ಬೆಂಗಳೂರು: ಪಬ್ಲಿಕ್ ಟಿವಿ (Public TV) ಪ್ರಸ್ತುತಿಯ ವಿದ್ಯಾಮಂದಿರ (Vidhya Mandira) ‘ಪಿಜಿ ಶೈಕ್ಷಣಿಕ ಮತ್ತು ಉದ್ಯೋಗ ಮೇಳ’ದಲ್ಲಿ ಕೆಲಸ ಸಿಕ್ಕವರಿಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಅವರು ಆಫರ್ ಲೆಟರ್ ವಿತರಣೆ ಮಾಡಿದರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮೇಳದಲ್ಲಿ ಅಕ್‌ನಾಲೆಡ್ಜರ್ ಫಸ್ಟ್ ಹಾಗೂ ಅನ್ನಮೇಟಾ ಐಓಟಿ ಕಂಪನಿಯಿಂದ ಐವರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಅನುಷಾ- (ವಾರ್ಷಿಕ ಪ್ಯಾಕೇಜ್- 4.5 ಲಕ್ಷ), ಇಂದ್ರನಲ್ ಚಕ್ರವರ್ತಿ (4.5 ಲಕ್ಷ), ಶಂಶಾಕ್- (3.36 ಲಕ್ಷ), ಮೇಘನಾ- (3.36 ಲಕ್ಷ), ಅನುಷಾ ಗೌಡ- (3.6 ಲಕ್ಷ) ಅವರಿಗೆ ಆಫರ್ ಲೆಟರ್ ನೀಡಲಾಯಿತು. ಇದನ್ನೂ ಓದಿ: ಕೌಶಲಗಳನ್ನು ಪಕ್ವ ಮಾಡಿಕೊಳ್ಳಲು, ಬದುಕು ಕಟ್ಟಿಕೊಳ್ಳಲು ಉನ್ನತ ಶಿಕ್ಷಣ ಬೇಕು: ಹೆಚ್.ಆರ್.ರಂಗನಾಥ್


ಐವರು ಅಭ್ಯರ್ಥಿಗಳು ಉದ್ಯೋಗ ಪಡೆದು ತಮ್ಮ ಅನುಭವ ಹಂಚಿಕೊಂಡರು. ಇದೇ ವೇಳೆ, ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದರು. ಪಬ್ಲಿಕ್ ಟಿವಿಯ ಶೈಕ್ಷಣಿಕ ಹಾಗೂ ಉದ್ಯೋಗ ಮೇಳಕ್ಕೆ ಬನ್ನಿ.. ಉದ್ಯೋಗ ಅವಕಾಶಗಳನ್ನ ಪಡೆಯಿರಿ ಎಂದು ಇತರರಿಗೆ ಸಲಹೆ ನೀಡಿದರು.
ಲಕ್ಕಿ ಡಿಪ್‌ನಲ್ಲಿ ಲ್ಯಾಪ್‌ಟಾಪ್ ಗೆದ್ದ ಆರತಿ
ಪಿಜಿ ಶೈಕ್ಷಣಿಕ ಮೇಳದಲ್ಲಿ ಶನಿವಾರ ಬೆಳಗ್ಗೆ 9 ರಿಂದ 11 ಗಂಟೆಯೊಳಗೆ ನೇರ ನೋಂದಣಿ ಮಾಡಿದವರಿಗೆ ಲಕ್ಕಿ ಡಿಪ್ ಮೂಲಕ ಲ್ಯಾಪ್‌ಟಾಪ್ ಗೆಲ್ಲುವ ಅವಕಾಶ ಕಲ್ಪಿಸಲಾಗಿತ್ತು. ಅದೃಷ್ಟ ಪರೀಕ್ಷೆಗೆ ಇಳಿದಿದ್ದ ವಿದ್ಯಾರ್ಥಿಗಳ ಪೈಕಿ ಆರತಿ ಎಂಬವರು ಗೆದ್ದಿದ್ದಾರೆ. ಲಕ್ಕಿ ಡಿಪ್‌ನಲ್ಲಿ ಆರತಿ ಅವರಿಗೆ ಲ್ಯಾಪ್‌ಟಾಪ್ ಒಲಿದುಬಂದಿದೆ. ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ವಿದ್ಯಾಮಂದಿರ; ಪಿಜಿ ಶೈಕ್ಷಣಿಕ & ಉದ್ಯೋಗ ಮೇಳಕ್ಕೆ ಅದ್ದೂರಿ ಚಾಲನೆ

