– ಮಳೆ ಕೊರತೆ ನಡುವೆ ಕ್ಯಾತೆ ತೆಗೆದ ತಮಿಳುನಾಡು
ನವದೆಹಲಿ: ರಾಜ್ಯದಲ್ಲಿ (Karnataka) ಮುಂಗಾರು ಮಳೆ (Rain) ಕೊರತೆ ಎದುರಾಗಿದೆ. ಇದರ ನಡುವೆಯೂ ಕಾವೇರಿ ನೀರಿನ (Cauvery Water) ವಿಚಾರವಾಗಿ ತಮಿಳುನಾಡು ಕ್ಯಾತೆ ತೆಗೆದಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority) ಸಭೆಯಲ್ಲಿ ಜೂನ್ ತಿಂಗಳ ನೀರಿನ ಜೊತೆಗೆ ಜುಲೈನ 31.24 ಟಿಎಂಸಿ ನೀರು ಹರಿಸಲು ನಿರ್ದೇಶನ ನೀಡುವಂತೆ ತೀವ್ರ ಒತ್ತಡಹಾಕಿದೆ.
ಜೂನ್ ತಿಂಗಳಲ್ಲಿ 9.19 ಟಿಎಂಸಿ ನೀರು ಹರಿಸಬೇಕಿತ್ತು. ಈವರೆಗೂ 2.6 ಟಿಎಂಸಿ ನೀರು ಮಾತ್ರ ಹರಿಸಲಾಗಿದೆ. ಈವರೆಗೂ ನಾಲ್ಕು ಟಿಎಂಸಿ ನೀರು ಕಡಿಮೆ ಹರಿಸಿದೆ. ನಮ್ಮ ಜಲಾಶಯಗಳಲ್ಲಿ ನೀರಿಲ್ಲ ಎನ್ನುವ ಕರ್ನಾಟಕದ ವಾದ ಒಪ್ಪಲು ಸಾಧ್ಯವಿಲ್ಲ. ಫೆಬ್ರವರಿಯಿಂದ ಮೇ ವರೆಗೂ ಹೆಚ್ಚಿನ ನೀರು ಕರ್ನಾಟಕ ಬಳಕೆ ಮಾಡಿದೆ. ಹೀಗಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ ಎಂದು ತಮಿಳುನಾಡು ವಾದಿಸಿದೆ. ಇದನ್ನೂ ಓದಿ: ಕರ್ನಾಟಕ ಹೆಚ್ಚುವರಿ ಕಾವೇರಿ ನೀರನ್ನು ಮಾತ್ರ ಹರಿಸುತ್ತಿದೆ – ವಿಜಯ್ ಸರ್ಕಾರದ ಕ್ಯಾತೆ
ಇದರಿಂದಾಗಿ ಜೂನ್ ತಿಂಗಳ ನೀರಿನ ಜೊತೆಗೆ ಜುಲೈ ತಿಂಗಳ 31.24 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಿದೆ. ಸಭೆಯಲ್ಲಿ ತಮಿಳುನಾಡು, ಕರ್ನಾಟಕ, ಪುದುಚೇರಿ, ಕೇರಳದ ಪ್ರತಿನಿಧಿಗಳು ಭಾಗಿಯಾಗಿದ್ದರು.
ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆಯಾಗಿಲ್ಲ. ವಾಡಿಕೆಯಷ್ಟು ಮಳೆಯಾಗದ ಕಾರಣ ಡ್ಯಾಮ್‌ಗೆ ನೀರು ಬರುತ್ತಿಲ್ಲ. ಹಾಗಾಗಿ ಈಗ ನಮ್ಮ ಹತ್ತಿರ ನೀರಿಲ್ಲ ಎಂದು ಕರ್ನಾಟಕ ತಿಳಿಸಿದೆ. ಇದನ್ನೂ ಓದಿ: ಕರ್ನಾಟಕ ಹೆಚ್ಚುವರಿ ಕಾವೇರಿ ನೀರನ್ನು ಮಾತ್ರ ಹರಿಸುತ್ತಿದೆ – ವಿಜಯ್ ಸರ್ಕಾರದ ಕ್ಯಾತೆ
