ಬಳ್ಳಾರಿ: ಮೈನಿಂಗ್ ಲಾರಿ ಹರಿದು (Accident) ಇಬ್ಬರು ಪಾದಾಚಾರಿಗಳು ಸಾವನ್ನಪ್ಪಿದ ಘಟನೆ ಸಂಡೂರು ತಾಲೂಕಿನ ವೆಂಕಟಗಿರಿ ಗ್ರಾಮದ ಬಳಿ ನಡೆದಿದೆ.
ಹೊಸಪೇಟೆ (Hospet) ಮೂಲದ ಕುಮಾರ್ (34) ಹಾಗೂ ಮಂಜುನಾಥ (28) ಅಪಘಾತದಲ್ಲಿ ಬಲಿಯಾದ ದುರ್ದೈವಿಗಳು. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಹಿಂಬದಿಯಿಂದ ಬಂದ ಲಾರಿ ಇಬ್ಬರಿಗೂ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರೂ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಸಚಿವ ಕೆ.ಜೆ ಜಾರ್ಜ್ ಬೆಂಗಾಲು ವಾಹನ ಅಪಘಾತ – ತಪ್ಪಿದ ಅನಾಹುತ
ಲಾರಿ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೇತುವೆಗೆ ಡಿಕ್ಕಿಯಾಗಿ ಮೂರು ಪಲ್ಟಿಯಾದ ಕಾರು – ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಗಂಭೀರ ಗಾಯ



