ನವದೆಹಲಿ: ವಿದೇಶದಲ್ಲಿ ಉತ್ತಮ ಸಂಬಳದ ಉದ್ಯೋಗ (Job Fraud) ಕೊಡಿಸುವುದಾಗಿ ನಂಬಿಸಿ 28 ವರ್ಷದ ಭಾರತೀಯ ಮಹಿಳೆಯನ್ನು ಪೋರ್ಚುಗಲ್‌ಗೆ ಕರೆದೊಯ್ದು, ಬಳಿಕ (Portugal) ಬಿಯರ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿರುವ ಆಘಾತಕಾರಿ ಆರೋಪ ಕೇಳಿಬಂದಿದೆ.
ನಾಗ್ಪುರ ಮೂಲದ ಈ ಮಹಿಳೆ ಇನ್‌ಸ್ಟಾಗ್ರಾಮ್ ಮೂಲಕ ಪುಣೆಯಲ್ಲಿರುವ ‘ವಿ ಮೈಗ್ರೇಟ್’ ಎಂಬ ಸಲಹಾ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಪೋರ್ಚುಗಲ್‌ನಲ್ಲಿ ಕ್ಯಾಷಿಯರ್ ಕೆಲಸ ಕೊಡಿಸುವುದಾಗಿ ಏಜೆನ್ಸಿಯವರು ಭರವಸೆ ನೀಡಿದ್ದರು. ತಿಂಗಳಿಗೆ 1.5 ಲಕ್ಷ ರೂ. ಸಂಬಳ ಹಾಗೂ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡಬೇಕು ಎಂದು ಹೇಳಿದ್ದರು. ಅವರ ಮಾತು ನಂಬಿದ ಮಹಿಳೆ ವೀಸಾ ಮತ್ತು ಇತರ ದಾಖಲೆಗಳ ಹೆಸರಿನಲ್ಲಿ ಹಂತ ಹಂತವಾಗಿ ಸುಮಾರು 11 ಲಕ್ಷ ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆ ಪೋರ್ಚುಗಲ್‌ಗೆ ತಲುಪಿದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಏಜೆಂಟರು ಆಕೆಯ ಪಾಸ್‌ಪೋರ್ಟ್ ಕಸಿದುಕೊಂಡು ಎರಡು ದಿನಗಳ ಕಾಲ ಕೋಣೆಯಲ್ಲಿ ಇರಿಸಿದ್ದಾರೆ. ಬಳಿಕ ಮಹಿಳೆಯನ್ನು ಬಿಯರ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದಾರೆ. ಅಲ್ಲಿ ಆಕೆಯನ್ನು ಕೆಲಸ ಮಾಡಲು ಒತ್ತಾಯಿಸಲಾಗಿದ್ದು, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪಾಸ್‌ಪೋರ್ಟ್ ವಾಪಸ್ ನೀಡುವಂತೆ ಮಹಿಳೆ ಕೇಳಿದಾಗ, ಆರೋಪಿಗಳು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದನ್ನೂಓದಿ: ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಮೇಳಕ್ಕೆ ಈಶ್ವರ ಖಂಡ್ರೆ ಸೂಚನೆ
ತಪ್ಪಿಸಿಕೊಂಡು ಭಾರತಕ್ಕೆ ವಾಪಸ್
ಸುಮಾರು ಒಂದು ತಿಂಗಳು ಹಿಂಸೆ ಅನುಭವಿಸಿದ ಬಳಿಕ ಮಹಿಳೆ ಅಲ್ಲಿಂದ ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿದ್ದಾಳೆ. ಮೊದಲು ಬಸ್‌ನಲ್ಲಿ ಲಿಸ್ಬನ್‌ಗೆ ತೆರಳಿ, ಬಳಿಕ ಮ್ಯಾಡ್ರಿಡ್‌ಗೆ ತಲುಪಿದ್ದಾಳೆ. ನಂತರ ದೋಹಾ ಮೂಲಕ ಭಾರತಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾಳೆ. ಆದರೆ, ಭಾರತಕ್ಕೆ ಬಂದ ನಂತರವೂ ಆರೋಪಿಗಳ ಕಿರುಕುಳ ನಿಲ್ಲಲಿಲ್ಲ. ಮಾಲ್ಟಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮತ್ತೆ 3 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಲು ಮಹಿಳೆ ನಿರಾಕರಿಸಿದಾಗ, ಆಕೆಯ ಪತಿಯನ್ನು ಕೊಲೆ ಮಾಡುವುದಾಗಿ ಹಾಗೂ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಗೊಂಡ ಮಹಿಳೆ ಪುಣೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ.
ಈ ಸಂಬಂಧ ‘ವಿ ಮೈಗ್ರೇಟ್’ ಸಂಸ್ಥೆಯ ನಿರ್ವಾಹಕರು ಸೇರಿದಂತೆ ಎಂಟು ಆರೋಪಿಗಳ ವಿರುದ್ಧ ಮಾನವ ಕಳ್ಳಸಾಗಣೆ, ವಂಚನೆ ಹಾಗೂ ಸುಲಿಗೆ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ನವದೆಹಲಿ: ವಿದೇಶದಲ್ಲಿ ಉತ್ತಮ ಸಂಬಳದ ಉದ್ಯೋಗ ಕೊಡಿಸುವುದಾಗಿ ನಂಬಿಸಿ 28 ವರ್ಷದ ಭಾರತೀಯ ಮಹಿಳೆಯನ್ನು ಪೋರ್ಚುಗಲ್‌ಗೆ ಕರೆದೊಯ್ದು, ಬಳಿಕ ಬಿಯರ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿರುವ ಆಘಾತಕಾರಿ ಆರೋಪ ಕೇಳಿಬಂದಿದೆ.
ನಾಗ್ಪುರ ಮೂಲದ ಈ ಮಹಿಳೆ ಇನ್‌ಸ್ಟಾಗ್ರಾಮ್ ಮೂಲಕ ಪುಣೆಯಲ್ಲಿರುವ ‘ವಿ ಮೈಗ್ರೇಟ್’ ಎಂಬ ಸಲಹಾ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಪೋರ್ಚುಗಲ್‌ನಲ್ಲಿ ಕ್ಯಾಷಿಯರ್ ಕೆಲಸ ಕೊಡಿಸುವುದಾಗಿ ಏಜೆನ್ಸಿಯವರು ಭರವಸೆ ನೀಡಿದ್ದರು. ತಿಂಗಳಿಗೆ 1.5 ಲಕ್ಷ ರೂ. ಸಂಬಳ ಹಾಗೂ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡಬೇಕು ಎಂದು ಹೇಳಿದ್ದರು. ಅವರ ಮಾತು ನಂಬಿದ ಮಹಿಳೆ ವೀಸಾ ಮತ್ತು ಇತರ ದಾಖಲೆಗಳ ಹೆಸರಿನಲ್ಲಿ ಹಂತ ಹಂತವಾಗಿ ಸುಮಾರು 11 ಲಕ್ಷ ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆ ಪೋರ್ಚುಗಲ್‌ಗೆ ತಲುಪಿದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಏಜೆಂಟರು ಆಕೆಯ ಪಾಸ್‌ಪೋರ್ಟ್ ಕಸಿದುಕೊಂಡು ಎರಡು ದಿನಗಳ ಕಾಲ ಕೋಣೆಯಲ್ಲಿ ಇರಿಸಿದ್ದಾರೆ. ಬಳಿಕ ಮಹಿಳೆಯನ್ನು ಬಿಯರ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದಾರೆ. ಅಲ್ಲಿ ಆಕೆಯನ್ನು ಕೆಲಸ ಮಾಡಲು ಒತ್ತಾಯಿಸಲಾಗಿದ್ದು, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪಾಸ್‌ಪೋರ್ಟ್ ವಾಪಸ್ ನೀಡುವಂತೆ ಮಹಿಳೆ ಕೇಳಿದಾಗ, ಆರೋಪಿಗಳು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ತಪ್ಪಿಸಿಕೊಂಡು ಭಾರತಕ್ಕೆ ವಾಪಸ್
ಸುಮಾರು ಒಂದು ತಿಂಗಳು ಹಿಂಸೆ ಅನುಭವಿಸಿದ ಬಳಿಕ ಮಹಿಳೆ ಅಲ್ಲಿಂದ ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿದ್ದಾಳೆ. ಮೊದಲು ಬಸ್‌ನಲ್ಲಿ ಲಿಸ್ಬನ್‌ಗೆ ತೆರಳಿ, ಬಳಿಕ ಮ್ಯಾಡ್ರಿಡ್‌ಗೆ ತಲುಪಿದ್ದಾಳೆ. ನಂತರ ದೋಹಾ ಮೂಲಕ ಭಾರತಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾಳೆ. ಆದರೆ, ಭಾರತಕ್ಕೆ ಬಂದ ನಂತರವೂ ಆರೋಪಿಗಳ ಕಿರುಕುಳ ನಿಲ್ಲಲಿಲ್ಲ. ಮಾಲ್ಟಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮತ್ತೆ 3 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಲು ಮಹಿಳೆ ನಿರಾಕರಿಸಿದಾಗ, ಆಕೆಯ ಪತಿಯನ್ನು ಕೊಲೆ ಮಾಡುವುದಾಗಿ ಹಾಗೂ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಗೊಂಡ ಮಹಿಳೆ ಪುಣೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಇದನ್ನೂ ಓದಿ: PUBLiC TV Impact | ಕೆಎಎಸ್ ಪರೀಕ್ಷೆಯಲ್ಲಿ 25 ಮಾರ್ಕ್ಸ್‌ಗೆ 1.5 ಕೋಟಿ ಡಿಮ್ಯಾಂಡ್ ಆರೋಪ – FIR ದಾಖಲು
ಈ ಸಂಬಂಧ ‘ವಿ ಮೈಗ್ರೇಟ್’ ಸಂಸ್ಥೆಯ ನಿರ್ವಾಹಕರು ಸೇರಿದಂತೆ ಎಂಟು ಆರೋಪಿಗಳ ವಿರುದ್ಧ ಮಾನವ ಕಳ್ಳಸಾಗಣೆ, ವಂಚನೆ ಹಾಗೂ ಸುಲಿಗೆ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.