಗಳ ಅಭಿಮಾನಕ್ಕೆ ಅಮಿತಾಬ್ ಬಚ್ಚನ್ ಬೆರಗಾಗಿದ್ದಾರೆ. ಇದನ್ನೂ ಓದಿ: ಸ್ಪೆಷಲ್ ಚಿತ್ರಗಳ ಮೂಲಕ ಯೋಗೀಶ್ವರ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ

ತಮ್ಮ ಟಂಬ್ಲರ್ ಬ್ಲಾಗ್‌ನಲ್ಲಿ ಮಾಹಿತಿ ಶೇರ್ ಮಾಡಿರುವ ಅಮಿತಾಬ್ ಮಳೆಯ ನಡುವೆಯೂ ಮನೆಗೆ ಬಂದ ಅಭಿಮಾನಿಗಳಿಗೆ ಕೃತಜ್ಞತೆ ಅರ್ಪಿಸಿದ್ದಾರೆ. “ನನ್ನ ಕೈಗಳ ಹಸ್ತಾಕ್ಷರವನ್ನು ಪಡೆಯಲು ಅಭಿಮಾನಿಗಳು ಯಾವ ಅಡ್ಡಿಯನ್ನೂ ಲೆಕ್ಕಿಸದೆ ಬಂಧಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
ಈ ಬಾರಿ ಮಳೆ ವಿಳಂಬವಾಗಿದೆ. ಈ ಮಳೆ ಇನ್ನೂ ಮುಂದುವರೆಯಬಹುದು, ಪ್ರವಾಹದ ಸ್ಥಿತಿಯೂ ಆಗಬಹುದು, ಜನಜೀವನದ ಅಸ್ಥವ್ಯಸ್ಥವಾಗುತ್ತದೆ. ಆದರೆ ಸರೋವರಗಳು ತುಂಬುತ್ತದೆ, ಇದು ಕೃಷಿಗೆ ಉತ್ತಮವಾದದ್ದು ಎಂದು ಹೇಳುವ ಮೂಲಕ ಮುಂಬೈ ಮಳೆಯ ಕುರಿತು ಅಮಿತಾಬ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಗೌರಿ ಕೈಹಿಡಿದ ಆಮಿರ್ ಖಾನ್ – ಸರಳ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
