ಗ್ಲ್ಯಾಸ್ಗೋ: ಕಾಮನ್‌ವೆಲ್ತ್ ಗೇಮ್ಸ್‌ನ(Commonwealth Games) ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಪದಕ ಭೇಟೆ ಮುಂದುವರಿದಿದೆ. ಮಹಿಳೆಯರ 53 ಕೆಜಿ ವಿಭಾಗದಲ್ಲಿ ಭಾರತದ ಜ್ಞಾನೇಶ್ವರಿ ಯಾದವ್ (Gyaneshwari Yadav) ಅತ್ಯದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಜ್ಞಾನೇಶ್ವರಿ ಯಾದವ್ ಒಟ್ಟು 199 ಕೆಜಿ ಭಾರ ಎತ್ತುವ ಮೂಲಕ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ(Silver) ತಮ್ಮದಾಗಿಸಿಕೊಂಡರು. ಇದು ಅವರ ಕ್ರೀಡಾ ಜೀವನದ ಅತ್ಯುತ್ತಮ ವೈಯಕ್ತಿಕ ಶ್ರೇಷ್ಟ ಸಾಧನೆಯಾಗಿದೆ.
Strength meets success! 💥
Gyaneshwari Yadav smashes her personal best with a total lift of 199kg to bring home 🥈 in the Women’s 53kg Weightlifting event. 🏋️
Watch Glasgow 2026, LIVE NOW exclusively on Sony Sports Network TV channels and Sony LIV.#SonySportsNetwork #SonyLIV… pic.twitter.com/WfQwuZrKTL
— Sony Sports Network (@SonySportsNetwk) July 27, 2026
ಸ್ನ್ಯಾಚ್ (Snatch) ವಿಭಾಗದಲ್ಲಿ 88 ಕೆಜಿ ಎತ್ತಿದ ಅವರು, ಕ್ಲೀನ್ ಅಂಡ್ ಜೆರ್ಕ್ (Clean and Jerk) ವಿಭಾಗದಲ್ಲಿ ಕ್ರಮವಾಗಿ 103 ಕೆಜಿ, 107 ಕೆಜಿ ಮತ್ತು 111 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ ಸ್ಥಿರ ಪ್ರದರ್ಶನ ತೋರಿದರು. ಇದನ್ನೂ ಓದಿ: Commonwealth Games | ವೇಟ್‌ಲಿಫ್ಟರ್ ರಾಜ ಮುತ್ತುಪಾಂಡಿಗೆ ಬೆಳ್ಳಿ ಪದಕ
