ಶಿವಮೊಗ್ಗ: ತಾಲೂಕಿನ (Shivamogga) ಚೊರಡಿ ಬಳಿ ಸೇತುವೆಯ (Choradi Bridge) ತಡೆಗೋಡೆಗೆ ಕಾರು ಡಿಕ್ಕಿಯಾಗಿ ಪಲ್ಟಿಯಾದ (Accident) ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಗಾಯಗೊಂಡಿದ್ದಾರೆ.
ಚೊರಡಿಯ ಕುಮುದ್ವತಿ ಸೇತುವೆ ಮೇಲೆ ಈ ಅಪಘಾತ ನಡೆದಿದೆ. ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರು ಸೇತುವೆಗೆ ಡಿಕ್ಕಿಯಾಗಿದೆ. ಬಳಿಕ ಮೂರು ಬಾರಿ ಪಲ್ಟಿಯಾಗಿದೆ. ಕಾರಿನಲ್ಲಿದ್ದ ಇಬ್ಬರು ಗಂಭಿರವಾಗಿ ಗಾಯಗೊಂಡಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಸ್ನೇಹಿತನ ಬರ್ತ್‌ಡೇ ಮುಗಿಸಿ ಬರುತ್ತಿದ್ದಾಗ ಥಾರ್ ಪಲ್ಟಿ – ಇಬ್ಬರು ದುರ್ಮರಣ, ಮೂವರು ಗಂಭೀರ
ಕಾರಿನಲ್ಲಿದ್ದವರೆಲ್ಲ ಸ್ನೇಹಿತರಾಗಿದ್ದು, ಬೆಂಗಳೂರಿನಿಂದ ಸಿಗಂದೂರಿಗೆ (Sigandur) ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಾಳುಗಳು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ. ಇದನ್ನೂ ಓದಿ: ಕಾರು ಅಪಘಾತದಲ್ಲಿ ಯುವತಿ ಸಾವು – ಬರ್ತ್‌ಡೇ ಆಚರಣೆಗೆ ಕರೆದು ರೇಪ್‌ಗೆ ಯತ್ನಿಸಿ ಕೊಲೆ ಆರೋಪ

