ಬೆಂಗಳೂರು: ಪಕ್ಷ ನಿಷ್ಠ, ಕಾಂಗ್ರೆಸ್ ಪಕ್ಷದ ಸಂಘಟನಾಕಾರ ಡಿ.ಕೆ.ಶಿವಕುಮಾರ್ (D.K.Shivakumar) ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾಳೆ ಸಂಜೆ 4:05ಕ್ಕೆ ಲೋಕಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ.
`ಶುಭಗಳಿಗೇನಾ ತಡೆಯೋಕೆ ಯಾರನ್ನೂ ಯಾರಿಂದಲೂ ತಡೆಯೋಕೆ ಸಾಧ್ಯ ಆಗಲ್ಲ. ಮಾಡೋ ಪ್ರಯತ್ನ ಮಾಡು ಫಲಾಫಲ ಭಗವಂತನಿಗೆ ಬಿಡು’ ಅಂತ ಇಷ್ಟು ವರ್ಷ ಕಾದ ಡಿಕೆಶಿಗೆ ನಾಳೆ ಅದೃಷ್ಟ ಕೂಡಿ ಬಂದಿದೆ. ಡಿಕೆಶಿ ಪ್ರಮಾಣ ವಚನಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಸಕಲ ಸಿದ್ಧತೆ ನಡೆದಿದೆ. ವೇದಿಕೆಯಲ್ಲಿ 20 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿ, ಫಾದರ್ ಹಾಗೂ ಮೌಲ್ವಿ ಸೇರಿದಂತೆ ಸರ್ವಧರ್ಮಗಳ 55 ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿದ್ದು, ಅವರ ಸಮ್ಮುಖದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಡಿಕೆಶಿ ಜೊತೆ ನಾಳೆ 14 ಶಾಸಕರು ಸಚಿವರಾಗಿ ಪ್ರಮಾಣವಚನ ಸಾಧ್ಯತೆ – ಯಾರಿಗೆ ಮಂತ್ರಿಗಿರಿ ಭಾಗ್ಯ?
ಯಾರ‍್ಯಾರಿಗೆ ಆಹ್ವಾನ?
ಡಿ.ಕೆ.ಶಿವಕುಮಾರ್ ಜೊತೆ 10ಕ್ಕೂ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ಈ ಪಟ್ಟಿ ಫೈನಲ್ ಆಗಬೇಕಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ವೇಣುಗೋಪಾಲ್, ಸುರ್ಜೇವಾಲ ಸೇರಿದಂತೆ ಹಲವು ಗಣ್ಯರಿಗೆ ಪ್ರಮಾಣವಚನಕ್ಕೆ ಆಹ್ವಾನ ನೀಡಲಾಗಿದೆ. ಈಗಾಗಲೇ ಕೇರಳ ಸಿಎಂ ಸತೀಶನ್ ಬೆಂಗಳೂರಿಗೆ ಬಂದಿದ್ದಾರೆ.
80ರ ದಶಕದಿಂದ ಸುದೀರ್ಘ ರಾಜಕೀಯ ಜೀವನ, ರಾಜಕಾರಣ ಆಳ-ಅಗಲದ ಅನುಭವ, ಐಟಿ-ಇಡಿ ತನಿಖೆ ಹಾಗೂ ಜೈಲುವಾಸದ ನಂತರ ಡಿಕೆಶಿ ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಿದ್ದಾರೆ. ಮುಂದಿನ 2 ವರ್ಷಗಳ ಕಾಲ ರಾಜ್ಯಭಾರ ಮಾಡಲಿದ್ದಾರೆ. ಇದನ್ನೂ ಓದಿ: ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ – ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಿಯೋಗ
ಜ್ಯೋತಿಷಿಗಳ ಪ್ರಕಾರ, ಡಿಕೆ ಪ್ರಮಾಣವಚನ ಸ್ವೀಕರಿಸುತ್ತಿರೋ ಗಳಿಗೆ ಅತ್ಯಂತ ಶಕ್ತಿಯಾಗಿದೆ. ಈ ಮಧ್ಯೆ, ಡಿಕೆಶಿಗೆ ಶುಭ ಕೋರುವ ಫ್ಲೆಕ್ಸ್ಗಳು ಹಾಗೂ ಬ್ಯಾನರ್‌ಗಳು ಎಲ್ಲೆಡೆ ರಾರಾಜಿಸುತ್ತಿದೆ. ಡಿಕೆಶಿ ಸ್ವಾಗತ ಕೋರುವ, ಶುಭಾಶಯ ತಿಳಿಸುವ ಬ್ಯಾನರ್‌ಗಳು ರಾರಾಜಿಸುತ್ತಿವೆ.
