ಬೀದರ್: ದಸರಾ (Dasara) ಮೆರವಣಿಗೆ ವೇಳೆ ಹಿಂದೂ (Hindu) ಸಮುದಾಯದ ಗುಂಪೊಂದು ಮದರಸಾಗೆ (Madrasa) ನುಗ್ಗಿ ಪೂಜೆ ಮಾಡಿರುವ ಘಟನೆ ಬೀದರ್ (Bidar) ನಗರದ ಓಲ್ಡ್ ಸಿಟಿಯಲ್ಲಿರುವ ಐತಿಹಾಸಿಕಾ ಮೊಹಮ್ಮದ್ ಗವಾನ್ ಮದರಸಾದಲ್ಲಿ ನಡೆದಿದೆ.
Advertisement
ಪ್ರತಿ ವರ್ಷ ನವರಾತ್ರಿಯ ಮೆರವಣಿಗೆ ವೇಳೆ ಮೊಹಮ್ಮದ್ ಗವಾನ್ ಮದರಸಾದ ಹೊರಗಡೆ ಹಿಂದೂ ಸಮುದಾಯದವರು ದೇವಿಗೆ ಪೂಜೆ ಮಾಡುತ್ತಿದ್ದರು. ಆದರೆ ಈ ಬಾರಿ ನೇರವಾಗಿ ಮದರಸಾಕ್ಕೆ ನುಗ್ಗಿ, ಜೈ ಭವಾನಿ, ವಂದೇ ಮಾತರಂ, ಹಿಂದೂ ಧರ್ಮಕೀ ಜೈ ಎಂದು ಘೋಷಣೆ ಕೂಗಿ ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಮುರ್ಮುಗೆ ಚಮಚಾಗಿರಿ ಎಂದ ಕಾಂಗ್ರೆಸ್ ನಾಯಕ
Advertisement
ಘಟನೆಯ ಬಗ್ಗೆ ಮೊಹಮ್ಮದ್ ಶಫಿಯುದ್ದೀನ್ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮದರಸಾದ ಬೀಗ ಮುರಿದು, ಸೆಕ್ಯೂರಿಟಿ ಮೇಲೆ ಹಲ್ಲೆಗೆ ಯತ್ನ ಮಾಡಿ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ್ದಾರೆ ಎಂದು ದೂರು ನೀಡಿದ್ದಾರೆ.
Advertisement
Advertisement
ದೂರಿನ ಆಧಾರದ ಮೇಲೆ ಪೊಲೀಸರು 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ದಲಿತರ ವಿರೋಧಿ, ದ್ವೇಷ ಹಬ್ಬಿಸುವ ಸರ್ಕಾರ: ರಾಹುಲ್ ಗಾಂಧಿ