ವಾಷಿಂಗ್ಟನ್: ಅಮೆರಿಕದ (America) ಜಾರ್ಜಿಯಾ ರಾಜ್ಯದ ಪ್ರೌಢಶಾಲಾ ಶಿಕ್ಷಕಿಯೊಬ್ಬಳು (US Teacher) ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಎರಡು ಬಾರಿ ಲೈಂಗಿಕ ಸಂಬಂಧ ಹೊಂದಿದ ಆರೋಪದಲ್ಲಿ ಅರೆಸ್ಟ್ ಆಗಿದ್ದಾರೆ.
25 ವರ್ಷದ ಮಾರಿಸ್ ನಿಕೋಲ್ಸ್‌ಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ಅಲೆಕ್ಸಾಂಡರ್ ಹೈಸ್ಕೂಲ್‌ನಲ್ಲಿ ಜೀವಶಾಸ್ತ್ರ ಶಿಕ್ಷಕಿ ಮತ್ತು ಶಾಲಾ ಫುಟ್‌ಬಾಲ್ ತಂಡದ ಕಾರ್ಯಾಚರಣೆ ಮ್ಯಾನೇಜರ್ ಆಗಿದ್ದಳು. ಇದನ್ನೂ ಓದಿ: ಕೆ.ಆರ್. ಪುರ ತ್ರಿವಳಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; 30 ಲಕ್ಷ ಸಾಲವೇ ಹತ್ಯೆಗೆ ಕಾರಣವಾಯ್ತಾ?
ನಿಕೋಲ್ಸ್ ಮೇ 3 ರಂದು ಎರಡನೇ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು. ಇತರ ಹಲವಾರು ವಿದ್ಯಾರ್ಥಿಗಳಿಗೆ ಅನುಚಿತ ಫೋಟೊಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದಾಳೆ. ಏಪ್ರಿಲ್ 23 ರಂದು ಶಾಲಾ ಕೋಣೆಯ ಕ್ಲೋಸೆಟ್‌ನಲ್ಲಿ ಮತ್ತು ನಂತರ ಮೇ 2 ರಂದು ವಾಹನದೊಳಗೆ ವಿದ್ಯಾರ್ಥಿಯೊಂದಿಗೆ ಎರಡು ಬಾರಿ ಲೈಂಗಿಕ ಸಂಬಂಧ ಹೊಂದಿದ್ದಳು.
ನಿಕೋಲ್ಸ್, ವಿದ್ಯಾರ್ಥಿ ಜೊತೆ ಲೈಂಗಿಕ ಸಂಬಂಧ ಹೊಂದಿರುವ ವೀಡಿಯೊ ಸೇರಿದಂತೆ ಹಲವಾರು ಅನುಚಿತ ಸಂದೇಶಗಳು ಸೋರಿಕೆಯಾಗಿವೆ. ಇವುಗಳನ್ನು ಇಟ್ಟುಕೊಂಡು ಕೆಲ ವಿದ್ಯಾರ್ಥಿಗಳು, ಉತ್ತಮ ಅಂಕಗಳಿಗಾಗಿ ಶಿಕ್ಷಕಿ ನಿಕೋಲ್ಸ್‌ಳನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾರೆಂಬ ಆರೋಪವೂ ಕೇಳಿಬಂದಿದೆ. ‘ನಮಗೆ ಉತ್ತಮ ಅಂಕ ಕೊಡಬೇಕು. ಇಲ್ಲದಿದ್ದರೆ ಓನ್ಲಿಫ್ಯಾನ್ಸ್ ಖಾತೆಯಿಂದ ವಿಡಿಯೋ ಹರಿಬಿಡುವುದಾಗಿ’ ಆಕೆಯನ್ನು ವಿದ್ಯಾರ್ಥಿಗಳು ಬೆದರಿಸಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾಯಿಲೆ ವಿಚಾರಕ್ಕೆ ಗಲಾಟೆ – ಪತ್ನಿಯ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ವೃದ್ಧ
ಪ್ರಸ್ತುತ ಆಕೆಯ ಮೇಲೆ ಸಾಕ್ಷ್ಯಗಳನ್ನು ತಿರುಚಿದ ಒಂದು ಆರೋಪ, ಮಕ್ಕಳ ಮೇಲಿನ ದೌರ್ಜನ್ಯ, ಉದ್ಯೋಗಿಯಿಂದ ಅನುಚಿತ ಲೈಂಗಿಕ ಸಂಪರ್ಕ ಮತ್ತು ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಹೊರಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
