ಬೆಂಗಳೂರು: ಕೆಎಎಸ್ (KAS) ಪರೀಕ್ಷೆಯಲ್ಲಿ 25 ಮಾರ್ಕ್ಸ್‌ಗೆ ಒಂದೂವರೆ ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಗಂಭೀರ ಆರೋಪದ ಬಗ್ಗೆ `ಪಬ್ಲಿಕ್ ಟಿವಿʼ ವರದಿ ಬೆನ್ನಲ್ಲೇ ಇದೀಗ ಎಫಐಆರ್ ದಾಖಲಾಗಿದೆ.
ಕೆಎಎಸ್ ಪರೀಕ್ಷೆಯಲ್ಲಿ 25 ಮಾರ್ಕ್ಸ್‌ಗೆ ಒಂದೂವರೆ ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪದ ಬಗ್ಗೆ ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು. ಈ ಬಗ್ಗೆ ಕಾಂತಕುಮಾರ್ ಎಂಬವರು ದೂರು ನೀಡಿದ್ದರು. ವರದಿ ಬೆನ್ನಲ್ಲೇ ದೂರಿನ ಆಧಾರದ ಮೇಲೆ ವಿಧಾನಸೌಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೆಎಎಸ್ ಪರೀಕ್ಷೆಯಲ್ಲೂ ಅಕ್ರಮ; 25 ಮಾರ್ಕ್ಸ್‌ಗೆ 1.5 ಕೋಟಿ ಹಣಕ್ಕೆ ಡಿಮ್ಯಾಂಡ್ ಆರೋಪ
ದೂರಿನಲ್ಲಿ ಏನಿದೆ?
ಕೆಎಎಸ್ 384 ಹುದ್ದೆಗೆ ಕಾಸು ಕೊಟ್ಟ ಅಭ್ಯರ್ಥಿ ಹೆಸರು ಸಮೇತ ದೂರು ನೀಡಿದ್ದರು. ಈ ಅಭ್ಯರ್ಥಿ ಕೆಪಿಎಸ್‌ಸಿ ಸದಸ್ಯರೊಬ್ಬರ ಜೊತೆ ಸಂಪರ್ಕದಲ್ಲಿದ್ದ. ಸಂದರ್ಶನದಲ್ಲಿ 25 ಮಾರ್ಕ್ಸ್‌ಗೆ ಕೆಪಿಎಸ್‌ಸಿ ಸದಸ್ಯರೊಬ್ಬರಿಗೆ 1.5 ಕೋಟಿ ರೂ. ನೀಡಲಾಗಿದೆ. ಇದಕ್ಕೆ ಪೂರಕ ಎಂಬಂತೆ ಸಿಡಿಆರ್ ಸಿಕ್ಕಿದೆ. ಎಷ್ಟು ಸಲ ಅಭ್ಯರ್ಥಿ ಹಾಗೂ ಮೆಂಬರ್ ಮಾತನಾಡಿದ್ದಾರೆ ಅನ್ನೋದು ಸಿಡಿಆರ್‌ನಲ್ಲಿ ಸಿಕ್ಕಿದೆ. ಮೆಂಬರ್ ಹೇಗೆ ಸಂದರ್ಶನದ ಅಭ್ಯರ್ಥಿಗಳ ಜೊತೆಗೆ ಮಾತುಕತೆ ಮಾಡ್ತಾರೆ ಎಂಬ ಪ್ರಶ್ನೆ ವ್ಯಕ್ತವಾಗಿದೆ.



