ಬಿಗ್ಬಾಸ್ ಮನೆಯಲ್ಲಿ ಬಿರುಸಿನ ಆಟ ಶುರುವಾಗಿದೆ. ಈಗಾಗ್ಲೇ 8 ಸ್ಪರ್ಧಿಗಳು ಬಿಗ್ಬಾಸ್ ಮನೆ ಪ್ರವೇಶಿಸಿದ್ದಾರೆ. ಇನ್ನುಳಿದ 8 ಸ್ಪರ್ಧಿಗಳು ವಿಮಾನದಲ್ಲೇ ಉಳಿಯುವಂತಾಗಿದೆ. ಮನೆಯೊಳಗೆ ಪ್ರವೇಶಿಸಿರುವ ಸ್ಪರ್ಧಿಗಳಿಗೆ ಭರ್ಜರಿ ಟಾಸ್ಕ್ ಶುರುವಾಗಿದ್ದು ಬಿಗ್ಬಾಸ್ ಎಲ್ಲರಿಗೂ ಡೈಮಂಡ್ ಬಾಕ್ಸ್ ನೀಡಿದ್ದಾರೆ. ಆದರೆ 8 ಸ್ಪರ್ಧಿಗಳಿಗೆ ನೀಡಿರುವ ಡೈಮಂಡ್ ಬಾಕ್ಸ್ನಲ್ಲಿ ಒಬ್ಬರ ಬಾಕ್ಸ್ನಲ್ಲಿ ಮಾತ್ರವೇ ಡೈಮಂಡ್ ಇದೆ. ಆದರೆ ಸಿಕ್ಕವರು ಎಲ್ಲರೊಂದಿಗೆ ಗೌಪ್ಯತೆ ಕಾಪಾಡಿಕೊಂಡು ಬಿಗ್ಬಾಸ್ನಿಂದ ಅಧಿಕೃತ ಸೂಚನೆ ಬರೋವರೆಗೂ ರಹಸ್ಯವಾಗಿ ಇರಿಸಿಕೊಂಡರೆ ನಾಮಿನೇಷನ್ನಿಂದ ಪಾರಾಗುತ್ತಾರೆ. ರಹಸ್ಯ ಕಾಪಾಡಿಕೊಳ್ಳದಿದ್ದರೆ ಆ ಸ್ಪರ್ಧಿ ನೇರವಾಗಿ ನಾಮಿನೇಟ್ ಆಗುತ್ತಾರೆ. ಹೀಗಾಗಿ ಇಂಥಹ ಮಹತ್ವದ ವಜ್ರ ಸ್ಪರ್ಧಿ ಗಗನ್ ಚಿನ್ನಪ್ಪ ಪಾಲಿಗೆ ಧಕ್ಕಿದೆ.
ಬಿಗ್ಬಾಸ್ ಮನೆಯಲ್ಲಿ ಇರುವ 8 ಸ್ಪರ್ಧಿಗಳಲ್ಲಿ ಡೈಮಂಡ್ ಇರುವ ಬಾಕ್ಸ್ ಯಾರ ಬಳಿ ಇದೆ ಅನ್ನೋ ಹುಡುಕಾಟ ಶುರುವಾಗಿದೆ. ಎಲ್ಲರೂ ಆಸಿಯಾ ಬಳಿಯೇ ಇದೆ ಎಂದು ಅನುಮಾನ ಪಡುತ್ತಿದ್ದರೆ ಗಗನ್ ಮಾತ್ರ ಭರ್ಜರಿ ಅಭಿನಯ ಮಾಡುತ್ತಾರೆ. ತಮ್ಮ ಬಳಿ ಇಲ್ಲ ಎಂಬಂತೆ ಇತರೇ ಸ್ಪರ್ಧಿಗಳ ಮುಂದೆ ತೋರಿಸಿಕೊಳ್ಳುತ್ತಾರೆ. ಆದರೆ ಅಸಲಿಯಾಗಿ ವಜ್ರ ಇದ್ದಿದ್ದು ಗಗನ್ ಬಳಿಯೇ.
ಹೀಗಾಗಿ ಆರಂಭದಲ್ಲೇ ಗಗನ್ ಮಿಂಚಿನ ಆಟ, ಯುಕ್ತಿಯಿಂದ ಗೆಲ್ಲುವ ಪ್ರಕ್ರಿಯೆ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದೆ. ಗಗನ್ ಕೂಡ ಶಕ್ತಿಯಿಂದಲ್ಲ ಕೆಲವೊಂದನ್ನ ಯುಕ್ತಿಯಿಂದ ಗೆಲ್ಲಬೇಕು ಎನ್ನುವ ಡೈಲಾಗ್ ಹೊಡೆದಿದ್ದಾರೆ. ಮೊದಲ ಟಾಸ್ಕ್ನಲ್ಲಿ ಗಗನ್ ಚಿನ್ನಪ್ಪ ಯಶಸ್ವಿಯಾಗಿ ಪೂರೈಸಿರುವ ಸುಳಿವನ್ನ ಬಿಗ್ಬಾಸ್ ಪ್ರೋಮೋದಲ್ಲಿ ನೋಡಬಹುದು.
