ಮಾಜಿ ಸಚಿವ ಹಾಗೂ ನಟ ಸಿ.ಪಿ. ಯೋಗೀಶ್ವರ್ (CP Yogishwar) ಅವರ ಪುತ್ರ ಧ್ಯಾನ್ ಯೋಗೀಶ್ವರ್ (Dhyan Yogish) ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ‘ಕರ್ಣಾಟಬಲಂ ಅಜೇಯಂ’ ಮತ್ತು ‘ಸೈನಿಕ 2’ ಸಿನಿಮಾಗಳ ಮೂಲಕ ಧ್ಯಾನ್ ಚಿತ್ರರಂಗ ಪ್ರವೇಶಿಸುತ್ತಿದ್ದು, 25 ವರ್ಷಗಳ ಬಳಿಕ ಸಿ.ಪಿ. ಯೋಗೀಶ್ವರ್ ಕೂಡ ಮತ್ತೆ ನಟನಾಗಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.
ಇತ್ತೀಚೆಗೆ ನಡೆದ ಎರಡು ಸಿನಿಮಾಗಳ ಮುಹೂರ್ತ ಸಮಾರಂಭಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಚಾಲನೆ ನೀಡಿದರು. ಡಿ.ಕೆ. ಸುರೇಶ್ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ಚಿತ್ರರಂಗದ ಗಣ್ಯರು ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಎರಡೂ ಸಿನಿಮಾಗಳನ್ನು ಶೀಲಾ ಯೋಗೀಶ್ವರ್ ನಿರ್ಮಿಸುತ್ತಿದ್ದು, ಇದೇ ವೇಳೆ ಫಸ್ಟ್ ಲುಕ್ ಟೀಸರ್ ಕೂಡ ಬಿಡುಗಡೆ ಮಾಡಲಾಯಿತು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ನಾನು ಸಾಮಾನ್ಯವಾಗಿ ಮುಹೂರ್ತ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ಯೋಗೀಶ್ವರ್ ಅವರ ಆಹ್ವಾನಕ್ಕೆ ಬಂದಿದ್ದೇನೆ. ಧ್ಯಾನ್ ಟೀಸರ್‌ನಲ್ಲಿ ಉತ್ತಮವಾಗಿ ನಟಿಸಿರುವುದು ಕಾಣುತ್ತಿದೆ. ಆತ ನನ್ನ ಮಗನಂತೆಯೇ. ಅವನ ಸಿನಿಮಾ ಪಯಣ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕೇಂದ್ರ ಸಚಿವ ವಿ. ಸೋಮಣ್ಣ ಕೂಡ ಎರಡೂ ಸಿನಿಮಾಗಳಿಗೆ ಶುಭ ಕೋರಿದರು.
ಸಿ.ಪಿ. ಯೋಗೀಶ್ವರ್ ಮಾತನಾಡಿ, 40 ವರ್ಷಗಳ ಹಿಂದೆ ನಟನಾಗಿ ಚಿತ್ರರಂಗಕ್ಕೆ ಬಂದಿದ್ದೆ. ಬಳಿಕ ರಾಜಕೀಯಕ್ಕೆ ಹೋಗಿದ್ದೆ. ಈಗ ಮತ್ತೆ ನಟನಾಗಿ ಮರಳಿದ್ದೇನೆ. ನನ್ನ ಮಗ ಧ್ಯಾನ್ ಈ ಎರಡು ಸಿನಿಮಾಗಳ ಮೂಲಕ ನಾಯಕನಾಗುತ್ತಿದ್ದಾನೆ. ‘ಕರ್ಣಾಟಬಲಂ ಅಜೇಯಂ’ ಮುಂದಿನ ಸಂಕ್ರಾಂತಿಗೆ ಬಿಡುಗಡೆ ಮಾಡುವ ಗುರಿಯಿದೆ. ಎರಡೂ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲ ಬೇಕು” ಎಂದು ಹೇಳಿದರು.ಇದನ್ನೂ ಓದಿ: ಮೊದಲ ಬಾರಿ ಮಗನ ಫೋಟೋ ಹಂಚಿಕೊಂಡ ಡಾಲಿ ಧನಂಜಯ
ಧ್ಯಾನ್ ಯೋಗೀಶ್ವರ್ ಮಾತನಾಡಿ, ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿರುವುದು ತುಂಬಾ ಖುಷಿಯಾಗಿದೆ. ಈ ಅವಕಾಶ ನೀಡಿದ ನನ್ನ ತಂದೆ-ತಾಯಿಗೆ ಧನ್ಯವಾದಗಳು. ನಟನಾಗಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದೇನೆ. ನಾಗಣ್ಣ ಹಾಗೂ ಪುನೀತ್ ರುದ್ರನಾಗ್ ಅವರಿಂದ ಸಾಕಷ್ಟು ಕಲಿಯುತ್ತಿದ್ದೇನೆ. ನನ್ನ ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ಇರಲಿ ಎಂದು ಮನವಿ ಮಾಡಿದರು.

‘ಕರ್ಣಾಟಬಲಂ ಅಜೇಯಂ’ ಚಿತ್ರವನ್ನು ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿದ್ದು, ‘ಸೈನಿಕ 2’ ಚಿತ್ರಕ್ಕೆ ಪುನೀತ್ ರುದ್ರನಾಗ್ ಆಕ್ಷನ್-ಕಟ್ ಹೇಳಲಿದ್ದಾರೆ. ‘ಕರ್ಣಾಟಬಲಂ ಅಜೇಯಂ’ನಲ್ಲಿ ಜಗಪತಿಬಾಬು, ಲಯ, ಮಣಿಕ ವಿಶ್ವಕರ್ಮ ಹಾಗೂ ರೇಖಾ ಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ.ಇದನ್ನೂ ಓದಿ: ಮೊದಲ ಬಾರಿ ಮಗನ ಫೋಟೋ ಹಂಚಿಕೊಂಡ ಡಾಲಿ ಧನಂಜಯ
