ನಟಿ ಕೃಷಿ ತಾಪಂಡ(Krishi Thapanda) ತಮ್ಮ ಆಪ್ತ ಗೆಳೆಯ ವೈಶಾಖ್(Vaishak) ಅವರ ಅಗಲಿಕೆಯ ಬಳಿಕ ತೀವ್ರ ದುಃಖದಲ್ಲಿದ್ದಾರೆ. ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ನಂತರ ಒಂದು ಭಾವುಕ ಪೋಸ್ಟ್ ಹಾಕಿದ್ದ ಕೃಷಿ, ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಂದು ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕೃಷಿ ತಾಪಂಡ ಅವರು ಒಂದೇ ಪೋಸ್ಟ್‌ನಲ್ಲಿ ಹಲವು ಫೋಟೋಗಳಿರುವ ಒಂದು ಬಂಚ್ ಹಂಚಿಕೊಂಡಿದ್ದಾರೆ. ತಾವು ಅನುಭವಿಸುತ್ತಿರುವ ಅಪಾರ ದುಃಖ ಹಾಗೂ ಕಣ್ಣೀರನ್ನು ಪ್ರತಿಬಿಂಬಿಸುವ ಫೋಟೋಗಳು, ಮನಸ್ಸಿಗೆ ಶಾಂತಿ ನೀಡುವಂತಹ ಪ್ರಕೃತಿಯ (Nature) ಸುಂದರ ದೃಶ್ಯಗಳ ಫೋಟೋಗಳಿವೆ.
View this post on Instagram
ಫೋಟೋಗಳ ಜೊತೆಗೆ ಕೃಷಿ ಬರೆದುಕೊಂಡಿರುವ ಸಾಲುಗಳು ನೆಟ್ಟಿಗರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಕೆಲವೊಮ್ಮೆ ಬದುಕು ಅತ್ಯಂತ ಕ್ರೂರವಾಗಿ ವರ್ತಿಸುತ್ತದೆ. ನಿನ್ನ ನೆನಪುಗಳು ಕ್ಷಣ ಕ್ಷಣಕ್ಕೂ ಕಾಡುತ್ತಿವೆ. ಈ ದುಃಖದಿಂದ ಹೊರಬರಲು ಪ್ರಕೃತಿಯ ಮಡಿಲಲ್ಲಿ ಶಾಂತಿ ಹುಡುಕಲು ಪ್ರಯತ್ನಿಸುತ್ತಿದ್ದೇನೆ. ಆದರೆ ನಿನ್ನ ಸ್ಥಾನವನ್ನು ತುಂಬಲು ಯಾವುದರಿಂದಲೂ ಸಾಧ್ಯವಿಲ್ಲ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಗೆಳೆಯ ಎಂದು ಬರೆದಿದ್ದಾರೆ. ಇದನ್ನೂ ಓದಿ: ಮೊದಲ ಬಾರಿ ಮಗನ ಫೋಟೋ ಹಂಚಿಕೊಂಡ ಡಾಲಿ ಧನಂಜಯ
ಗೆಳೆಯನ ಹಠಾತ್ ನಿರ್ಗಮನದಿಂದ ಕೃಷಿ ತಾಪಂಡ ಅವರು ಮಾನಸಿಕವಾಗಿ ತೀವ್ರ ನೊಂದಿದ್ದು, ಸದ್ಯ ಪ್ರಕೃತಿಯ ಮಧ್ಯೆ ಕಾಲ ಕಳೆಯುತ್ತಾ ತಮ್ಮನ್ನು ತಾವು ಸಮಾಧಾನ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಈ ಪೋಸ್ಟ್‌ನಿಂದ ಸ್ಪಷ್ಟವಾಗುತ್ತದೆ.
